ಬಿಗ್ ಬಾಸ್ ಶೋ ನಂತರ ಹೊಸ ಹೊಸ ಪಾತ್ರ, ಸಿನಿಮಾಗಳಲ್ಲಿ ಕಾರ್ತಿಕ್ ಜಯರಾಂ ಅಲಿಯಾಸ್ ಜೆಕೆ ಬ್ಯುಸಿಯಾಗಿದ್ದಾರೆ. 

ಸೋಶಿಯಲ್ ಮೀಡಿಯಾ ಸ್ಟಾರ್‌ ಆದ್ಲು 'ರಿಯಾಲಿಟಿ ಕಪಲ್‌' ಪ್ರಿನ್ಸೆಸ್!

‘ಪುಟ 109’ ಥ್ರಿಲ್ಲರ್ ಸಿನಿಮಾ ನಟನೆಗಾಗಿ ನೆದರ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ 2019 ನೇ ಸಾಲಿನ ನ್ಯೂ ವಿಶನ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಆ್ಯಕ್ಟರ್ ವಿಭಾಗಕ್ಕೆ ಜೆಕೆ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಈ ಅವಾರ್ಡ್ ಕಾರ್ಯಕ್ರಮ ಆ್ಯಂಸ್ಟರ್ ಡ್ಯಾಂ ನಲ್ಲಿ ಸೆ. 29 ರಂದು ನಡೆಯಲಿದೆ. 

ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಕ್ಕೆ, ಚಾಲೆಂಜಿಂಗ್ ಪಾತ್ರ ಕೊಟ್ಟಿದ್ದಕ್ಕೆ ದಯಾಳ್ ಸರ್ ಗೆ ಧನ್ಯವಾದಗಳು. ಜೊತೆಗೆ ನನ್ನ ಕೆಲಸವನ್ನು ಹೊಗಳಿ ಈ ಅವಾರ್ಡ್ ಗೆ ನಾಮನಿರ್ದೇಶನ ಮಾಡಿದ ಜೂರಿಗಳಿಗೂ ಥ್ಯಾಂಕ್ಸ್ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

“Puta 109” is a wonderful Crime thriller directed by Dayal Padmanabhan. Happy to share that I have been nominated for the Best Actor for Puta109 in the “New Vision International Film Festival awards” 2019 which will be held in Netherlands, Amsterdam on the 26th Sept 2019. I thank the Jury of NVIFF for appreciating my work and nominating for Best Actor Award. I thank Dayal sir for giving me an opportunity to play such a challenging role. Also thank the entire team of Puta 109. ☺️ Love u all Cheers Jk #bollywood #sandalwood #kannadamovies #movies #films #jkfans #jkfanclub #jkfanclubforever #pushpaihatetears #bhojpurimovies #ashwininakshatra #motivation #inspiration #workout #gym #bollywood #fitness #goldsgym #lotussportaandfitness #vriddhifitnessandwellness #silkymahajan #bodybuilding #bodytransformation #health #fitindia #destiny #lawofattraction #god @yogessssh @krushna30 @anusmritisarkarofficial @dinkar.kapoor Bangalore Times The Times of India #maaligai Sanjay Jain Shammy Choraria @jfit47 @colorskannadaofficial #aakaralarathri #fitness #puta109

A post shared by Karthik Jayaram (@karthik.jayaram) on Jun 21, 2019 at 8:32pm PDT


ಪುಟ 109 ಕ್ರೈಂ ಆಧಾರಿತ ಥ್ರಿಲ್ಲಿಂಗ್ ಚಿತ್ರವಾಗಿದ್ದು ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದಾರೆ. ಜೆಕೆ, ನವೀನ್ ಕೃಷ್ಣ, ವೈಷ್ಣವಿ ಚಂದ್ರನ್, ಅನುಪಮಾ ಗೌಡ ನಟಿಸಿದ್ದಾರೆ. 

ರೀಲ್ ಅಲ್ಲ ರಿಯಲ್...: ಬಿಗ್‌ಬಾಸ್‌ ಮನೆಯಿಂದಲೇ ಸ್ಪರ್ಧಿ ಅರೆಸ್ಟ್!

ಏನಿದು ಅವಾರ್ಡ್? 

ಈ ಅವಾರ್ಡನ್ನು ಪ್ರತಿವರ್ಷ ಕೊಡಲಾಗುತ್ತದೆ. ಇದೊಂದು ಪ್ರತಿಷ್ಠಿತ ಅವಾರ್ಡ್ ಆಗಿದ್ದು ಶಾರ್ಟ್ ಸಿನಿಮಾಗಳನ್ನು, ಸ್ವಂತ ಸಿನಿಮಾಗಳನ್ನು ಪ್ರೋತ್ಸಾಹಿಸುವುದಕ್ಕೆ ಕೊಡಲಾಗುತ್ತದೆ. ಪ್ರಪಂಚದ ಬೇರೆ ಬೇರೆ ಭಾಷೆಗಳಿಂದ ಸಿನಿಮಾಗಳನ್ನು ಆಹ್ವಾನಿಸಲಾಗುತ್ತದೆ.