Asianet Suvarna News Asianet Suvarna News

ಸೂಪರ್ ಆಗಿದೆ ಈ ಹೊಸ ಜಾಹೀರಾತು; ನೋಡಿ, ಆನಂದಿಸಿ, ಹಂಚಿಕೊಳ್ಳಿ...

ದೇಶದಲ್ಲಿ ಪ್ರಜಾತಂತ್ರದ ಹಬ್ಬ; ಮತದಾನದ ಜಾಗೃತಿಯು ಮುಖ್ಯ;ವೀಕ್ಷಕರಿಗೆ ಪವರ್‌ಫುಲ್ ಸಂದೇಶ ನೀಡುತ್ತಿದೆ ಹೊಸ ಜಾಹೀರಾತು  

Samsonite Ek Din Ki Chutti Ad on Voter Awareness Wins Heart
Author
Bengaluru, First Published Apr 12, 2019, 1:29 PM IST

ದೇಶಾದ್ಯಂತ ಚುನಾವಣೆ ಆರಂಭವಾಗಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದಿದೆ. ಎರಡನೇ ಹಂತದ ಚುನಾವಣೆ ಎ.18ರಂದು ನಡೆಯಲಿದೆ.

ಈಗಲೂ ಮತದಾನದ  ಬಗ್ಗೆ ಅಸಡ್ಡೆ ತೊರುವ ಕೆಲಮಂದಿಯಿದ್ದಾರೆ. ಮತದಾನ ಮಾಡುವ ಎಲ್ಲಾ ವ್ಯವಸ್ಥೆಯಿದ್ದರೂ, ರಜಾದಿನವನ್ನು ಮೋಜು-ಮಸ್ತಿ, ಪ್ರವಾಸ ಮಾಡಿ ಕಳೆಯುವವರಿದ್ದಾರೆ.

ಮತದಾನದ ಬಗ್ಗೆ ಜಾಗೃತಿ ಸಮಯದ ಬೇಡಿಕೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ, ಸರ್ಕಾರ, ಹಾಗೂ ಖಾಸಗಿ ಸಂಸ್ಥೆಗಳು ಕೂಡಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ.

ವಿಭಿನ್ನವಾದ ಜಾಹೀರಾತುಗಳಿಂದ ವೀಕ್ಷಕರ ಮನಸೂರೆಗೊಳಿಸುವ ಸ್ಯಾಮ್ಸೊನೈಟ್, ಇದೀಗ ಹೊಸ ಜಾಹೀರಾತೊಂದನ್ನು ಬಿಡುಗಡೆಮಾಡಿದೆ. "EkDinKiChutti" (ಒಂದು ದಿನದ ರಜೆ) ಎಂಬ ಶೀರ್ಷಿಕೆಯೊಂದಿಗೆ ಹೊರತರಲಾದ ಈ ವಿಡಿಯೋ ನೀವೂ ನೋಡಿ, ಆನಂದಿಸಿ, ಇತರರೊಂದಿಗೂ ಹಂಚಿಕೊಳ್ಳಿ....

 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios