ಮುಂಬೈ[ಜ. 25] ಮಾಡೆಲ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ತೆಗೆದುಕೊಂಡು ಹೋಗಿ ಬಿಸಾಡಿದ ಪ್ರಕರಣವೊಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿತ್ತು.  ಕೊಲೆಯಾದ ಮಾಡೆಲ್ 20 ವರ್ಷದ ಮಾನ್ಸಿ ದೀಕ್ಷಿತ್ ಹತ್ಯೆಯ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದರು.

ರಾಜಸ್ತಾನದ ಮಾನ್ಸಿ ದೀಕ್ಷಿತ್ ಮಾಡೆಲ್ ಆಗುವ ಕನಸು ಹೊತ್ತು ಮುಂಬೈಗೆ ಬಂದಿದ್ದಳು. ಸಿನಿಮಾ ಕ್ಷೇತ್ರದಲ್ಲಿಯೂ ಆಸಕ್ತಿ ಇದ್ದ ಮಾಡೆಲ್‌ ಮಾನ್ಸಿಯನ್ನು ಫೋಟೋಶೂಟ್ ಉದ್ದೇಶಕ್ಕೆ ಸೈಯದ್ ಮುಜಾಮಿಲ್ ಎಂಬ ಫೋಟೋಗ್ರಾಫರ್ ತನ್ನ ಮನೆಗೆ ಕರೆಸಿಕೊಂಡಿದ್ದ.

ಗ್ಲಾಮರಸ್ ಪ್ರಪಂಚದ ಹೊಸ ಭರವಸೆ ಸುಪ್ರಿಯಾ!

ಫೋಟೋಶೂಟ್ ನಂತರ ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದ. ಆದರೆ ಇದಕ್ಕೆ ಮಾಡೆಲ್‌ ಒಪ್ಪಿರಲಿಲ್ಲ. ನಂತರ ಕೋಪಗೊಂಡ ಸೈಯದ್ ಆಕೆಯನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ವಿವರ ದಾಖಲಿಸಿದ್ದಾರೆ.

ಕಳೆದ ಅಕ್ಟೋಬರ್ 15 ರಂದು ನಡೆದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಅಲ್ಲಿಂದ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಕೊಲೆಗೆ ಅಸಲಿ ಕಾರಣ ಪತ್ತೆಮಾಡಿದ್ದಾರೆ.