ಬೆಂಗಳೂರು (ಜುಲೈ 19): ಬೆಂ.ಮ.ಸಾ.ಸಂಸ್ಥೆಯು ವಿದ್ಯಾರ್ಥಿ ರಿಯಾಯಿತಿ ಪಾಸ್‌ನ ಸೌಲಭ್ಯವು ಎಲ್ಲಾ ವಿದ್ಯಾರ್ಥಿಗಳಿಗೂ ತಲುಪಿಸುವ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. 

ಬಸ್ ಪಾಸ್‌ಗಾಗಿ ಅರ್ಜಿ ಭರ್ತಿ ಮಾಡಿ, ಶಾಲಾ/ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಿಸಿ, ಬಸ್ ನಿಲ್ದಾಣಗಳಲ್ಲಿ ಸಲ್ಲಿಸುವುದನ್ನು ತಪ್ಪಿಸುವ ಸಲುವಾಗಿ ಹಾಗಸ್ವಿದ್ಯಾರ್ಥಿಗಳು ಬಸ್‍ ಪಾಸ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ಆನ್‍ಲೈನ್ ಮೂಲಕ ಸಲ್ಲಿಸುವ ವ್ಯವಸ್ಥೆಯನ್ನು ಸಂಸ್ಥೆಯು ಜಾರಿಗೆ ತಂದಿದೆ. 

ನೂತನ ವ್ಯವಸ್ಥೆಯು ಶಿಕ್ಷಣ ಇಲಾಖೆಯ ಡೆಟಾಬೆಸ್‍ನೊಂದಿಗೆ ನೇರ ಸಂಪರ್ಕ ಹೊಂದಿದ್ದು, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ವಿದ್ಯಾರ್ಥಿಗಳೇ ನೇರವಾಗಿ ಇ-ಫಾರಂ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಪಾಸ್ ಅರ್ಜಿ ಸಲ್ಲಿಸುವ ಮತ್ತು ಪಾಸ್ ವಿತರಣೆಯ ವಿವರ ಇಂತಿದೆ.

 

ವಿದ್ಯಾರ್ಥಿಗಳ ಪಾತ್ರ:
1. 1 ರಿಂದ 7 ನೇ ತರಗತಿಯವರೆಗೆ: ವಿದ್ಯಾರ್ಥಿಗಳು ಪಾಸ್ ಪಡೆಯಲು ಇಚ್ಛಿಸಿದ್ದಲ್ಲಿ ಶಾಲೆಯಲ್ಲಿ ತಿಳಿಸುವುದು ಹಾಗೂ ಪಾಸ್ ಮೊತ್ತವಾದ ರೂ.150/- ನ್ನು ಶಾಲೆಯಲ್ಲಿ ಪಾವತಿಸಬೇಕು

2. 8ನೇ ತರಗತಿಯಿಂದ ರಿಂದ 10ನೇ ತರಗತಿಯವರೆಗೆ : ವಿದ್ಯಾರ್ಥಿಗಳು ಪಾಸ್ ಪಡೆಯಲು ಇಚ್ಛಿಸಿದ್ದಲ್ಲಿ ಶಾಲೆಯಲ್ಲಿ ತಿಳಿಸುವುದು ಹಾಗೂ ನಿಗದಿತ ಪಾಸ್ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸಬೇಕು

3. ಪಿ.ಯು.ಸಿ : ವಿದ್ಯಾರ್ಥಿಗಳು ಪಾಸ್ ಪಡೆಯಲು ಇಚ್ಛಿಸಿದ್ದಲ್ಲಿ ಕಾಲೇಜಿನಲ್ಲಿ ತಿಳಿಸುವುದು ಹಾಗೂ ನಿಗದಿತ ಪಾಸ್ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸಬೇಕು

 

ಶಾಲೆಯ/ಕಾಲೇಜಿನ  ನೋಡಲ್ ಅಧಿಕಾರಿಯ ಪಾತ್ರ:
1. ಪಾಸ್ ನ್ನು ಪಡೆಯಲು ಇಚ್ಛಿಸಿದ ವಿದ್ಯಾರ್ಥಿಗಳ ಅರ್ಜಿಯನ್ನು ಶಿಕ್ಷಣ ಇಲಾಖೆಯ SATS(Student Achivement Tracking System)/ PU online Portl ಅಪ್ಲಿಕೇಷನ್ನಲ್ಲಿ ಸಲ್ಲಿಸುವುದು.

2. SATS(Student Achivement Tracking System)/ PU online Portal ಅಪ್ಲಿಕೇಷನ್ನಲ್ಲಿ ಬೆಂ.ಮ.ಸಾ.ಸಂಸ್ಥೆ ವಿದ್ಯಾರ್ಥಿ ಬಸ್ ಪಾಸ್ : ಎಂಬ ಕಲಂ ಇರುತ್ತದೆ ಈ ಕಲಂನ್ನು ಕ್ಲಿಕ್ ಮಾಡಿದ ಕೂಡಲೇ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಹೆಸರು ಮೂಡುತ್ತದೆ.

3. Search ಆಯ್ಕೆಯಲ್ಲಿ ವಿದ್ಯಾರ್ಥಿಯ ಗುರುತಿನ ಸಂಖ್ಯೆಯನ್ನು ನಮೂದಿಸಿದ ಕೂಡಲೇ ವಿದ್ಯಾರ್ಥಿಯ ಹೆಸರು ಆಯ್ಕೆಯಾಗುತ್ತದೆ. ಸದರಿ ಹೆಸರನ್ನು ಕ್ಲಿಕ್ ಮಾಡಿದ ಕೂಡಲೇ ವಿದ್ಯಾಪಾಸಿನ ಅರ್ಜಿಯಲ್ಲಿ ಸದರಿ ವಿದ್ಯಾರ್ಥಿಯ ವಿವರಗಳು ಮೂಡುತ್ತವೆ.

4. ಈ ಅರ್ಜಿಯಲ್ಲಿ ವಿದ್ಯಾರ್ಥಿಯು ಪ್ರಯಾಣಿಸುವ ಮಾರ್ಗದ ವಿವರಗಳನ್ನು ನಮೂದಿಸುವುದು ಹಾಗೂ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಭಾವಚಿತ್ರ ಪಡೆದು ಸ್ಕ್ಯಾನ್ ಮಾಡಿ ಅಪ್ಲೊಡ್ ಮಾಡುವುದು. ನಂತರ ಅರ್ಜಿಯನ್ನು ಸಲ್ಲಿಸುವುದು( click Submit).Submit  ಮಾಡಿದ ನಂತರ ಅರ್ಜಿಯ ಸ್ವೀಕೃತಿ ಸಂಖ್ಯೆಯು ಮೂಡುವುದು.

5. ಸ್ವೀಕೃತಿ ಸಂಖ್ಯೆಯ ಮೂಲಕ ಪಾಸ್ ಮುದ್ರಣ ಮತ್ತು ರವಾನೆಯ ಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

6. 1 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಂದ ನಿಗದಿತ ಪಾಸ್ ಮೊತ್ತವನ್ನು ಪಡೆದು, ಬೆಂ.ಮ.ಸಾ.ಸಂಸ್ಥೆಗೆ ಪಾವತಿಸಬೇಕು.

 

ಬೆಂ.ಮ.ಸಾ.ಸಂಸ್ಥೆಯ ಪಾತ್ರ:

1. SATS(Student Achivement Tracking System)/ PU online Portal ಅಪ್ಲಿಕೇಷನ್ನಲ್ಲಿ ಅರ್ಜಿಯನ್ನು ಸ್ವೀಕರಿಸಿದ ನಂತರ ಸಂಸ್ಥೆಯು ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸನ್ನು ಮುದ್ರಣಗೊಳಿಸುತ್ತದೆ.

2. 1ನೇ ತರಗತಿಯಿಂದ 7 ನೇ ತರಗತಿ ಹಾಗೂ ಪಿ.ಯು.ಸಿ ವಿದ್ಯಾಗಳ ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸ್‌ಗಳನ್ನು ಸಂಸ್ಥೆಯ ಸಿಬ್ಬಂದಿಗಳ ಮೂಲಕ ಶಾಲೆಗೆ ರವಾನಿಸಲಾಗುವುದು.

3. ಪ್ರೌಢಶಾಲೆ ವಿದ್ಯಾರ್ಥಿಗಳ ಪಾಸ್‌ಗಳನ್ನು ಅಂಚೆ ಮೂಲಕ ವಾಸಸ್ಥಳ ವಿಳಾಸಕ್ಕೆ ವಿತರಿಸಲಾಗುವುದು.


ಮೊಬೈಲ್ ಇ-ಫಾರ್ಮ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

1. ಮೊಬೈಲ್ ಮೂಲಕ 161 ಗೆ ಕರೆ ಮಾಡಬೇಕು 
2. ಕನ್ನಡ/ ಇಂಗ್ಲೀಷ್ ಭಾಷೆಯನ್ನು Select ಮಾಡಿಕೊಳ್ಳಬೇಕು
3. ಬೆಂ.ಮ.ಸಾ.ಸಂಸ್ಥೆಯ ಸೇವೆಗಾಗಿ 6 ನ್ನು Select ಮಾಡಿಕೊಳ್ಳಬೇಕು
4. ವಿದ್ಯಾರ್ಥಿ ಬಸ್ ಪಾಸ್ ಗಾಗಿ 2 ನ್ನು Select ಮಾಡಿಕೊಳ್ಳಬೇಕು
5. ವಿದ್ಯಾರ್ಥಿ ಪಾಸ್ ನ ಅರ್ಜಿಯನ್ನು ವೆಬ್ ಲಿಂಕ್ ಮೂಲಕ ವಿದ್ಯಾರ್ಥಿಯ ಮೊಬೈಲ್ ಗೆ ಕಳುಹಿಸಲಾಗುತ್ತದೆ
6. ವೆಬ್ ಲಿಂಕ್ ಓಪನ್ ಮಾಡಿದಾಗ 10ನೇ ತರಗತಿಯವರೆಗೆ, ಪಿಯುಸಿ ಮತ್ತು ಕಾಲೇಜು ವಿದ್ಯಾರ್ಥಿ ಎಂಬ ಮೂರು ಆಯ್ಕೆಗಳಿದ್ದು, ಸಂಬಂಧಿಸಿದನ್ನು ಆಯ್ಕೆ ಮಾಡಿಕೊಳ್ಳಬೇಕು

 

ವೆಬ್‌ಸೈಟ್ ಮೂಲಕ:

1. www.mybmtc.com ನಲ್ಲಿ ವಿದ್ಯಾರ್ಥಿಪಾಸ್ ಆಯ್ಕೆಯನ್ನು ಮಾಡಿಕೊಳ್ಳಬೇಕು
2. ಇ-ಫಾರಂ ಅನ್ನು ಆಯ್ಕೆ ಮಾಡಿಕೊಳ್ಳಬೇಕು
3. ವೆಬ್ ಲಿಂಕ್ ನ್ನು ಓಪನ್ ಮಾಡಿದಾಗ 10ನೇ ತರಗತಿಯವರೆಗೆ, ಪಿಯುಸಿ ಮತ್ತು ಕಾಲೇಜು ವಿದ್ಯಾರ್ಥಿ ಎಂಬ ಮೂರು ಆಯ್ಕೆಗಳಿದ್ದು, ಸಂಬಂಧಿಸಿದನ್ನು ಆಯ್ಕೆ ಮಾಡಿಕೊಳ್ಳಬೇಕು 

 

10ನೇ ತರಗತಿಯವರೆಗಿನ ವಿದ್ಯಾರ್ಥಿಗಳು:

1. ಶಾಲೆಯ ಎನ್ರೋಲ್ಮೆಂಟ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಬೇಕು
2. SATS ಅಪ್ಲಿಕೇಶನ್ ನಲ್ಲಿರುವ ವಿದ್ಯಾರ್ಥಿಯ ಮಾಹಿತಿಯೊಂದಿಗೆ ಅರ್ಜಿ ಮೂಡುತ್ತದೆ.
3. ವಿದ್ಯಾರ್ಥಿ ಪಾಸ್ ನ ಪ್ರಯಾಣದ ವಿವರಗಳನ್ನು, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸವನ್ನು ನಮೂದಿಸಿ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು
4. ಸದರಿ ಅರ್ಜಿ ಅನುಸಾರ ಪಾಸ್ ನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗುವುದು
5. ಸ್ಮಾರ್ಟ್ ಕಾರ್ಡ್ ಮುದ್ರಣಗೊಂಡ ನಂತರ ವಿದ್ಯಾರ್ಥಿಯ ವಿಳಾಸಕ್ಕೆ ಅಂಚೆ ಮೂಲಕ ರವಾನಿಸಲಾಗುವುದು
6. ವಿದ್ಯಾರ್ಥಿಯು ಸ್ಮಾರ್ಟ್ ಕಾರ್ಡ್ ಸ್ವೀಕರಿಸುವಾಗ ಪಾಸ್ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸಬೇಕು
 

ಪಿಯುಸಿ ವಿದ್ಯಾರ್ಥಿಗಳು:

1. ಕಾಲೇಜಿನ ಎನ್ರೋಲ್ಮೆಂಟ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಬೇಕು
2. Pu online portal ನಲ್ಲಿರುವ ಮಾಹಿತಿಯೊಂದಿಗೆ ಅರ್ಜಿ ಮೂಡುತ್ತದೆ.
3. ವಿದ್ಯಾರ್ಥಿಯು ಪಾಸ್ ಪ್ರಯಾಣದ ವಿವರ,  ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸವನ್ನು ನಮೂದಿಸಿ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು
4. ಸದರಿ ಅರ್ಜಿಯನುಸಾರ ಪಾಸನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗುವುದು.
5. ಸ್ಮಾರ್ಟ್ ಕಾರ್ಡ್ ಮುದ್ರಣಗೊಂಡ ನಂತರ ವಿದ್ಯಾರ್ಥಿಯ ವಿಳಾಸಕ್ಕೆ ಅಂಚೆ ಮೂಲಕ ರವಾನಿಸಲಾಗುವುದು
6. ವಿದ್ಯಾರ್ಥಿಯು ಸ್ಮಾರ್ಟ್ ಕಾರ್ಡ್ ಸ್ವೀಕರಿಸುವಾಗ ಪಾಸ್ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸಬೇಕು
   

ಕಾಲೇಜು ವಿದ್ಯಾರ್ಥಿಗಳು:

1. ವಿದ್ಯಾರ್ಥಿಯ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವರ್ಗ, ವಿಳಾಸ, ಕಾಲೇಜಿನ ವಿವರ,  ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಪ್ರಯಾಣದ ವಿವರ ಮತ್ತು ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು
2. ಅರ್ಜಿಯು ಸಂಬಂಧಿಸಿದ ಕಾಲೇಜಿನ ಲಿಂಕ್ ಗೆ ಹೋಗುವುದು. ನಂತರ ಕಾಲೇಜಿನ ನೊಡಲ್ ಅಧಿಕಾರಿಯು ಅರ್ಜಿಯನ್ನು ಪರಿಶೀಲಿಸಿ ದೃಢೀಕರಿಸಿ ಸಲ್ಲಿಸಬೇಕು
3. ಕಾಲೇಜಿನಿಂದ ದೃಢೀಕರಿಸಿದ ಅರ್ಜಿಯು ಬೆಂ.ಮ.ಸಾ.ಸಂಸ್ಥೆಗೆ ಬರುತ್ತದೆ. ಸದರಿ ಅರ್ಜಿಯನುಸಾರ ಪಾಸ್ ನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗುವುದು
4. ಸ್ಮಾರ್ಟ್ ಕಾರ್ಡ್ ಮುದ್ರಣಗೊಂಡ ನಂತರ ವಿದ್ಯಾಯ ವಿಳಾಸಕ್ಕೆ ಅಂಚೆ ಮೂಲಕ ಸ್ಮಾರ್ಟ್ಕಾರ್ಡನ್ನು ರವಾನಿಸಲಾಗುವುದು
5. ವಿದ್ಯಾರ್ಥಿಗಳು ಪಾಸ್ ಮೊತ್ತವನ್ನು ಆನ್ ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಿದ್ದು, ರೂ.190/- ಸೇವಾ ಶುಲ್ಕವಾಗಿ ಪಾವತಿಸಬೇಕು.
6. ವಿದ್ಯಾರ್ಥಿಯು ಸ್ಮಾರ್ಟ್ ಕಾರ್ಡ್ ಸ್ವೀಕರಿಸುವಾಗ ಪಾಸ್ ಮೊತ್ತವನ್ನು ರೂ.200/- ನ್ನು ಸೇವಾ ಶುಲ್ಕವಾಗಿ ಅಂಚೆ ವ್ಯಕ್ತಿಯ ಬಳಿ ಪಾವತಿಸಬೇಕು

ವಿದ್ಯಾರ್ಥಿಗಳು ವಿದ್ಯಾರ್ಥಿ ಪಾಸ್‌ಗಾಗಿ ದಿನಾಂಕ:31.07.2018 ರ ಒಳಗಾಗಿ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.