Asianet Suvarna News Asianet Suvarna News

ಅನೂರ್ಜಿತವಾಗುತ್ತಾ ಪ್ರಜ್ವಲ್ ರೇವಣ್ಣ ಚುನಾವಣಾ ಸ್ಪರ್ಧೆ ?

ಹಾಸನದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಪ್ರಜ್ವಲ್ ರೇವಣ್ಣ ಚುನಾವಣಾ ಸ್ಪರ್ಧೆಯೇ ಅನೂರ್ಜಿತವಾಗುವ ಸಾಧ್ಯತೆ ಇಲ್ಲಿದೆ. ಏನದು ಪ್ರಕರಣ ಇಲ್ಲಿದೆ ಮಾಹಿತಿ

Hassan JDS Candidate may face inquiry by Election Commission
Author
Bengaluru, First Published May 15, 2019, 1:16 PM IST

ಹಾಸನ : ಪ್ರಜ್ವಲ್  ಲೋಕಸಭಾ ಚುನಾವಣೆ  ಪ್ರಜ್ವಲ್ ರೇವಣ್ಣ ವಿರುದ್ದದ  ಸುಳ್ಳು ಅಫಿಡಿವಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಮ ಜಾರಿಯಾಗುವುದು ಖಚಿತ ಎಂದು ಹಾಸನ ಬಿಜೆಪಿ ಮುಖಂಡ ಎ.ಮಂಜು  ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ  ಎರಡು ಕಂಪನಿಯಲ್ಲಿ ಪಾರ್ಟ್ನರ್ ಶಿಪ್  ಹೊಂದಿದ್ದರು. ಆದರೆ ಅಫಿಡವಿಟ್ ನಲ್ಲಿ ಮರೆಮಾಡಿದ್ದಾರೆ.  ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೆವು. ಚುನಾವಣಾ ಆಯೋಗ ಸೆಕ್ಷನ್ 125 ಪ್ರಕಾರ ಸುಳ್ಳು ಪ್ರಮಾಣ ಪತ್ರ ನೀಡಿರುವ ಬಗ್ಗೆ ಕ್ರಮಕ್ಕೆ ನಿರ್ದೇಶನ ಮಾಡಿದೆ ಎಂದರರು.

ಪ್ರಜ್ವಲ್ ರೇವಣ್ಣ ವಿರುದ್ಧ ಮುಂದಿನ ಕ್ರಮ ವಹಿಸುವಂತೆ  ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಡಿಸಿ ಏನು ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡುತ್ತೇವೆ. ಒಂದು ವೇಳೆ ಶಿಸ್ತು ಕ್ರಮ ಕೈಗೊಂಡರೆ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದರು. 

'3 ಲಕ್ಷ ಲೀಡ್‌ನಲ್ಲಿ ಪ್ರಜ್ವಲ್‌ ಗೆಲುವು'

ಒಂದು ವೇಳೆ ಅವರ ವಿರುದ್ಧ ಭ್ರಷ್ಟಾಚಾರದಿಂದ ಬಂದಿರುವುದು ಸಾಬೀತಾದರೆ 6 ವರ್ಷ ಕಾಲ ಪ್ರಜ್ವಲ್ ಯಾವುದೇ ಚುನಾವಣೆಗೆ  ಸ್ಪರ್ಧಿಸುವಂತಿಲ್ಲ. ತಮ್ಮ ಪ್ರಕಾರ ಪ್ರಜ್ವಲ್ ವಿರುದ್ಧ ಕ್ರಮ ಜರುಗಿಸುವುದು ಖಚಿತ ಎಂದು ಎ.ಮಂಜು ಹೇಳಿದ್ದಾರೆ. 

ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ತಮ್ಮ ಆದಾಯದ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂದು ಮಂಜು ಹೇಳಿದರು. 

Follow Us:
Download App:
  • android
  • ios