Asianet Suvarna News Asianet Suvarna News

2ನೇ ಹಂತದ ಚುನಾವಣೆಯ 30 ನಾಮಪತ್ರ ತಿರಸ್ಕೃತ : ಯಾವ ಜಿಲ್ಲೆಯಲ್ಲಿ ಎಷ್ಟು?

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ 2ನೇ ಹಂತದ ಚುನಾವಣೆಯ ನಾಮಪತ್ರ ಪರಿಶೀಲನೆ ಪ್ರಕ್ರಿಯೆಯೂ ಮುಕ್ತಾಯವಾಗಿದೆ. ಈ ವೇಳೆ ರಾಜ್ಯದಲ್ಲಿ ಒಟ್ಟು 30 ನಾಮಪತ್ರಗಳು ತಿರಸ್ಕೃತಗೊಂಡಿವೆ. 

2nd phase LS polls Nominations of 30 candidates rejected
Author
Bengaluru, First Published Apr 6, 2019, 10:32 AM IST

ಬೆಂಗಳೂರು :  ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣಾ ಅಖಾಡದಲ್ಲಿ ಎಷ್ಟುಮಂದಿ ಸ್ಪರ್ಧಿಸಲಿದ್ದಾರೆ ಎಂಬುದರ ಸ್ಪಷ್ಟಚಿತ್ರಣ ಸೋಮವಾರ ಲಭ್ಯವಾಗಲಿದ್ದು, ನಾಮಪತ್ರ ಪರಿಶೀಲನೆ ವೇಳೆ ನಾನಾ ಕಾರಣಗಳಿಗಾಗಿ ಚುನಾವಣಾ ಆಯೋಗವು 30 ಉಮೇದುವಾರಿಕೆಗಳನ್ನು ತಿರಸ್ಕರಿಸಿದೆ. 288 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕೃತಗೊಂಡಿವೆ.

ಚುನಾವಣಾ ಕಣಕ್ಕೆ 318 ಅಭ್ಯರ್ಥಿಗಳಿಂದ 457 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅವುಗಳ ಪರಿಶೀಲನೆ ಕಾರ್ಯವು ಶುಕ್ರವಾರ ನಡೆಯಿತು. ನಾಮಪತ್ರಗಳ ಪರಿಶೀಲನೆ ವೇಳೆ ನಾನಾ ತಪ್ಪುಗಳು ಕಂಡುಬಂದ ಕಾರಣ 30 ನಾಮಪತ್ರಗಳನ್ನು ಆಯೋಗವು ತಿರಸ್ಕರಿಸಿದೆ. 288 ಅಭ್ಯರ್ಥಿಗಳ ಉಮೇದುವಾರಿಕೆಗಳನ್ನು ಆಯೋಗವು ಅಂಗೀಕರಿಸಿದೆ. ಸೋಮವಾರದವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಕಾಲಾವಕಾಶ ಇದೆ. ಸೋಮವಾರ ಸಂಜೆಯವರೆಗೆ ಆಯೋಗವು ಕಾದು ನೋಡಲಿದೆ. ಬಳಿಕ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ವಿವರವನ್ನು ಪ್ರಕಟಿಸಲಿದೆ.

ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಏ.23ರಂದು ಚುನಾವಣೆ ನಡೆಯಲಿದೆ. ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಮೇ 27ರಂದು ಚುನಾವಣಾ ಪ್ರಕ್ರಿಯೆಗಳು ಮುಕ್ತಾಯವಾಗಲಿದೆ. ಬೆಳಗಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ನಾಮಪತ್ರಗಳು ಅಂಗೀಕೃತಗೊಂಡಿದ್ದು, ಒಟ್ಟು 65 ನಾಮಪತ್ರಗಳು ಸ್ವೀಕೃತಗೊಂಡಿವೆ. ರಾಯಚೂರು ಕ್ಷೇತ್ರದಲ್ಲಿ 6 ನಾಮಪತ್ರಗಳು ಸ್ವೀಕೃತಗೊಳ್ಳುವ ಮೂಲಕ ಅತಿ ಕಡಿಮೆ ನಾಮಪತ್ರಗಳು ಅಂಗೀಕೃತಗೊಂಡ ಜಿಲ್ಲೆಯಾಗಿದೆ.

ಚಿಕ್ಕೋಡಿಯಲ್ಲಿ 1 ತಿರಸ್ಕೃತ, 13 ಅಂಗೀಕೃತಗೊಂಡಿವೆ. ಬೆಳಗಾವಿಯಲ್ಲಿ 2 ತಿರಸ್ಕೃತ, 65 ಅಂಗೀಕೃತ, ಬಾಗಲಕೋಟೆ ಕ್ಷೇತ್ರದಲ್ಲಿ ಯಾವುದೇ ನಾಮಪತ್ರಗಳು ತಿರಸ್ಕೃತಗೊಂಡಿಲ್ಲ. 17 ನಾಮಪತ್ರಗಳು ಅಂಗೀಕೃತಗೊಂಡಿವೆ. ವಿಜಯಪುರದಲ್ಲಿ 1 ತಿರಸ್ಕೃತ, 18 ಅಂಗೀಕೃತ, ಕಲಬುರಗಿಯಲ್ಲಿ 2 ತಿರಸ್ಕೃತ, 19 ಅಂಗೀಕೃತ, ರಾಯಚೂರು ಕ್ಷೇತ್ರದಲ್ಲಿ 2 ತಿರಸ್ಕೃತ, 6 ಅಂಗೀಕೃತ, ಬೀದರ್‌ನಲ್ಲಿ 8 ತಿರಸ್ಕೃತ, 27 ಅಂಗೀಕೃತ, ಕೊಪ್ಪಳದಲ್ಲಿ 1 ತಿರಸ್ಕೃತ, 16 ಅಂಗೀಕೃತ, ಬಳ್ಳಾರಿಯಲ್ಲಿ 2 ತಿರಸ್ಕೃತ, 12 ಅಂಗೀಕೃತ, ಹಾವೇರಿಯಲ್ಲಿ 3 ತಿರಸ್ಕೃತ, 16 ಅಂಗೀಕೃತ, ಧಾರವಾಡದಲ್ಲಿ 3 ತಿರಸ್ಕೃತ, 15 ಅಂಗೀಕೃತ, ಉತ್ತರ ಕನ್ನಡ ಕ್ಷೇತ್ರದಲ್ಲಿ 3 ತಿರಸ್ಕೃತ, 15 ಅಂಗೀಕೃತ, ದಾವಣಗೆರೆಯಲ್ಲಿ 2 ತಿರಸ್ಕೃತ, 26 ಅಂಗೀಕೃತ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಯಾವುದೇ ನಾಮಪತ್ರಗಳು ತಿರಸ್ಕೃತಗೊಂಡಿಲ್ಲ. 14 ನಾಮಪತ್ರಗಳು ಅಂಗೀಕೃತಗೊಂಡಿವೆ.

ಎರಡನೇ ಹಂತದ ಚುನಾವಣೆಯ ನಾಮಪತ್ರ ಹಿಂಪಡೆಯುವ ಕಾರ್ಯ ಮಾತ್ರ ಇದ್ದು, ಸೋಮವಾರ ಆ ಕಾರ್ಯವು ಮುಕ್ತಾಯವಾಗಲಿದೆ. ಬಳಿಕ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಅಬ್ಬರ ಜೋರಾಗಲಿದೆ. ರಾಜ್ಯದ 20 ಕ್ಷೇತ್ರದಲ್ಲಿಯೂ ರಾಜಕೀಯ ನಾಯಕರ ವಾಕ್ಸಮರ, ಪ್ರಚಾರ ತೀವ್ರಗೊಳ್ಳಲಿದೆ.

Follow Us:
Download App:
  • android
  • ios