LKG ಸ್ಕೂಲ್ ಫೀಸ್ 3.7 ಲಕ್ಷ ರೂಗೆ ಏರಿಕೆ, ಬೆಂಗಳೂರು ಹೂಡಿಕೆದಾರನಿಂದ ಬಯಲಾಯ್ತು ಶಿಕ್ಷಣ ದಂಧೆ!
ಬೆಂಗಳೂರು ಮೂಲದ ಹೂಡಿಕೆದಾರ ನರ್ಸರಿ ಶಾಲಾ ಫೀಸ್ 3.7 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ನಾವು ಮನೆ, ನಿವೇಷನ ದುಬಾರಿ ಎಂದುಕೊಳ್ಳುತ್ತಿದ್ದೆವು. ಆದರೆ ಶಿಕ್ಷಣ ನಮ್ಮ ಕೈಗೆ ಸಿಗದ ವಸ್ತುವಾಗಿದೆ ಎಂದ ನೋವ ತೋಡಿಕೊಂಡಿದ್ದಾರೆ.
ಬೆಂಗಳೂರ(ಆ.15) ಶಿಕ್ಷಣದ ಸ್ವರೂಪ ಬದಲಾಗಿ ವರ್ಷಗಳು ಉರುಳಿದೆ. ಲಕ್ಷ ಲಕ್ಷ ಫೀಸ್, ಪುಸ್ತಕ ಹೊರತುಪಡಿಸಿದರೆ ಜೀವನ ಮೌಲ್ಯ, ಸವಾಲಗಳ ಎದುರಿಸುವಿಕೆ ಸೇರಿದಂತೆ ಕೌಶಲ್ಯಗಳು ಇಲ್ಲದಾಗಿದೆ. ಇದೀಗ ಬೆಂಗಳೂರಿನ ಹೂಡಿಕೆದಾರ ಎಲ್‌ಕೆಜಿ ಶಾಲಾ ಫೀಸ್ ಕುರಿತ ನೋವು ತೋಡಿಕೊಂಡಿದ್ದಾರೆ. ಈ ವರ್ಷ ಹೈದರಾಬಾದ್‌ನಲ್ಲಿ ಎಲ್‌ಕೆಜಿ ಶಾಲಾ ಫೀಸ್ ಬರೋಬ್ಬರಿ 3.7 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ 2.3 ಲಕ್ಷ ರೂಪಾಯಿ ಇದ್ದ ಫೀಸ್ ಇದೀಗ ದುಪ್ಪಟ್ಟಾಗಿದೆ ಎಂದು ಹೂಡಿಕೆದಾರ ಅವಿರಾಲ್ ಭಟ್ನಾಗರ್ ಹೇಳಿದ್ದಾರೆ.
ಎ ಜ್ಯೂನಿಯರ್ ವಿಸಿ ಸಂಸ್ಥಾಪಕ ಅವಿರಲ್ ಭಟ್ನಾಗರ್ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಭಟ್ನಾಗರ್ ಹೈದರಾಬಾದ್‌ನ ಯಾವ ಶಾಲೆ ಅನ್ನೋದನ್ನು ಸ್ಪಷ್ಟಪಡಿಸಿಲ್ಲ. ಆದರೆ ಶಾಲೆಯೊಂದರ ಫೀಸ್ ಕುರಿತು ತಿಳಿಸಿದ್ದಾರೆ. ಕಳೆದ ವರ್ಷ 2.3 ಲಕ್ಷ ರೂಪಾಯಿ ಇದ್ದ ಫೀಸ್ ಈ ವರ್ಷ ಎಲ್‌ಕೆಜಿಗೆ 3.7 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ನಾವೆಲ್ಲಾ ಮನೆ, ನಿವೇಶನಗಳು ದುಬಾರಿ, ಹಣದುಬ್ಬರ ಎಂದೆಲ್ಲಾ ಮಾತನಾಡುತ್ತೇವೆ. ಆದರೆ ನಿಜವಾದ ಹಣದುಬ್ಬರ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿದೆ ಎಂದಿದ್ದಾರೆ.
ಬಿಕಾಂ ಪದವಿ ಪರೀಕ್ಷೆಯಲ್ಲಿ ಮಹಾ ಎಡವಟ್ಟು; ಪ್ರಶ್ನೆ ಪತ್ರಿಕೆ ಬಿಟ್ಟು ಮಾದರಿ ಉತ್ತರ ಪತ್ರಿಕೆ ವಿತರಣೆ
ಕಳೆದ 30 ವರ್ಷಗಳಲ್ಲಿ ಶಾಲಾ ಫೀಸ್ 9 ಪಟ್ಟು ಹೆಚ್ಚಾಗಿದ್ದರೆ, ಕಾಲೇಜು ಪೀಸ್ 30 ಪಟ್ಟು ಹೆಚ್ಚಾಗಿದೆ. ಶಿಕ್ಷಣ ಇದೀಗ ಜನಸಾಮಾನ್ಯರ ಕೈಗೆಟುಕುವ ವಸ್ತುವಲ್ಲ ಎಂದು ಅವಿರಲ್ ಭಟ್ನಾಗರ್ ಟ್ವೀಟ್ ಮೂಲಕ ಹೇಳಿದ್ದಾರೆ. ಭಟ್ನಾಗರ್ ಟ್ವೀಟ್‌ಗೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಎರಡೂ ದುಬಾರಿಯಾಗಿದೆ ಎಂದು ಹಲವರು ಹೇಳಿದ್ದಾರೆ.
ನೀವು ಎಲ್‌ಕೆಜಿಯಲ್ಲಿ ನೀಡಿದ ಫೀಸ್, 15 ವರ್ಷದ ಬಳಿಕ ಟೆಕ್ ಕಂಪನಿಗೆ ಸೇರುವಾಗ ವಾರ್ಷಿಕ ವೇತನವಾಗಿ ಸಿಗಲಿದೆ. ಇನ್ನುಳಿದ ಶಾಲಾ ಫೀಸ್ ಮರಳಿ ಪಡೆಯಲು ಎರಡು ಜನ್ಮ ಬೇಕಾಗಬಹುದು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮಧ್ಯಮ ವರ್ಗ ಕುಟುಂಬ ಶಿಕ್ಷಣ, ಆರೋಗ್ಯಕ್ಕಾಗಿ ಜೀವನ ಮುಡಿಪಾಗಿಟ್ಟರು ಸಾಲದು. ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುದಿಲ್ಲ. ಸರ್ಕಾರಿ ಶಾಲೆಯನ್ನು ಗುಣಟ್ಟದ ಶಾಲೆಗಳಾಗಿ ಪರಿವರ್ತಿಸಲಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಶಿಕ್ಷಣ ಕೇವಲ ಶ್ರೀಮಂತರ ವಿಷಯವಾಗಲಿದೆ. ಮಧ್ಯಮ ವರ್ಗ, ಬಡವರಿಗೆ ಶಿಕ್ಷಣದಲ್ಲೂ ಇತಿಮಿತಿಗಳೇ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣ ಉದ್ಯಮವಾಗಿ ಬದಲಾಗಿದೆ ಎಂದು ಕಮೆಂಟ್ಸ್ ಮಾಡಿದ್ದಾರೆ.
ಶಾಲೆ ಮಕ್ಕಳಿಗೆ ಹಬ್ಬ, ಜನ್ಮದಿನ ವಿಶೇಷ ಊಟಕ್ಕೆ ಅವಕಾಶ..!