ಬೆಂಗಳೂರು, [ನ.17]: ಡಿಜಿಟಲ್ ಜ್ಞಾನ ಇಂದಿನ ತುರ್ತು ಅವಶ್ಯಕತೆ. ‌ಮಾಧ್ಯಮದ ಪ್ರತಿ  ಹಂತವೂ, ಪ್ರತಿ ಸ್ವರೂಪವೂ ಡಿಜಿಟಲ್ ರೂಪ ಪಡೆದುಕೊಳ್ಳುತ್ತಿದೆ. 

ನವ ಮಾಧ್ಯಮಗಳ ಓದುಗರು ಕೂಡ ಪ್ರತಿಯೊಂದನ್ನು (ನ್ಯೂಸ್ ಪೇಪರ್, ಟಿವಿ ಅಥವಾ ರೇಡಿಯೋ) ಡಿಜಿಟಲ್ ವೇದಿಕೆಯ ಮೇಲೆ  ಓದಲು, ನೋಡಲು, ಕೇಳಲು ಬಯಸುತ್ತಿದ್ದಾರೆ. 

ಹೀಗಿರುವಾಗ ಪತ್ರಕರ್ತರು ಈ ಜ್ಞಾನದಿಂದ ಹೇಗೆ ದೂರ ಉಳಿಯಲು ಸಾಧ್ಯ..? ಕಾರ್ಯನಿರತ ಮತ್ತು ಭವಿಷ್ಯದ  ಪತ್ರಕರ್ತರಿಗೆ ( ಫ್ರಿಲಾನ್ಸ್ ) ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಖ್ಯಾತ ನಿರೂಪಕ ಹಾಗೂ ಪತ್ರಕರ್ತ ಗೌರೀಶ್ ಅಕ್ಕಿ ನೇತೃತ್ವದ ಆಲ್ಮಾ ಮೀಡಿಯಾ ಸ್ಕೂಲ್ 3 ದಿನಗಳ ಡಿಜಿಟಲ್ ಮೀಡಿಯಾ ಕಾರ್ಯಾಗಾರ ಹಮ್ಮಿಕೊಂಡಿದೆ. 

ಕೇಂದ್ರದ ಹೊಸ ಯೋಜನೆ, ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ BSYಗೆ ಸೆಕೆಂಡ್ ಪ್ಲೇಸ್: ನ. 17ರ ಟಾಪ್ 10 ಸುದ್ದಿ

ಈ ಕಾರ್ಯಗಾರದಲ್ಲಿ ಕ್ಷೇತ್ರದ ಪರಿಣಿತರು ಪ್ರಾಯೋಗಿಕವಾಗಿ ತಮ್ಮ  ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. ಇದೇ ನವೆಂಬರ್ 28ರಿಂದ 30ರವರೆಗೆ 3 ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗ ಕಾರ್ಯಗಾರ ನಡೆಯಲಿದೆ.

ವೆಬ್ ಸೈಟ್, ಸೋಷಿಯಲ್ ಮೀಡಿಯಾ, ಈ-ಪತ್ರಿಕೋದ್ಯಮ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮತ್ತು ಹವ್ಯಾಸಿ ಪತ್ರಕರ್ತರಿಗೆ ಇದು ಸುವರ್ಣಾವಕಾಶ. ಸೀಮಿತಿ ಸ್ಥಾನಗಳು ಮಾತ್ರ ಲಭ್ಯ. ಆಸಕ್ತರು ಕೂಡಲೇ 7618746667 ನಂಬರಿಗೆ ಸಂಪರ್ಕಿಸಿ ನೋಂದಾಣಿ ಮಾಡಿ,

ಕಾರ್ಯಗಾರ ನಡೆಯುವ ಸ್ಥಳ
ಆಲ್ಮಾ ಮೀಡಿಯಾ ಸ್ಕೂಲ್ , AMC City ಕ್ಯಾಂಪಸ್ 33ನೇ ಅಡ್ಡ ರಸ್ತೆ 2ನೇ ಮುಖ್ಯ ರಸ್ತೆ, 7ನೇ ಬ್ಲಾಕ್ ಜಯನಗರ, ಬೆಂಗಳೂರು-560070