ಪಠ್ಯದಲ್ಲಿ ನೀತಿಕತೆಗಳು ಇಲ್ಲದಿದ್ದರೆ ಪ್ರಯೋಜನವಿಲ್ಲ: ಎಸ್‌.ಎಲ್‌. ಭೈರಪ್ಪ

ಅನುಭವಕ್ಕೆ ಬರುವ ಘಟನೆಗಳನ್ನು ಕತೆಗಳಾಗಿ ಬರೆಯುವುದೇ ಕಾದಂಬರಿ. ಸ್ಪ್ಯಾನಿಶ್‌, ರಷ್ಯಾದಲ್ಲಿ ಮೊದಲು ಕಾದಂಬರಿ ಪ್ರಕಾರ ಸೃಷ್ಟಿಯಾಯಿತು. ಜೀವನ ಮೌಲ್ಯ, ಆಲೋಚನೆಗೆ ಹಚ್ಚುವ ಬರಹ, ಹೊಸ ಅಂತಃರಾತ್ಮ ಇದ್ದಾಗ ಉತ್ತಮ ಕಾದಂಬರಿ ರೂಪುಗೊಳ್ಳುತ್ತದೆ ಎಂದ ಭೈರಪ್ಪ

If No Morals in the Text  it is Useless Says Novelist SL Bhyrappa grg

ಮೈಸೂರು(ಆ.21): ಹಿಂದೆ ಮಕ್ಕಳು ನೀತಿ ಕತೆಗಳನ್ನು ಕಲಿಯುತ್ತಿದ್ದರು. ಇವತ್ತು ಪಠ್ಯದಲ್ಲಿ ನೀತಿಕತೆ ಇಲ್ಲವಾಗಿದೆ. ರಾಜಕೀಯ ತತ್ವ, ನಾಯಕರ ಸೇರ್ಪಡೆಗೆ ಗಲಾಟೆ ನಡೆಯುತ್ತದೆ. ಪಠ್ಯದಲ್ಲಿ ನೀತಿ ಇಲ್ಲದಿದ್ದರೆ ಪ್ರಯೋಜನವಿಲ್ಲ ಎಂದು ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಪುರಸ್ಕೃತ ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸದ್ವಿದ್ಯಾ ವಿದ್ಯಾಸಂಸ್ಥೆ ಸಂಯುಕ್ತವಾಗಿ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಶಾಲೆಯ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಮ್ಮ 92ನೇ ವರ್ಷದ ಸಂಭ್ರಮ ಮತ್ತು ಅಭಿವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ತಿಳಿಯಬೇಕು. ಸಾಹಿತ್ಯದಲ್ಲಿ ಆಸಕ್ತಿಯಿದ್ದರೆ ರಸ ಅಸ್ವಾದಿಸುವುದನ್ನು ಕಲಿಯಬೇಕು. ಸಿದ್ಧಾಂತದ ದಾಸರಾದರೆ ರಸ ಅನುಭವಿಸಲಾಗುವುದಿಲ್ಲ. ಸಾಹಿತ್ಯದಲ್ಲಿ ಮನರಂಜನೆ ಇರುತ್ತದೆ. ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ ಎಂದರು.

ಸರ್ಕಾರಿ ಶಾಲೆ ಜಾಗ ಮಾರಾಟ?: ಶಿಕ್ಷಣ ಸಚಿವ ನಾಗೇಶ್‌ ಹೇಳಿದ್ದಿಷ್ಟು

ಸರಿಯಾದ ಜ್ಞಾನವಿದ್ದರೆ ಜೀವನದ ಮೌಲ್ಯವನ್ನು ಅರ್ಥ ಮಾಡಿಕೊಂಡು ಸರಿಯಾದ ಸಂವಹನ ಮಾಡಿ ಹೇಳಲು ಸಾಧ್ಯವಾಗುತ್ತದೆ. ಈ ಜ್ಞಾನ ತತ್ವಶಾಸ್ತ್ರದಿಂದ ಬರುತ್ತದೆ. ಗತಕಾಲದಲ್ಲಿರುವುದನ್ನು ಕತೆಯಾಗಿ ಹೇಳಿದಾಗ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ. ವ್ಯಾಸರು ಮಹಾಭಾರತ ಬರೆದಿದ್ದು ಹೀಗೆಯೇ ಎಂದು ಅವರು ಹೇಳಿದರು.

ಅನುಭವಕ್ಕೆ ಬರುವ ಘಟನೆಗಳನ್ನು ಕತೆಗಳಾಗಿ ಬರೆಯುವುದೇ ಕಾದಂಬರಿ. ಸ್ಪ್ಯಾನಿಶ್‌, ರಷ್ಯಾದಲ್ಲಿ ಮೊದಲು ಕಾದಂಬರಿ ಪ್ರಕಾರ ಸೃಷ್ಟಿಯಾಯಿತು. ಜೀವನ ಮೌಲ್ಯ, ಆಲೋಚನೆಗೆ ಹಚ್ಚುವ ಬರಹ, ಹೊಸ ಅಂತಃರಾತ್ಮ ಇದ್ದಾಗ ಉತ್ತಮ ಕಾದಂಬರಿ ರೂಪುಗೊಳ್ಳುತ್ತದೆ ಎಂದರು.

ಹುಟ್ಟಹಬ್ಬದ ತಾಪತ್ರಯ

ಹುಟ್ಟುಹಬ್ಬ ಆಚರಿಸಿಕೊಳ್ಳುವ ಅಭ್ಯಾಸವೇ ಇಲ್ಲ. ಚಿಕ್ಕ ವಯಸ್ಸಿಂದಲೂ ಆಚರಿಸಿಕೊಂಡಿಲ್ಲ. ನನ್ನ ಹುಟ್ಟಿನ ದಿವಸದ ಬಗ್ಗೆ ಇವತ್ತಿಗೂ ಅನುಮಾನವೇ. ಒಂದು ಲೆಕ್ಕದಲ್ಲಿ ಗುರು ಪೂರ್ಣಿಮೆ ದಿನ ಹುಟ್ಟಿದೆ. ಇಂಗ್ಲಿಷ್‌ ಲೆಕ್ಕದಲ್ಲಿ ಬೇರೆಂದೂ ದಿನ ಇದೆ. ಆ.20 ರಂದು ಶಾಲೆಗೆ ಸೇರಿದ ದಿನವೇ ಹುಟ್ಟುಹಬ್ಬವಾಗಿ ನಡೆದುಕೊಂಡು ಬಂದಿದೆ. ಹುಟ್ಟುಹಬ್ಬದ ಆಚರಣೆ ನನಗೆ ಬಹಳ ತಾಪತ್ರಯ ಕೊಡುತ್ತಿದೆ. ಅನೇಕರು ಶುಭಾಶಯ ಕೋರುತ್ತಾರೆ. ನೂರಾರು ಜನರು ಫೋನಿನಲ್ಲಿ ಶುಭಾಶಯ ತಿಳಿಸುತ್ತಾರೆ. ಮನೆ ಬಂದವರು ಹೂ ಹಣ್ಣು ತರುತ್ತಾರೆ. ಈ ತಾಪತ್ರಯ ಎದುರಿಸುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

ಭಾರತದಲ್ಲಿ 60 ಗರಿಷ್ಠ ವಯಸ್ಸು. 80 ವರ್ಷ ಅಂತಿಮ ಎನ್ನುತ್ತಾರೆ. ಆದರೆ, ನಾನು 92 ವರ್ಷವಾದರೂ ಬದುಕಿದ್ದೇನೆ. ಯಾಕೆಂದು ನನ್ನನ್ನು ಕೇಳಿಕೊಂಡಿದ್ದೇನೆ. ಯಾವುದೇ ದುಶ್ಚಟಗಳಿಗೆ ದಾಸರಾಗದಿದ್ದು ಕಾರಣವಾಗಿದೆ. ಡಿಎನ್‌ಎದಲ್ಲಿ ಎಷ್ಟುವರ್ಷ ಬದುಕುತ್ತೇವೆ ಎಂಬುದು ಇದೆ. ಮಧ್ಯದಲ್ಲಿ ಬೇರೆ ಬೇರೆ ಕಾಯಿಲೆಗಳು ಬರಬಹುದು. ರೋಗಗಳು ಬರದಂತೆ ಎಚ್ಚರಿಕೆ ವಹಿಸುವುದು ಅವಶ್ಯ. ಬೆಳಗಿನ ಜಾವಾ ಎಚ್ಚರವಾದಾಗ ಬದುಕಿದ್ದೇನೆ ಅನ್ಸುತ್ತೆ ಎಂದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಎಂ.ಎಸ್‌.ಕೆ. ನರಹರಿ ಬಾಬು, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಆಕಾಶವಾಣಿ ನಿವೃತ್ತ ನಿರ್ದೇಶಕಿ ಡಾ.ಎಂ.ಎಸ್‌. ವಿಜಯಾ ಹರನ್‌, ಸಮಾಜ ಸೇವಕ ಕೆ. ರಘುರಾಂ, ಕಸಾಪ ಕಾರ್ಯದರ್ಶಿ ಮ.ನ. ಲತಾ ಮೋಹನ್‌, ಹಿರಣ್ಮಯಿ ಇದ್ದರು.

ಕಾರವಾರ: ಮಕ್ಕಳ ಕೈಯಲ್ಲಿದ್ದ ರಾಖಿ ಬಿಚ್ಚಿಸಿದ ಖಾಸಗಿ ಶಾಲೆ, ಶಿಕ್ಷಣ ಸಂಸ್ಥೆಯ ವಿರುದ್ಧ ಪ್ರತಿಭಟನೆ

ಸಿಗರೇಟು ಸೇದಿ, ನಶೆ ಹಾಕಿದ್ದೆ!

ಬಾಲ್ಯದಲ್ಲಿ ಕದ್ದು ಸಿಗರೇಟು ಸೇದಿದ್ದೆ, ಕಾಲೇಜು ಓದುವಾಗ ನಶೆ ಹಾಕಿಕೊಳ್ಳುತ್ತಿದ್ದೆ ಎನ್ನುವ ಮೂಲಕ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅವರು ಅಚ್ಚರಿ ಮೂಡಿಸಿದರು.

ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಸ್ನೇಹಿತನ ಸಹವಾಸದಿಂದ ಸಿಗರೇಟು ಸೇದಿದೆ. ಬಹಳ ಪ್ರೀತಿಯಿಂದ ಕಾಣುತ್ತಿದ್ದ ಮೇಷ್ಟ್ರು ಬಳಿ ಸಿಗರೇಟು ಕದ್ದು 5- 6 ದಿನ ಸೇದಿದ್ದೆ. ಒಂದು ದಿನ ಸಿಕ್ಕಬಿದ್ದಾಗ, ಸಿಗರೇಟ್‌ ಎದೆ ಒಳಗಡೆ ಸುಡುತ್ತೆ. ಆದರೂ ಬಿಡಲಾಗುತ್ತಿಲ್ಲ. ನೀನು ಕಲಿತರೆ ಗತಿಯೇನು ಎಂದು ಪ್ರಮಾಣ ಮಾಡಿಸಿದರು. ಅದನ್ನು ಬಿಟ್ಟೆ. ಕಾಲೇಜಿನಲ್ಲಿ ಓದುವಾಗ ನಶೆ ಹಾಕುವುದು ಸ್ನೇಹಿತರ ಬಳುವಳಿಯಾಗಿತ್ತು. ಪ್ರಾಧ್ಯಾಪಕರು ತಿಳಿ ಹೇಳಿದ ಮೇಲೆ ಬಿಟ್ಟೆ. ಯಾವ ಅಭ್ಯಾಸವೂ ನನಗಿಲ್ಲ. ಟೀ, ಕಾಫಿ ಸಹ ಕುಡಿಯುವುದಿಲ್ಲ ಎಂದು ಅವರು ತಿಳಿಸಿದರು.

ವೇದಗಳ ತತ್ವ ಉಪನಿಷತ್ತು. ಉಪನಿಷತ್ತಿನಲ್ಲಿ ಕತೆಗಳಿವೆ. ವ್ಯಾಸ- ವಾಲ್ಮೀಕಿ ಎಷ್ಟೊಂದು ತತ್ವಗಳನ್ನು ಬರೆದಿದ್ದಾರೆ. ದೇಶದ ಮೌಲ್ಯಗಳು ಅರ್ಥವಾಗಬೇಕಾದರೆ ರಾಮಾಯಣ, ಮಹಾಭಾರತ ಗೊತ್ತಾಗಬೇಕು. ರಾಮಯಾಣ, ಮಹಾಭಾರತ ರಚನೆಗೆ ವೇದಗಳು ಪ್ರೇರಣೆಯಾಗಿವೆ. ಅಲ್ಲದೇ ಎರಡೂ ಮಹಾಕಾವ್ಯಗಳು ವೇದಕ್ಕೆ ಸಮಾನ ಅಂತ ಸಾಹಿತಿ ಡಾ.ಎಸ್‌.ಎಲ್‌. ಭೈರಪ್ಪ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios