ತರಗತಿ ಮಧ್ಯೆ ಮಕ್ಕಳು ಶೌಚಕ್ಕೆ ಹೋಗ್ಬಾರದೆಂದು ಗೇಟ್, ಹಿಂಗ್ ಮಾಡಿದ್ರೆ ಮಕ್ಕಳೇನು ಮಾಡ್ಬೇಕು?
ಮಿಸ್ ವಾಶ್ ರೂಮ್… ಸರ್ ವಾಶ್ ರೂಮ್ ಅಂತಾ ಮಕ್ಕಳು ಪದೇ ಪದೇ ಶೌಚಾಲಯಕ್ಕೆ ಹೋಗ್ತಿರುತ್ತಾರೆ. ಇದ್ರಿಂದ ತರಗತಿ ನಡೆಸೋದು ಕಷ್ಟವಾಗುತ್ತೆ. ಕೆಲ ಮಕ್ಕಳು ಸುಳ್ಳು ಹೇಳಿ ಹೊರಗೆ ಹೋಗ್ತಿರ್ತಾರೆ. ಅದನ್ನು ತಡೆಯಲು ಈ ಶಾಲೆಯೊಂದು ವಿಚಿತ್ರ ಕೆಲಸ ಮಾಡಿದೆ.
ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣ ನೀಡಲಾಗುತ್ತದೆ. ಬರೀ ಪಠ್ಯದಲ್ಲಿರುವ ವಿಷ್ಯವನ್ನು ಅವರ ತಲೆ ತುಂಬುವ ಕೆಲಸ ಮಾತ್ರ ನಡೆಯೋದಿಲ್ಲ. ದಿನನಿತ್ಯದ ಕೆಲಸವನ್ನು ಅವರು ಹೇಗೆ ಮಾಡ್ಬೇಕು, ಆಹಾರ, ನೀರಿನ ಅವಶ್ಯಕತೆ ಏನು, ಮೂತ್ರ ವಿಸರ್ಜನೆ, ಮಲ ವಿಸರ್ಜನೆ ಮಹತ್ವ ಸೇರಿದಂತೆ ಮಕ್ಕಳ ಆರೋಗ್ಯ, ಜ್ಞಾನ ವೃದ್ಧಿಗೆ ಅಗತ್ಯವಿರುವ ಅನೇಕ ವಿಷ್ಯಗಳನ್ನು ಹೇಳಲಾಗುತ್ತದೆ. ಮಕ್ಕಳು ಶಾಲೆಗೆ ಹೋಗುವ ಸಮಯದಲ್ಲಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ಪಾಲಕರು ಬ್ಯಾಗ್ ನಲ್ಲಿ ತುಂಬಿರ್ತಾರೆ. ಆಹಾರ, ನೀರು ಬ್ಯಾಗ್ ನಲ್ಲಿರುವಂತೆ ನೋಡಿಕೊಳ್ತಾರೆ. ಅದೇ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಮಾಡಲು ಪಾಲಕರಿಂದ ಸಾಧ್ಯವಿಲ್ಲ. ಇದು ಶಾಲೆಯ ಜವಾಬ್ದಾರಿ.
ಅನೇಕ ಪಾಲಕರು (Parents) ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಶಾಲೆ (School) ವಾತಾವರಣ ಹೇಗಿದೆ ಎಂಬುದನ್ನು ನೋಡ್ತಾರೆ. ತರಗತಿ, ಶಾಲೆಯ ಹೊರಗಿನ ವಾತಾವರಣದ ಜೊತೆ ಶೌಚಾಲಯ (Toilet) ದ ಸ್ವಚ್ಛತೆಯನ್ನು ಗಮನಿಸ್ತಾರೆ. ಶೌಚಾಲಯ ಕೊಳಗಾಗಿದ್ದರೆ ಮಕ್ಕಳ ಆರೋಗ್ಯ (Health)ದ ಮೇಲೆ ಅದು ಪರಿಣಾಮ ಬೀರುತ್ತದೆ ಎಂಬುದು ಪಾಲಕರ ಅಭಿಪ್ರಾಯ. ಮಕ್ಕಳು ಶಾಲೆಯಲ್ಲೇ ಅತೀ ಹೆಚ್ಚು ಸಮಯ ಕಳೆಯುವ ಕಾರಣ ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆ ಇರಬೇಕು. ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಶೌಚಾಲಯಕ್ಕೆ ತೆರಳುವ ಅವಕಾಶ ನೀಡ್ತಾರೆ.
ಕೊನೆಗೂ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್; ದುಬೈ ಬಾತ್‌ಟಬ್‌ನಲ್ಲೇ ಬೋರಲಾಗಿ ಬಿದ್ದಿದ್ದು ಯಾಕೆ?
ಮಲ – ಮೂತ್ರ ಕಂಟ್ರೋಲ್ ಮಾಡಲು ಮಕ್ಕಳಿಗೆ ಸಾಧ್ಯವಿಲ್ಲ. ಹಾಗಾಗಿ ಮಕ್ಕಳು ಯಾವಾಗ ಕೇಳಿದ್ರೂ ಶಿಕ್ಷಕರು ಅದಕ್ಕೆ ಅನುಮತಿ ನೀಡ್ತಾರೆ. ತರಗತಿ ಆರಂಭವಾದಾಗಿನಿಂದ ಮುಗಿಯುವವರೆಗೆ ಹತ್ತು ಮಕ್ಕಳು ಶೌಚಾಲಯಕ್ಕೆ ಹೋಗಿ ಬಂದಿರ್ತಾರೆ. ಕೆಲ ಶಾಲೆಯಲ್ಲಿ ಮಕ್ಕಳಿಗೆ ಇದ್ರಲ್ಲೂ ಶಿಸ್ತು ಕಲಿಸಲು ಮುಂದಾಗ್ತಾರೆ. ತರಗತಿ ಮುಗಿದ ನಂತ್ರ ವಿಶ್ರಾಂತಿ ವೇಳೆ ಶೌಚಾಲಯಕ್ಕೆ ತೆರಳಲು ಅನುಮತಿ ನೀಡ್ತಾರೆ. ಆದ್ರೆ ಈ ಶಾಲೆ ತನ್ನ ನಿಯಮವನ್ನು ಅತ್ಯಂತ ಕಠಿಣಗೊಳಿಸಿದೆ. ಶಾಲೆಯ ಶೌಚಾಲಯಕ್ಕೆ ಬೀಗ ಜಡಿದಿರುವುದಲ್ಲದೆ ಅದ್ರ ಮುಂದೆ ಲೋಹದ ಕಂಬಿಗಳನ್ನು ಹಾಕಿದೆ.
ಯುಕೆಯ ಕೊವೆಂಟ್ರಿಯಲ್ಲಿರುವ ಫಾಕ್ಸ್‌ಫೋರ್ಡ್ ಸಮುದಾಯ ಶಾಲೆ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈ ಶಾಲೆಯ ಶೌಚಾಲಯಕ್ಕೆ ಜೈಲಿನ ಕಂಬಿಗಳನ್ನು ಹಾಕಲಾಗಿದೆ. ಮಾರ್ಚ್ ನಲ್ಲಿ ಶಾಲೆ, ಶೌಚಾಲಯಕ್ಕೆ ಬೀಗ ಹಾಕಿದೆ. ಮಕ್ಕಳು ತರಗತಿ ಸಮಯದಲ್ಲಿ ಶೌಚಾಲಯಕ್ಕೆ ಹೋಗೋದನ್ನು ತಡೆಯಲು ಶಾಲೆ ಈ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳು ಆಗಾಗ್ಗೆ ಹೊರಹೋಗುವುದನ್ನು ತಡೆಯಲು ನಡೆಯುತ್ತಿರುವ ಅಭಿಯಾನದ ಒಂದು ಭಾಗ ಇದಾಗಿದೆ.
7 ರಿಂದ 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಬಳಸುವ ಶೌಚಾಲಯದ ಮುಂದೆ ಜೈಲಿನ ಬಾಗಿಲು ಮಾಡಲಾಗಿದೆ. ಈ ಹಿಂದೆ ಶೌಚಾಲಯದ ಬಾಗಿಲು ಹಾಕಲಾಗ್ತಿತ್ತು. ಈಗ ಶೌಚಾಲಯದ ಮುಂದೆ ಜೈಲು ರೀತಿಯ ಕಂಬಿಗಳನ್ನು ಮಾಡಲಾಗಿದೆ ಎಂದು ವಿದ್ಯಾರ್ಥಿಯೊಬ್ಬರ ಅಜ್ಜ ದೂರಿದ್ದಾರೆ.
ಶಾಲೆಯನ್ನು ಮಕ್ಕಳಿಗೆ ಸುರಕ್ಷಿತ ಸ್ಥಳವೆಂದು ಭಾವಿಸಲಾಗುತ್ತದೆ. ಅಲ್ಲಿ ಆರಾಮದಾಯಕ ವಾತಾವರಣ ಸಿಗಬೇಕು. ಶೌಚಾಲಯ ಬಂದ್ ಮಾಡಿದ್ರೆ ಆರಾಮದಾಯಕ ವಾತಾವರಣ ಸಿಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇದ್ರಿಂದ ಮಕ್ಕಳಿಗೆ ತೊಂದರೆ ಆಗುತ್ತದೆ. ತರಗತಿಯಲ್ಲಿ ಮಕ್ಕಳು ಮೂತ್ರ ವಿಸರ್ಜನೆ ನಿಯಂತ್ರಿಸಲು ಸಾಧ್ಯವಾಗಿಲ್ಲ ಅಂದ್ರೆ ಏನು ಮಾಡ್ತಾರೆ ಎಂದು ಪಾಲಕರು ಕೋಪ ವ್ಯಕ್ತಪಡಿಸಿದ್ದಾರೆ.
ಆರತಿಗೇಕೆ ಪ್ರಚಾರವೆಂದರೆ ಅಲರ್ಜಿ; ಅಮೆರಿಕಾದಿಂದ ಗುಟ್ಟಾಗಿ ಪದೇಪದೇ ಬರುವುದೇಕೆ, ಮತ್ತೆ ಹೋಗುವುದೇಕೆ?
ಕೊವೆಂಟ್ರಿಯಲ್ಲಿರುವ ಫಾಕ್ಸ್‌ಫೋರ್ಡ್ ಸಮುದಾಯ ಶಾಲೆ ಅಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಕೇವಲ ಎರಡು ಟಾಯ್ಲೆಟ್ ಗೆ ಮಾತ್ರ ಈ ರೀತಿ ಬಾಗಿಲು ಮಾಡಲಾಗಿದೆ. ಇವು ಪಂಜರವಲ್ಲ. ಶಾಲೆಯ ಮೊದಲು ಮತ್ತು ನಂತರ, ಹಾಗೆಯೇ ಬಿಡುವಿನ ವೇಳೆಯಲ್ಲಿ ಬಾಗಿಲು ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ಸಬೂಬು ಹೇಳಿದ್ದಾರೆ.