ಮುಂಬೈ[ಜ.14]: ಮುನ್ನಾ ಭಾಯ್ ಸರಣಿ ಚಿತ್ರಗಳು, 3 ಈಡಿಯಟ್ಸ್, ಪೀಕೆಯಂತ ಸೂಪರ್ ಹಿಟ್ ಚಿತ್ರಗಳ ನಿರ್ದೆಶಕರಾದ ರಾಜ್‌ಕುಮಾರ್ ಹಿರಾನಿ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಹಿರಾನಿ ತಳ್ಳಿ ಹಾಕಿದ್ದಾರೆ.

ನಟ ಸಂಜಯ್‌ದತ್ ಜೀವನ ಆಧರಿಸಿ ನಿರ್ಮಾಣವಾದ ಸಂಜು ಚಿತ್ರದ ವೇಳೆ ಚಿತ್ರೀಕರಣದ ವೇಳೆ ಹಿರಾನಿ , ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂಜು ಚಿತ್ರದಲ್ಲಿ ಕೆಲಸ ಮಾಡಿದ ಮಹಿಳೆಯೊಬ್ಬರು ದೂರಿದ್ದಾರೆ. 2018ರ ಮಾರ್ಚ್‌ನಿಂದ ಸೆಪ್ಟೆಂಬರ್ ಅವಧಿ ಯೊಳಗೆ ಹಲವು ಬಾರಿ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

2018ರ ನವೆಂಬರ್ ವೇಳೆ ಈ ಕುರಿತು ವಿಸ್ತೃತವಾಗಿ ಉಲ್ಲೇಖಿಸಲಾದ ಇ-ಮೇಲ್ ಸಂದೇಶವೊಂದನ್ನು ಸಂಜು ಸಿನಿಮಾದ ಸಹ ನಿರ್ಮಾಪಕ ವಿಧು ವಿನೋದ್ ಛೋಪ್ರಾ ಅವರಿಗೂ ರವಾನಿಸಿದ್ದಾರೆ. ಆದರೆ, ಈ ಆರೋಪವು ಸಂಪೂರ್ಣ ಸುಳ್ಳು ಮತ್ತು ಸಮರ್ಥಿಸಿಕೊಳ್ಳಲಾಗದ್ದು ಎಂದು ಹಿರಾನಿ ಅವರು ತಮ್ಮ ವಿರುದ್ಧದ ಆರೋಪವನ್ನು ತಮ್ಮ ವಕೀಲರ ಮೂಲಕ ಅಲ್ಲಗೆಳೆದಿದ್ದಾರೆ.