Asianet Suvarna News Asianet Suvarna News

ದ್ವಿತೀಯ ಪಿಯು ಫಲಿತಾಂಶ: ಉಡುಪಿ ರಾಜ್ಯಕ್ಕೇ ಪ್ರಥಮ, ಬಾಲಕಿಯರದ್ದೇ ಮೇಲುಗೈ!

ಪಿಯುಸಿ ಫಲಿತಾಂಶಕ್ಕೂ ಮುನ್ನವೇ ವೆಬ್ ಸೈಟಿನಲ್ಲಿ ರಿಸಲ್ಟ್ ಲಭ್ಯ| ವಿದ್ಯಾರ್ಥಿಗಳ ಮೊಬೈಲ್ ಗೂ ಆಗಲೇ ಬರ್ತಿದೆ ಫಲಿತಾಂಶ| 11.30 ಕ್ಕೆ ಅಧಿಕೃತ ಫಲಿತಾಂಶ ಪ್ರಕಟ ಮಾಡ್ತೀವಿ ಎಂದು ಬೋರ್ಡ್ ತಿಳಿಸಿತ್ತು| ಈಗ ಫಲಿತಾಂಶ ಪ್ರಕಟಕ್ಕೂ ಮುನ್ನವೇ ವೆಬ್ ಸೈಟ್ ಹಾಗೂ ಎಸ್ ಎಂ ಎಸ್ ಮೊಬೈಲ್ ಗೆ ಫಲಿತಾಂಶ ರವಾನೆ

Karnataka PUC 2nd Year Results 2020 declared
Author
Bangalore, First Published Jul 14, 2020, 11:27 AM IST

ಬೆಂಗಳೂರು(ಜು.14): 2019-20 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಅವಧಿಗೂ ಮೊದಲೇ ಪ್ರಕಟವಾಗಿದೆ. ಅಲ್ಲದೇ ಇಲಾಖೆ ಅಧಿಕೃತವಾಗಿ ಪ್ರಕಟಗೊಳಿಸುವುದಕ್ಕೂ ಮೊದಲೇ ವೆಬ್‌ಸೈಟ್‌ ಹಾಗೂ ವಿದ್ಯಾರ್ಥಿಗಳ ಮೊಬೈಲ್‌ಗೆ ರಿಸಲ್ಟ್‌ ಕಳುಹಿಸಲಾಗಿದೆ. ಶೇಕಡಾ 61.80 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದು, ವಿಜಯಪುರ ಕೊನೆ ಸ್ಥಾನ ಪಡೆದಿದೆ.

11.30 ಕ್ಕೆ ಅಧಿಕೃತ ಫಲಿತಾಂಶ ಪ್ರಕಟ ಮಾಡ್ತೀವಿ ಎಂದು ಬೋರ್ಡ್ ತಿಳಿಸಿತ್ತು. ಆದರೀಗ ಈಗ ಫಲಿತಾಂಶ ಪ್ರಕಟಕ್ಕೂ ಮುನ್ನವೇ ವೆಬ್ ಸೈಟ್ ಹಾಗೂ ಎಸ್ ಎಂ ಎಸ್ ಮೊಬೈಲ್ ಗೆ ಫಲಿತಾಂಶ ರವಾನೆ ಮಾಡಲಾಗಿದೆ. www.karresults.nic.in ನಲ್ಲಿ ಲಭ್ಯ

ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲು ಮಲ್ಲೇಶ್ವರನ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಗೆ ಸುರೇಶ್ ಕುಮಾರ್ ಆಗಮಿಸಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಕನಗವಲ್ಲಿ ಉಪಸ್ಥಿತಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಕೂಡಾ ಉಪಸ್ಥಿತರಿದ್ದಾರೆ.

ಸುದ್ದಿಗೋಷ್ಟಿಯ ಪ್ರಮುಖ ವಿವರ

ಅನೇಕ ಸವಾಲುಗಳ ನಡುವೆ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಯಾವುದೇ ಅವಘಡ ಇಲ್ಲದೇ ಈ ಪರೀಕ್ಷೆ ನಡೆಸಿ, ಮೌಲ್ಯಮಾಪನ ನಡೆಸಿ ಫಲಿತಾಂಶ ನೀಡಿದ ಪಿಯುಸಿ ನಿರ್ದೇಶಕಿಯಾದ ಕನಕವಲ್ಲಿ ಹಾಗೂ ತಂಡಕ್ಕೆ ವಿಶೇಷ ಅಭಿನಂದದನೆ ಸಲ್ಲಿಸುತ್ತೇನೆ.

1016  ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದಿತ್ತು. ಅಲ್ಲದೇ ಸುಮಾರು 70 ಮೌಲ್ಯಮಾಪನ ಕೇಂದ್ರಗಳಲ್ಲಿ ಮೇ. 16ರಿಂದ ಜುಲೈ 9ವರೆಗೆ ಮೌಲಲ್ಯಮಾಪನ ಕಾರ್ಯ ನಡೆದಿದೆ. ಇದರಲ್ಲಿ 11970 ಮೌಲ್ಯಮಾಪಕರು ಪಾಲ್ಗೊಂಡಿದ್ದು, ಇವರೆಲ್ಲರಿಗೂ ಶಿಕ್ಷಣ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ.

ಫಲಿತಾಂಶ:

ಪರೀಕ್ಷೆಯಲ್ಲಿ ಒಟ್ಟು 6 ಲಕ್ಷದ 75 ಸಾವಿರ 277 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಅದರಲ್ಲಿ 5,66,267 ಮಂದಿ ಹೊಸ ಪರೀಕ್ಷಾರ್ಥಿಗಳು. ಇವರಲ್ಲಿ 3,84,947 ಮಂದಿ ಉತ್ತೀರ್ಣರಾಗಿದ್ದಾರೆ. 69.20ಮಂದಿ ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ ಶೇಕಡವಾರು 69.68 ರಷ್ಟಿತ್ತು.

ಪುನರಾವರ್ತಿತ ಅಭ್ಯರ್ಥಿಗಳು 91 ಸಾವಿರದ 25 ವಿದ್ಯಾರ್ಥಿಗಳು. ಇವರಲ್ಲಿ 25 ಸಾವಿರದ 602 ವಿದ್ಯಾರ್ಥಿಗಳು ತೇರ್ಗಡೆ.

ಈ ಬಾರಿ ಖಾಸಗಿ ಅಭ್ಯರ್ಥಿಗಳು ಹಾಜರಾದ 27 ಸಾವಿರದ 985, ಇವರಲ್ಲಿ 6 ಸಾವಿರದ 748 ಖಾಸಗಿ ಅಭ್ಯರ್ಥಿಗಳು ತೇರ್ಗಡೆ.

20,948 ಜನ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಶೇ. 68.24 ರಷ್ಟು ಬಾಲಕಿಯರು ಉತ್ತೀರ್ಣರಾದರೆ,  ಶೇ. 55.29 ಬಾಲಕರು ಉತ್ತೀರ್ಣರಾಗಿದ್ದಾರೆ.. 

ಒಟ್ಟಾರೆಯಾಗಿ ಶೇಕಡಾ 61.80 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ ಇದು ಶೇ. 61.73. ಈ ವರ್ಷವೂ ಬಾಲಕಿಯರದ್ದೇ ಮೇಲುಗೈ.

ವಿಭಾಗವಾರು ಫಲಿತಾಂಶ

ವಿಜ್ಞಾನ ವಿಭಾಗದಲ್ಲಿ ಶೇ. 76.3 ರಷ್ಟು ಮಂದಿ ತೇರ್ಗಡೆ. ಕಳೆದ ವರ್ಷ ಇದು ಶೇ. 66.58 ಇತ್ತು.

ವಾಣಿಜ್ಯ ವಿಭಾಗದಲ್ಲಿ ಶೇ.65.52 ರಷ್ಟು ತೇರ್ಗಡೆ. ಕಳೆದ ವರ್ಷ ಇದು ಶೇ. 66.39 ರಷ್ಟಿತ್ತು.

ಕಲಾ ವಿಭಾಗದಲ್ಲಿ ಈ ಬಾರಿ ಶೇ. 41.27 ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ಕಳೆದ ಬಾರಿ ಶೇ. 50. 53 ಇತ್ತು.

ಶ್ರೇಣಿ

20,948 ಮಂದಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

ರಾಜ್ಯದಲ್ಲಿ ಉನ್ನತ ಶ್ರೇಣಿ(distinction) ಪಡೆದ ವಿದ್ಯಾರ್ಥಿಗಳ ಸಂಖ್ಯೆ- 68,866

ಪ್ರಥಮ ದರ್ಜೆ (ಶೇ. 85 ರಿಂದ-60 )2,21,866

ದ್ವಿತೀಯ ದರ್ಜೆ- 77,455

ತೃತೀಯ ದರ್ಜೆ- 49,110

ಇನ್ನು ಅನುತ್ತೀರ್ಭಗೊಂಡವರಿಗೆ ದ್ವಿತೀಯ ಪಿಯು ಪೂರಕ ಪರೀಕ್ಷಾ ದಿನಾಂಕ ಜುಲೈ ಕೊನೆ ವಾರದಲ್ಲಿ ಪ್ರಕಟವಾಗಲಿದೆ. ಪರೀಕ್ಷಾ ಶುಲ್ಕ ಕಟ್ಟಲು ಜುಲೈ 31 ಕೊನೆ ದಿನಾಂಕ ಜುಲೈ 31.

ಉತ್ತರ ಪತ್ರಕೆಯ ಸ್ಕ್ಯಾನಿಂಗ್ ಪ್ರತಿಗಾಗಿ  ಜುಲೈ 16 ರಿಂದ ಜುಲೈ 30 ರವರೆಗೆ ಅವಕಾಶ

ಯಾವ ಜಿಲ್ಲೆಗೆ ಯಾವ ಸ್ಥಾನ?

ಪ್ರಥಮ ಸ್ಥಾನ - ಉಡುಪಿ ( 90.71)

ದ್ವಿತೀಯ ಸ್ಥಾನ- ದಕ್ಷಿಣ ಕನ್ನಡ (90.71)

ತೃತೀಯ ಸ್ಥಾನ- ಕೊಡುಗು (81.53)

ಕೊನೆಯ ಸ್ಥಾನ- ವಿಜಯಪುರ- ( 51.42)

ಇದು ಪ್ರಶ್ನೆ ಪತ್ರಿಕೆ ಸೋರಿಕೆ ಇಲ್ಲದೆ ನಡೆದ ಪ್ರಥಮ ಪರೀಕ್ಷೆಯಾಗಿದೆ. 

ಶೂನ್ಯ ಫಲಿತಾಂಶ 88 ಕಾಲೇಜುಗಳು

ಸರ್ಕಾರಿ ಪದವಿ ಪೂರ್ವ ಕಾಲೇಜು- 05

ಅನುದಾನಿತ ಪದವಿ ಪೂರ್ವ ಕಾಲೇಜು- 05

ಅನುದಾನ ರಹಿತ ಪದವಿ ಪೂರ್ವ ಕಾಲೇಜು -78

 

 

Follow Us:
Download App:
  • android
  • ios