ನವದೆಹಲಿ[ಮೇ.10]: ಮಾಜಿ ಪ್ರದಾನಿ ರಾಜೀವ್‌ ಗಾಂಧೀ ಹತ್ಯೆ ಹಿಂದೆ ಬಿಜೆಪಿ ಕೈವಾಡವಿತ್ತು ಎಂದು ಹಿರಿಯ ಕಾಂಗ್ರೆಸ್ಸಿಗ ಅಹ್ಮದ್‌ ಪಟೇಲ್‌ ಆರೋಪ ಮಾಡಿದ್ದಾರೆ.

ರಾಜೀವ್‌ ಭ್ರಷ್ಟಾಚಾರಿ ಎಂಬ ನಂ.1 ಪ್ರಧಾನಿ ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಪಟೇಕ್‌, ‘ಹುತಾತ್ಮ ಪ್ರಧಾನಿಗಳ ದೂರುವುದು ಹೇಡಿತನ. ರಾಜೀವ್‌ ಜೀವಕ್ಕೆ ಆಪತ್ತಿದೆ ಎಂಬ ಗುಪ್ತಚರ ವರದಿ ಇದ್ದಾಗಲೂ, ಬಿಜೆಪಿ ಸಾಥ್‌ ನೀಡಿದ ಕಾರಣಕ್ಕೆ ಅಂದಿನ ವಿ.ಪಿ.ಸಿಂಗ್‌ ಸರ್ಕಾರ ಸೂಕ್ತ ಭದ್ರತೆ ಕಲ್ಪಿಸಲಿಲ್ಲ. ಹಾಗಾದರೆ ಅವರ ಹತ್ಯೆಗೆ ಯಾರು ಹೊಣೆಗಾರರು. ಅವರ ಹತ್ಯೆಗೆ ಬಿಜೆಪಿಯ ದ್ವೇಷವೇ ಕಾರಣವಲ್ಲವೇ? ಹತ್ಯೆಗೆ ಅಗತ್ಯವಾದ ವಾತಾವರಣವನ್ನು ಬಿಜೆಪಿಯೇ ಕಲ್ಪಿಸಿತ್ತು ಎಂದು ದೂರಿದ್ದಾರೆ.

ಸದ್ಯ ಈ ಆರೋಪಕ್ಕೆ ಬಿಜೆಪಿ ನಾಯಕರು ಏನಂತಾರೆ ಕಾದು ನೋಡಬೇಕಷ್ಟೇ