Asianet Suvarna News Asianet Suvarna News

IPL ಗ್ರೌಂಡಲ್ಲಿ Unacademy board: ಇದರ ಹಿಂದಿದೆ ಯಶಸ್ಸಿನ ಕಥೆ...

ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯ ವೀಕ್ಷಿಸುವಾಗ ಎಲ್ಲೆಡೆ UNACADEMY ಎನ್ನು ಬೋರ್ಡ್ ನಿಮ್ಮ ಗಮನಕ್ಕೆ ಬಂದೇ ಬಂದಿರುತ್ತೆ. ಇದರ ಹಿಂದಿರುವ ಒಬ್ಬ ಯಶಸ್ವಿ ವೈದ್ಯ, ಐಎಎಸ್ ಆಫೀಸರ್ ಹಾಗೂ ನವೋದ್ಯಮಿ ಕಥೆ ನಾವು ಹೇಳ್ತೀವಿ ಕೇಳಿ. 

What  we have to do for success?
Author
Bengaluru, First Published Oct 9, 2020, 4:57 PM IST

ಸಾಧನೆಗೆ ಕೊನೆ ಅನ್ನೋದೆ ಇಲ್ಲ. ಒಂದಾದ ಮೇಲೊಂದು ದಾಖಲೆ ಬರೆಯೋರ ಬಗ್ಗೆ ಕೇಳಿರ್ತೀವಿ. ಸ್ಪರ್ಧಾತ್ಮಕ ಯುಗದಲ್ಲಿ ಬರುವ ಸವಾಲುಗಳನ್ನ ಮೆಟ್ಟಿ ನಿಂತು ಸಾಧನೆ ಮಾಡ್ತಾರೆ. ಇಂಥವರು ಅನೇಕರಿಗೆ ಮಾದರಿ ಕೂಡ. ನಮಗೆಲ್ಲಾ ಒಂದು ಸಾಧನೆ ಮಾಡೋದೆ ಕಷ್ಟ. ಉನ್ನತ ಶಿಕ್ಷಣದ ಪ್ರಮುಖ ಹಂತ ಪೂರೈಸಿ, ನೌಕರಿ ಹಿಡಿಯೋದೆ ನಮಗೆ ದೊಡ್ಡ ಸವಾಲು. ಅಂಥದ್ರಲ್ಲಿ ಇಲ್ಲೊಬ್ಬರು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿ, ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ನಿರೂಪಿಸಿದ್ದಾರೆ.

ಸಾಮಾನ್ಯವಾಗಿ ದೇಶದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆ ಐಎಎಸ್ ಅಥವಾ ಭಾರತೀಯ ಆಡಳಿತಾತ್ಮಕ ಸೇವಾ ಪರೀಕ್ಷೆ ಪಾಸ್ ಮಾಡಬೇಕು ಅನ್ನೋದು ಬಹುತೇಕರ ಕನಸ್ಸು. ಅಂಥವರಿಗೆಲ್ಲ ರೋಮನ್ ಸೈನಿ ಸ್ಫೂರ್ತಿ ಅಂದ್ರೆ ತಪ್ಪಾಗಲಾರದು. ರೋಮನ್ ಸೈನಿ ವೈದ್ಯ ವೃತ್ತಿಯಿಂದ ಐಎಎಸ್, ಬಳಿಕ ಉದ್ಯಮಿಯಾಗಿ ಹೊರಹೊಮ್ಮಿದ ಸಾಧನೆಯ ಗಣಿ. ಅವರ ಸಾಧನೆಯ ಹಾದಿಯೇ ರೋಚಕ. ತಮ್ಮ 22ನೇ ವಯಸ್ಸಿಗೆ ಐಎಎಸ್ ಪಾಸ್ ಮಾಡಿದವರು ಇವ್ರು. ಸೈನಿ ತನ್ನ 16ನೇ ವಯಸ್ಸಿಗೆ ವೈದ್ಯ ಪದವಿ ಪೂರೈಸಿದ್ದಾರೆ. 18ನೇ ವಯಸ್ಸಿಗೆ ಪ್ರತಿಷ್ಟಿತ ಮೆಡಿಕಲ್ ಜರ್ನಲ್ ನಲ್ಲಿ ಅವರ ಸಂಶೋಧನಾ ವರದಿ ಪ್ರಕಟವಾಗಿತ್ತು.

ಉದ್ಯೋಗ ನೀಡುವ ಫ್ಯಾಷನ್ ಡಿಸೈನ್ ಕೋರ್ಸುಗಳು

ರೋಮನ್ ಸೈನಿ, ಎಂಬಿಬಿಎಸ್ ಮುಗಿಸಿದ ಬಳಿಕ ಜ್ಯೂನಿಯರ್ ಮನೋವೈದ್ಯ ರಾಗಿ ವೃತ್ತಿ ಆರಂಭಿಸಿದರು. ಆದರೆ ಆರೇ ತಿಂಗಳ್ಲಲಿ ರಾಜಿನಾಮೆ ನೀಡಿದರು. 2014 ರಲ್ಲಿ ಯುಪಿಎಸ್ ಸಿ ಸಿವಿಲ್ ಪರೀಕ್ಷೆಗಳನ್ನ ಕ್ಲಿಯರ್ ಮಾಡಿದ್ರು. ಅತ್ಯಂತ ಕಿರಿಯ ಐಎಎಸ್ ಎನಿಸಿಕೊಂಡ ಇವರು, ಮಧ್ಯಪ್ರದೇಶಕ್ಕೆ ಕಲೆಕ್ಟರ್ ಆಗಿ ನೇಮಕಗೊಂಡರು. ಇದೀಗ ಆ ಕೆಲಸಕ್ಕೂ ಗುಡ್ ಬೈ ಹೇಳಿ, ಅನ್‌ಅಕಾಡೆಮಿ ಮೂಲಕ ಒಬ್ಬ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಏನಿದು ಅನ್ಅಕಾಡೆಮಿ?
ಇದೊಂದು ವೆಬ್ಸೈಟ್. ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಇದು ಉಚಿತ ಆನ್‌ಲೈನ್ ಕೋಚಿಂಗ್, ವೆಬಿನಾರ್, ಟುಟೋರಿಯಲ್ಸ್ ಹಾಗೂ ಮೋಟಿವೇಷನಲ್ ಭಾಷಣಗಳನ್ನು ಒದಗಿಸುತ್ತದೆ. ಜನ್ಮತಃ ಯಾರೂ ಪ್ರತಿಭಾವಂತರಾಗಿರುವುದಿಲ್ಲ. ಎಲ್ಲರಿಗೂ ಜ್ಞಾನ, ಪ್ರತಿಭೆಯ ಸಾಮರ್ಥ್ಯ ಇದ್ದೇ ಇರುತ್ತದೆ. ಆದರೆ, ಶೋಧಿಸಬೇಕು ಎಂಬುದು ಸೈನಿ ಅವರ ನಂಬಿಕೆ.

What  we have to do for success?

ಹಾಗಾದರೆ ಯಶಸ್ಸಿಗೆ ಏನು ಮಾಡಬೇಕು ಎಂಬ ಪ್ರಶ್ನೆ ಸಹಜ. ಸೈನಿ ಅವರ ಅದಕ್ಕೆ ತಮ್ಮದೇ ಉತ್ತರ ನೀಡುತ್ತಾರೆ; ಹೇಗೆ ಕಲಿಯುವುದು ಎನ್ನುವುದನ್ನು ಮೊದಲು ನಾವು ಕಲಿಯಬೇಕು. ಅಂದರೆ, ಯಾವುದೇ ಸವಾಲು ಸ್ವೀಕರಿಸುವ ಮೊದಲು ಅವುಗಳನ್ನು ಎದುರಿಸಲು ಬೇಕಿರುವ ತರಬೇತಿ ಪಡೆಯಬೇಕು. ಅವರು ಮೂರ್ನಾಲ್ಕು ವರ್ಷಗಳ ಹಿಂದೆ ಟೆಡ್ ಟಾಕ್‌ನಲ್ಲಿ ನೀಡಿದ ಕೆಲವು ಟಿಪ್ಸ್‌ಗಳು ನಿಮ್ಮ ಯಶಸ್ಸಿಗೆ ದಾರಿದೀಪವಾಗಬಲ್ಲವು.

 

 
 
 
 
 
 
 
 
 
 
 
 
 

If he, @drromansaini wouldn't have dropped the idea of becoming a doctor, he wouldn't have become an IAS officer. If he wouldn't have dropped an idea of becoming an IAS officer, he wouldn't have become a change maker of the society. He is just 29 now and each of us have lot to learn from this guy. He is constantly teaching an important lesson to all of us even without his knowledge and that's called DROP THE GOOD TO GET THE GREAT. If you think that this will bring change in the lives of people around you please go ahead and share it so that you can also become a change maker !! . . . . . . @rahul.sankanur_ias @jagadeeshbalaganur @girish.kalagond @jagadeeshp_ips @sreelakshmi.ram @avinashrn2016 @nimmaupendra @_prajaakeeya_uppi_ @ips_mayank @medha.b.17 @ravi.d.channannavar @annamalai.ips @higherperspective @rakshitshetty @thenameisyash @iamradhikapandit @nikhilbullavarips @unacademy @drromansaini @gauravmunjal @gual_shilpa @ips_jyotisinghnuniwaal @_sudha_murthy @iplt20 @darshanthoogudeepashrinivas @association_ias @hemant_nareda.532 . . . . Share such stories with the kids around you. Give them a ray of hope that they can bring any kind of dream into reality. Appreciate them as much as you can because appreciation makes them do more of what they like to do such that they end up producing a masterpiece in their own field !! . . . . . #rohithsaraswathi #creates #onestoryeveryday #storiesworthsharing #believing #dreamlife #ias #officer #govt #servant #upsc #wonderful #inspiring #menwithclass #menwithstyle #possibilities #dreambig #deep #responsibility #struggle #unacademy #online #teaching #growthmindset #mind #dreamscometrue✨ #lifestory #realstories #changeyourmind #chaseyourdreams

A post shared by Rohith Saraswathi (@rohith.saraswathi) on Oct 7, 2020 at 6:56am PDT

 

- ನಾವು ಮಾಡಬೇಕಾದ ಮೊದಲ ಕೆಲಸವೇ ನಮ್ಮ ಸುರಕ್ಷಿತಾ ವಲಯದಿಂದ ಹೊರಬರಬೇಕು. ಸುರಕ್ಷತೆಯ ಅಪಾಯ ಇದೆಯಲ್ಲ ಅದು ಒತ್ತಡದ ಅಪಾಯಕ್ಕಿಂತ ಹೆಚ್ಚು ಅಪಾಯಕಾರಿ. ಪ್ರತಿಯೊಬ್ಬರೂ ಒತ್ತಡವನ್ನು ತೆಗೆದುಕೊಳ್ಳಲೇಬೇಕು.

ಕರ್ನಾಟಕದಲ್ಲಿ ಶಾಲೆ ಪ್ರಾರಂಭಿಸುವಂತೆ ಶಿಫಾರಸು

- ನಮ್ಮ ಯಶಸ್ಸಿನಲ್ಲಿ ಅದೃಷ್ಟ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಕೇವಲ ಒಂದೇ ಕ್ಲಿಕ್‌ನಲ್ಲಿ ಯಾವುದೇ ಜ್ಞಾನವನ್ನು ಪಡೆಯುವ ಈ ಕಾಲದಲ್ಲಿ ನಾವಿರುವುದೇ ಒಂದು ಅದೃಷ್ಟ. ಆದ್ದರಿಂದ ಅದನ್ನು ಸಮರ್ಥಿಸಲು ನೀವು ಶ್ರಮಿಸಬೇಕು.

- ಅರ್ಹತೆ ವರ್ಸಸ್ ಆತ್ಮವಿಶ್ವಾಸ ಜುಗಲ್‌ಬಂಧಿ ಸಾಗಲೇಬೇಕು. ಸಾಮಾನ್ಯವಾಗಿ ಪರೀಕ್ಷೆಗೆ ಹಾಜರಾಗುವಾಗ ಆತ್ಮವಿಶ್ವಾಸ ಮಹತ್ವದ ಬಗ್ಗೆ ಆಗಾಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೀವು 50 ವರ್ಷಗಳಿಂದಲೂ ಪರೀಕ್ಷೆಗೆ ಸಿದ್ಧರಾಗಿದ್ದರೂ ಭಯ ಎಂದಿಗೂ ಹೋಗುವುದಿಲ್ಲ. ಆತ್ಮವಿಶ್ವಾಸ ಮುಖ್ಯವಲ್ಲ, ಅರ್ಹತೆ ಅಥವಾ ಸಾಮರ್ಥ್ಯ ಬಹಳ ಮುಖ್ಯ. ಆತ್ಮವಿಶ್ವಾಸವು ಒಂದು ಕ್ಷಣಿಕ ರೀತಿಯದ್ದು. ಹಾಗಾಗಿ ಸಾಮರ್ಥ್ಯ ಮತ್ತು ಆತ್ಮವಿಶ್ವಾಸಗಳ ನಡುವೆ ತಾಕಲಾಟ ನಡೆಯುತ್ತಲೇ ಇರುತ್ತದೆ.

- ಯಸ್ಸಿನ ಮತ್ತೊಂದು ಸೂತ್ರವೇ ದೂರು ಹೇಳುವುದನ್ನು ನಿಲ್ಲಿಸಬೇಕು; ಜನರೊಂದಿಗೆ ವಾದಿಸುವುದನ್ನು ಬಿಟ್ಟಬಿಡಬೇಕು. ಏಕೆಂದರೆ ಅವರು ನಿಮ್ಮನ್ನು ಅವರು ತಮ್ಮ ಮಟ್ಟಕ್ಕೆ ಇಳಿಸುತ್ತಾರೆ. ಜೊತೆಗೆ ಅವರ ಅನುಭವದಿಂದ ನಿಮ್ಮನ್ನು ಸೋಲಿಸಲು ಯತ್ನಿಸುತ್ತಾರೆ. ಹಾಗಾಗಿ ನೀವು ಏನು ಮಾಡಬೇಕು ಎಂದುಕೊಂಡಿದ್ದಿರೋ ಅದರತ್ತ ಲಕ್ಷ್ಯವಿರಬೇಕು.

- ಆರೋಗ್ಯಕ್ಕೆ ಆರೋಗ್ಯಕರವಾದುದನ್ನೇ ತಿನ್ನಿ. ವ್ಯಾಯಾಮ, ನಿದ್ರೆ (7 ರಿಂದ 9 ಗಂಟೆಗಳವರೆಗೆ) ಮಾಡಿ.  ಕುಡಿಯಬೇಡಿ ಮತ್ತು ಧೂಮಪಾನ ಮಾಡಬೇಡಿ. ಅದು ನಿಮ್ಮ ಅರಿವಿನ ಶಕ್ತಿಯನ್ನು ನಿಧಾನವಾಗಿ ಹದಗೆಡಿಸುತ್ತದೆ. 

- ಬೇಗನೆ ಸಂತೃಪ್ತರಾಗಬೇಡಿ ಎನ್ನುವುದು ಮಾನಸಿಕ ಪರಿಕಲ್ಪನೆಯಾಗಿದೆ. ನೋಡಿ ಬೇಗನೆ ಸಂತೃಪ್ತ ಭಾವನೆ ಬಂದು ಬಿಟ್ಟರೆ ಮುಂದೆ ಹೋಗುವುದಿಲ್ಲ. ಇದರ್ಥ ನಿಮಗೆ ಸಿಗುವ ತಕ್ಷಣದ ಫಲಿತಾಂಶಗಳ ಸಂತೃಪ್ತಿಯನ್ನು ಪಡೆಯುವುದನ್ನು ಮುಂದು ಹಾಕಿದಷ್ಟು ಇನ್ನೂ ಹೆಚ್ಚಿನವಾದುದನ್ನು ಪಡೆಯಲು ಸಾಧ್ಯವಾಗುತ್ತದೆ..

- ನಿರ್ಣಾಯಕವಾಗಿರಿಬೇಕು. ನಿಮಗಾಗಿ ನೀವು ನೀರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಬೇರೆಯವರು ಆ ಕೆಲಸವನ್ನು ಮಾಡುತ್ತಾರೆ. ಅದು ನಿಮ್ಮ ಒಟ್ಟಾರೆ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮದೇ ಆದ ನಿರ್ಧಾರ ಕೈಗೊಳ್ಳುವಾಗ ಅನೇಕ ತೊಂದರೆಗಳು ಎದುರಾಗುತ್ತವೆ. ಅಂಥ ಪರಿಸ್ಥಿತಿಯನ್ನು ನೀವು ನಿರ್ಧಾರ ಕೈಗೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಈ ಒಂದು ಗುಣ ನಿಮ್ಮನ್ನು ಯಶಸ್ವಿಯನ್ನಾಗಿಸುತ್ತದೆ.

ನಿಲ್ಲದ ಕೊರೋನಾ ಕಾಟ: 5ರಿಂದ 7ನೇ ತರಗತಿವರೆಗೆ ಸಂವೇದ್ ಇ ಕ್ಲಾಸ್

 

Follow Us:
Download App:
  • android
  • ios