Asianet Suvarna News Asianet Suvarna News

ಮೊದಲ ಹಂತದ ಮತದಾನ ಪೂರ್ಣ: ಆಂಧ್ರದಲ್ಲಿ ರಕ್ತಚರಿತ್ರೆ, ಉಳಿದೆಲ್ಲಕಡೆ ಕೂಲ್-ಕೂಲ್

18 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನದ ಮುಕ್ತಾವಾಗಿದ್ದು, ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗಾದ್ರೆ ಚುನಾವಣಾ ಆಯೋಗ ಹೇಳಿದಂತೆ ಯಾವ ರಾಜ್ಯದಲ್ಲಿ ಎಷ್ಟು ಮತದಾನವಾಗಿದೆ ಎನ್ನುವುದನ್ನು ನೋಡೋಣ ಬನ್ನಿ..

loksabha Poll 2019 Here is first phase voting percentage of 18 States 91 constituencies
Author
Bengaluru, First Published Apr 11, 2019, 9:46 PM IST

ನವದೆಹಲಿ, [ಏ.11]: 17ನೇ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಕ್ತಾವಾಗಿದೆ. ಆಂಧ್ರಪ್ರದೇಶದಲ್ಲಿ ಗಲಾಟೆ ಆಗಿರುವುದು ಬಿಟ್ಟರೇ ಇನ್ನುಳಿದ ಕಡೆ ಶಾಂತಿಯುತವಾಗಿ ಮತದಾನ ಮುಕ್ತಾವಾಗಿದೆ.

ಆಂಧ್ರಪ್ರದೇಶದಲ್ಲಿ ಭಾರಿ ವೈಎಸ್ ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಕಾರ್ಯಕರ್ತರ ನಡುವೆ ಭಾರೀ ಗಲಾಟೆ ಆಗಿದೆ. ಘಟನೆಯಲ್ಲಿ ಇಬ್ಬರು ಟಿಡಿಪಿ ಕಾರ್ಯಕರ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. 

ಇನ್ನು ಗುರುವಾರ ಸಂಜೆ 6 ಗಂಟೆಗೆ ಮತದಾನ ಮುಗಿದ ಬಳಿಕ  ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಉಮೇಶ್​ ಸಿನ್ಹಾ  ಸಂಕ್ಷಿಪ್ತ ಮಾಹಿತಿ ನೀಡಿದರು. 

ಶುರುವಾಯ್ತು ರಾಷ್ಟ್ರೀಯ ಹಬ್ಬ: ಇವಿಎಂ ಒಡೆದ ಆಂಧ್ರ ಅಭ್ಯರ್ಥಿ!

 'ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ' ಎಂದು ಸ್ಪಷ್ಟಪಡಿಸಿದರು. 

'ಅಂಡಮಾನ್​ ನಿಕೋಬಾರ್​ ದ್ವೀಪ ಸಮೂಹ ಮತ್ತು ಲಕ್ಷದ್ವೀಪ ಸೇರಿ ಎರಡು ಕೇಂದ್ರಾಡಳಿತ ಪ್ರದೇಶ ಹಾಗೂ 18 ರಾಜ್ಯಗಳು ಸೇರಿ 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಕ್ಕುಚಲಾಯಿಸಿದ್ದಕ್ಕಾಗಿ ಜನರಿಗೆ ಅಭಿನಂದನೆಗಳು’ ತಿಳಿಸಿದರು.

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪ ಸಮೂಹದ 1 ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಶೇ.70.67 ಮತದಾನವಾಗಿದೆ. ಆಂಧ್ರಪ್ರದೇಶದ 25 ಕ್ಷೇತ್ರಗಳಲ್ಲಿ ಶೇ.66, ಛತ್ತೀಸ್​ಗಢದ 1 ಕ್ಷೇತ್ರದಲ್ಲಿ ಶೇ.56, ತೆಲಂಗಾಣದ 17 ಕ್ಷೇತ್ರಗಳಲ್ಲಿ ಶೇ.60, ಉತ್ತರಾಖಂಡದ 5 ಕ್ಷೇತ್ರಗಳಲ್ಲಿ ಶೇ.57.85.
 
ಜಮ್ಮು ಮತ್ತು ಕಾಶ್ಮೀರದ 2 ಸೀಟುಗಳಿಗಾಗಿ ಶೇ.54.49, ಸಿಕ್ಕಿಂನ 1 ಕ್ಷೇತ್ರದಲ್ಲಿ ಶೇ.69, ಮಿಜೋರಾಂನ 1 ಕ್ಷೇತ್ರಕ್ಕೆ ಶೇ.60, ನಾಗಾಲ್ಯಾಂಡ್​ನ 1 ಕ್ಷೇತ್ರಕ್ಕಾಗಿ ಶೇ.78, ಮಣಿಪುರದ 1 ಕ್ಷೇತ್ರದಲ್ಲಿ ಶೇ.78.2, ತ್ರಿಪುರಾದ 1 ಕ್ಷೇತ್ರದಲ್ಲಿ ಶೇ.81.8, ಅಸ್ಸಾಂನ 5 ಕ್ಷೇತ್ರಗಳಲ್ಲಿ ಶೆ.68, ಪಶ್ಚಿಮ ಬಂಗಾಳದ 2 ಕ್ಷೇತ್ರಗಳಿಗಾಗಿ ಶೇ.81 ಮತದಾನವಾಗಿದೆ.

 ಅರುಣಾಚಲ ಪ್ರದೇಶದ 2 ಕ್ಷೇತ್ರಗಳಿಗಾಗಿ ಶೇ.66, ಬಿಹಾರದ 4 ಕ್ಷೇತ್ರಗಳಲ್ಲಿ ಶೇ.50, ಲಕ್ಷದ್ವೀಪದ 1 ಕ್ಷೇತ್ರಕ್ಕಾಗಿ ಶೇ.66, ಮಹಾರಾಷ್ಟ್ರದ 7 ಕ್ಷೇತ್ರಗಳಲ್ಲಿ ಶೇ.56, ಮೇಘಾಲಯದ 2 ಕ್ಷೇತ್ರಗಳಲ್ಲಿ ಶೇ.67.16, ಒಡಿಶಾದ 4 ಕ್ಷೇತ್ರಗಳಲ್ಲಿ ಶೇ.68 ಮತ್ತು ಉತ್ತರ ಪ್ರದೇಶದ 8 ಕ್ಷೇತ್ರಗಳಲ್ಲಿ ಶೇ.63.69 ಮತದಾನವಾಗಿದೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios