Asianet Suvarna News Asianet Suvarna News

SSLC ಪರೀಕ್ಷೆಗೆ ಮುಹೂರ್ತ ಫಿಕ್ಸ್: ಮಾರ್ಗಸೂಚಿ ಪ್ರಕಟ

* ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮುಹೂರ್ತ ಫಿಕ್ಸ್
* ಪರೀಕ್ಷೆ ನಡೆಸಲು  ಮಾರ್ಗಸೂಚಿ ಪ್ರಕಟ
* ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪರೀಕ್ಷೆ

Karnataka govt releases guidelines for SSL Exams on June 3 weak rbj
Author
Bengaluru, First Published Jun 23, 2021, 5:29 PM IST

ಬೆಂಗಳೂರು, (ಜೂನ್.23): ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುಹೂರ್ತ ಫಿಕ್ಸ್ ಆಗಿದೆ.

 ಜುಲೈ ಮೂರನೇ ವಾರದಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಪ್ರಮಾಣಿ ಕಾರ್ಯಾಚರಣಾ ವಿಧಾನವನ್ನು ಸಿದ್ಧಪಡಿಸಲಾಗಿದೆ.

SSLC ಪರೀಕ್ಷೆಗೆ ಸಿದ್ಧತೆ: ಮಾದರಿ ಪ್ರಶ್ನೆ ಪತ್ರಿಕೆ ರಿಲೀಸ್

ಇದೀಗ ಬಿಡುಗಡೆ ಮಾಡಲಾಗಿರುವ ಎಸ್ ಓ ಪಿಯಲ್ಲಿನ ಮಾರ್ಗಸೂಚಿಯನ್ನು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಂಬಂಧಿಸಿದ ಇತರೆ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಆದೇಶಿಸಿದೆ.

ಮಾರ್ಗಸೂಚಿ ಇಂತಿದೆ.

* ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಯ ಮುನ್ನಾ ಮತ್ತು ಪರೀಕ್ಷೆಯಾದ ನಂತರ 1% ಸೋಡಿಯಂ ಹೈಪೊಕ್ಲೋರೈಟ್ಸ್ ಸೆಲ್ಯೂಷನ್ ಸೋಂಕು ನಿವಾರಕ ದ್ರಾವಣವನ್ನು ಸಂಬಂಧಪಟ್ಟ ನಗರ/ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೂಲಕ ಸಿಂಪಡಿಸಿ ಸ್ವಚ್ಛಗೊಳಿಸುವುದು.

* ಪ್ರತಿ ಪರೀಕ್ಷೆಯ ಮುನ್ನಾ ಮತ್ತು ಪರೀಕ್ಷೆಯಾದ ನಂತರ ಪರೀಕ್ಷೆಯಾದ ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳು/ಪೀಠೋಪಕರಣಗಳನ್ನು ಮತ್ತು ಇನ್ನಿತರ ವಸ್ತುಗಳನ್ನು 2.5 % ಲೈಸೂಲ್ ಅಥವಾ ಹ್ಯಾಂಡ್ ಸ್ಯಾನಿಟೈಸರ್ನಿಂದ ಸ್ಯಾನಿಟೈಸ್ ಮಾಡುವುದು.

* ಪ್ರತಿ ಪರೀಕ್ಷಾ ಕೇಂದ್ರದಲ್ಲೂ, ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ಪ್ರದೇಶ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಆರು ಅಡಿ ಅಥವಾ 2 ಮೀಟರ್ ದೈಹಿಕ ಅಂತರವನ್ನು ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು.

* ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರಕ್ಕೆ ಹೋಗದಂತೆ ಪರೀಕ್ಷಾ ಕೇಂದ್ರ ರಚಿಸುವುದು.
ದೈಹಿಕ ಕನಿಷ್ಠ ಆರು ಅಡಿಗಳ ಅಂತರ ಕಾಪಾಡಿಕೊಳ್ಳುವುದು.

* ಪ್ರತಿ ಕೊಠಡಿಯಲ್ಲಿ ಗರಿಷ್ಠ 12 ಮಕ್ಕಳಿರಬೇಕು. ಒಂದು ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿಯಂತೆ, ಒಬ್ಬ ವಿದ್ಯಾರ್ಥಿಯಿಂದ ಮತ್ತೊಬ್ಬ ವಿದ್ಯಾರ್ಥಿಯ ನಡುವೆ 6 ಅಡಿ ಅಂತರವಿರಬೇಕು.

* ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಆಸನ ವ್ಯವಸ್ಥೆಯ ಬಗ್ಗೆ ಅಂದರೆ ಯಾವ ವಿದ್ಯಾರ್ಥಿ ಯಾವ ಕೊಠಡಿಯಲ್ಲಿ ಬರೆಯುತ್ತಾನೆ ಎಂಬುದನ್ನು ಮುಂಚಿತವಾಗಿ ವಿದ್ಯಾರ್ಥಿಗಳಿಗೆ ತಿಳಿಸುವ ವ್ಯವಸ್ಥೆ ಮಾಡುವುದು. ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳು ಸೂಚನಾ ಫಲಕದ ಮುಂದೆ ಗುಂಪುಗೂಡುವುದನ್ನು ತಡೆಗಟ್ಟಬಹುದು.

* ಪ್ರತಿ ವಿದ್ಯಾರ್ಥಿಯು ತಮ್ಮದೇ ಆದ ನೀರಿನ ಬಾಟಲಿಗಳನ್ನು ತರಲು ಅವಕಾಶ ನೀಡುವುದು. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬೆಳಿಗ್ಗೆ ಸಾಕಷ್ಟು ಮುಂಚಿತವಾಗಿ ಬರುವುದರಿಂದ ಅಪೇಕ್ಷೆ ಪಟ್ಟಲ್ಲಿ ತಮ್ಮ ಮನೆಯಿಂದ ಆಹಾರದ ಡಬ್ಬಿಯನ್ನು ಒಯ್ಯಲು ಅನುವು ಮಾಡಿಕೊಡುವುದು.

* ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿಯೊಳಗೆ ಮಳೆಯ ನೀರು ಎರಚುವಿಕೆಯಿಂದ ತೊಂದರೆ ಉಂಟಾಗುತ್ತಿದೆ ಎಂದು ಭಾವಿಸಿದ್ದಲ್ಲಿ ಪರೀಕ್ಷಾ ಕೇಂದ್ರಗಳ ಕೊಠಡಿ ಲಭ್ಯತೆಗನುಸಾರವಾಗಿ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು. ಇದಕ್ಕೆ ಅನುಗುಣವಾಗಿ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಿಕೊಳ್ಳುವುದು.

* ಕೆಮ್ಮ/ನೆಗಡಿ/ಜ್ವರ ಮೊದಲಾದವುಗಳಿಂದ ಬಳಲುತ್ತಿರುವ/ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕನಿಷ್ಠ ಎರಡು ಕೊಠಡಿಗಳನ್ನು ವಿಶೇಷ ಕೊಠಿಗಳೆಂದು ಹೆಸರಿಸಿ ಕಾಯ್ದಿರಿಸುವುದು.

* ಪ್ರತಿ ತಾಲ್ಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಠ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ, ಅವುಗಳನ್ನು ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಇಡುವುದು.

* ಪರೀಕ್ಷಾ ಕೇಂದ್ರಕ್ಕೆ ಒಳಬರುವಾಗ ಮತ್ತು ಹೊರಗೆ ಹೋಗುವ ಸಮಯದಲ್ಲಿ ವಿದ್ಯಾರ್ಥಿಗಳು ಗುಂಪು-ಗುಂಪಾಗಿರಲು ಬಿಡಬಾರದು. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ದೈಹಿಕ ಅಂತರವನ್ನು ಕಾಯ್ದುಕೊಂಡು ಒಳಬರಲು ಮತ್ತು ಹೊರ ಹೋಗಲು ಕ್ರಮವಹಿಸುವುದು.

* ಒಂದು ವೇಳೆ ವಿದ್ಯಾರ್ಥಿಯು ಸರಿಯಾದ ಅಳತೆಯುಳ್ಳು ಉತ್ತಮ ಬಟ್ಟೆ ಮಾಸ್ಕನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾದಲ್ಲಿ ಅನುಮತಿಸುವುದು. ಇಲ್ಲವಾದರಲ್ಲಿ ಸರಿಯಾದ ಅಳತೆಯ ಉತ್ತಮ ಬಟ್ಟೆ ಮಾಸ್ಕನ್ನು ಅಂತಹ ವಿದ್ಯಾರ್ಥಿಗಳಿಗೆ ನೀಡುವುದು. ಮುಂದುವರೆದು ಕೆಮ್ಮ/ ನೆಗಡಿ/ ಜ್ವರ ಮೊದಲಾದವುಗಳಿಂದ ಬಳಲುತ್ತಿರುವ /ಲಕ್ಷಣಗಳಿರುವ ವಿದ್ಯಾರ್ಥಿಗೆ ವೈದ್ಯಕೀಯ ತಪಾಸಣೆಗೆ ಕಳುಹಿಸುವ ಮುನ್ನಾ ಎನ್ 95 ಮಾಸ್ಕನ್ನು ನೀಡುವುದು.

* ಸ್ಯಾನಿಟೈಸರ್ ನ್ನು ಮಂಡಳಿಯಿಂದ ನೀಡಲಾಗುವುದು. ಆರೋಗ್ಯ ತಪಾಸಣಾ ಕೌಂಟರಿನಲ್ಲಿ ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸ್ ಮಾಡುವುದು.

Follow Us:
Download App:
  • android
  • ios