ಬಿಯರಿಡ್ಜ್‌ [ಆ. 27]): ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಭಾನುವಾರ ರೋಚಕವಾಗಿ ಗೆಲುವು ಸಾಧಿಸಿದ್ದು, ಇಲ್ಲಿನ ಜಿ-7 ಶೃಂಗದಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಇನ್ನೂ ವಿಶೇಷವೆಂದರೆ ಇಂಗ್ಲೆಂಡ್‌ ಗೆಲುವಿನ ಸುದ್ದಿಯನ್ನು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸ್‌ನ್‌ ಅವರಿಗೆ ಮೊದಲು ತಿಳಿಸಿದ್ದೇ ಪ್ರಧಾನಿ ನರೇಂದ್ರ ಮೋದಿ.

ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

ಇಂಗ್ಲೆಂಡ್‌ ಗೆಲುವಿಗಾಗಿ ಬೋಬೊರಿಸ್‌ಗೆ ಮೋದಿ ಅಭಿನಂದನೆ ಸೂಚಿಸಿದರು. ಹೀಗಾಗಿ ಕುತೂಹಲ ತಾಳಲಾರದೇ ಬೋರಿಸ್‌ ಜಾನ್ಸನ್‌ ವಿರಾಮದ ಮಧ್ಯೆ ಐಪಾಡ್‌ ತರಿಸಿಕೊಂಡು ಪಂದ್ಯದ ಹೈಲೈಟ್ಸ್‌ಗಳನ್ನು ವೀಕ್ಷಿಸಿದರು.