ಮೈಸೂರು(ಫೆ. 03) ಅದ್ಭುತ ಚಿತ್ರ ಎಂದು ಹೇಳಿ ಹಣ ಕಳಿಸಿದ್ದ ಅಭಿಮಾನಿಯನ್ನು ನಟ, ನಿರ್ದೇಶಕ ರಿಷಬ್‍ ಶೆಟ್ಟಿ ಭೇಟಿಯಾಗಿದ್ದು, ಅಪರೂಪದ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.

ಸಹಿಪ್ರಾ ಶಾಲೆ ಕಾಸರಗೋಡು ಚಿತ್ರವನ್ನು ಕೊಂಡಾಡಿದ್ದ ಅಭಿಮಾನಿ ಭರತ್ ರಾಮಸ್ವಾಮಿಯನ್ನು ಭೇಟಿ ಮಾಡಿ ಮಾತನಾಡಿಸಿದ್ದಾರೆ. ಮೈಸೂರಿನ ಅಂಬೇಡ್ಕರ್ ರಸ್ತೆಯಲ್ಲಿ ಭರತ್ ರಾಮಸ್ವಾಮಿ ನಡೆಸುತ್ತಿರುವ ಸಮಾನತೆ ಪ್ರಕಾಶನ ಸಂಸ್ಥೆಗೆ ಭೇಟಿ ನೀಡಿ, ಪತ್ರ ಹಾಗೂ ಹಣ ಕಳುಹಿಸಿದ್ದಕ್ಕೆ ರಿಷಬ್ ಧನ್ಯವಾದ ತಿಳಿಸಿದ್ದಾರೆ.

ಶೆಟ್ಟರಿಗೆ ಸ್ವರ್ಣ ಕಮಲ, ಶುಭಾಶಯಗಳ ಮಹಾಪೂರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನೋಡಿ 200 ರೂ. ಕಳುಹಿಸಿದ್ದ ಅಭಿಮಾನಿ ಭರತ್ ರಾಮಸ್ವಾಮಿರನ್ನ ಭೇಟಿ ಮಾಡಬೇಕು ಅಂತ ಯೋಚಿಸಿದ್ದೆ. ಈ ದಿನ ಅವರನ್ನು ಮಾತನಾಡಿಸಿದೆ ಎಂದು ಅಭಿಮಾನಿಗೆ ಧನ್ಯವಾದ ತಿಳಿಸಿದರು.

2018 ರಲ್ಲಿ ಬಿಡುಗಡೆಯಾದ ಚಿತ್ರ ಕನ್ನಡಿಗರಿಂದ ಭಾರೀ ಪ್ರಶಂಸೆಗೆ ಒಳಗಾಗಿತ್ತು. ಹಿರಿಯ ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರದ ತೂಕ ಮತ್ತಷ್ಟು ಹೆಚ್ಚು ಮಾಡಿದ್ದರು.