Asianet Suvarna News Asianet Suvarna News

ಬಿಜೆಪಿ ಒಂದು ಮಾರ್ಕೆಂಟಿಗ್ ಕಂಪನಿ: ಪಕ್ಷ ತೊರೆದ ನಾಯಕಿ!

ಲೋಕಸಮರಕ್ಕೂ ಮುನ್ನ ಬಿಜೆಪಿಗೆ ಮತ್ತೊಂದು ಶಾಕ್| ನಾಯಕರ ಮೇಲೆ ಮುನಿಸಿಕೊಂಡು ಪಕ್ಷ ತೊರೆದ ನಾಯಕಿ| ಬಿಜೆಪಿ ಪಕ್ಷ ತೊರೆದ ಗುಜರಾತ್‌ನ ರೇಷ್ಮಾ ಪಟೇಲ್| ಬಿಜೆಪಿ ಒಂದು ಮಾರ್ಕೆಂಟಿಗ್ ಕಂಪನಿ ಎಂದ ರೇಷ್ಮಾ ಪಟೇಲ್| 

Gujrat Patidar Leader Reshma Patel Quits BJP
Author
Bengaluru, First Published Mar 16, 2019, 3:10 PM IST

ಗಾಂಧಿನಗರ(ಮಾ.16): ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಟಿದಾರ್ ಆಂದೋಲನದ ನಾಯಕಿ ಮತ್ತು ಬಿಜೆಪಿ ಮುಖಂಡೆ ರೇಷ್ಮಾ ಪಟೇಲ್‌ ಪಕ್ಷ ತೊರೆದಿದ್ದಾರೆ. 

ಬಿಜೆಪಿ ಒಂದು ಮಾರ್ಕೆಟಿಂಗ್‌ ಕಂಪೆನಿಯಾಗಿದ್ದು, ಈ ಪಕ್ಷದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ರೇಷ್ಮಾ ಪಟೇಲ್ ಹರಿಹಾಯ್ದಿದ್ದಾರೆ. 

ಗುಜರಾತ್‌ನ ಪಟೇಲ್‌ ಆಂದೋಲನದಲ್ಲಿ ಸಕ್ರೀಯರಾಗಿದ್ದ ರೇಷ್ಮಾ ಪಟೇಲ್ ನಂತರ ಬಿಜೆಪಿ ಸೇರಿದ್ದರು.  ಆದರೆ ಬಿಜೆಪಿ ಕೇವಲ ಭರವಸೆ ಕೊಡುವ ಪಕ್ಷವಾಗಿರುವುದರಿಂದ ತಮಗೆ ಭ್ರಮನಿರಸನ ಉಂಟಾಗಿದೆ ಎಂದು ರೇಷ್ಮಾ ಹೇಳಿದ್ದಾರೆ. 

ಪೋರಬಂದರ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿರುವ ರೇಷ್ಮಾ, ವಿಪಕ್ಷಗಳು ಒಂದಾಗಿ ತಮಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ಏಪ್ರಿಲ್ 11ರಿಂದ ಒಟ್ಟು 7 ಹಂತಗಳಲ್ಲಿ ಲೋಕಸಭೆಗೆ ದೇಶಾದ್ಯಂತ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಮೇ 23 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಣೆಯಾಗಲಿದೆ.

Follow Us:
Download App:
  • android
  • ios