Asianet Suvarna News Asianet Suvarna News

SSLC ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2020-21 ಸಾಲಿನ SSLC ತಾತ್ಕಾಲಿಕ ವೇಳಾಪಟ್ಟಿ ಪ್ರಕಟ | ಮಾ.20 ರಿಂದ ಏಪ್ರಿಲ್ 3ರ ವರೆಗೆ ಪರೀಕ್ಷೆ|  ಆಕ್ಷೇಪಣೆ ಸಲ್ಲಿಸಲು ನವೆಂಬರ್ 19 ಕೊನೆ ದಿನ

2020-21 SSLC annual exams provisional time table released
Author
Bengaluru, First Published Oct 19, 2019, 7:53 PM IST

ಬೆಂಗಳೂರು, [ಅ.19]: ಮೊನ್ನೇ ಅಷ್ಟೇ 2020-21ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿತ್ತು.ಇದರ ಬೆನ್ನಲ್ಲಿಯೇ ಇದೀಗ SSLC (10ನೇ ತರಗತಿ] ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ.

ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

 2020-21ನೇ ಸಾಲಿನ  SSLC ತಾತ್ಕಾಲಿಕ ವೇಳಾಪಟ್ಟಿಯನ್ನು  ಪ್ರೌಢಶಿಕ್ಷಣ ಮಂಡಳಿ ಇಂದು [ಶನಿವಾರ] ಪ್ರಕಟಿಸಿದ್ದು, 2020ರ ಮಾರ್ಚ್ 20ರಿಂದ ಏಪ್ರಿಲ್ 3ರ ವರೆಗೆ ಪರೀಕ್ಷೆಗಳು ನಡೆಯಲಿವೆ. 

ಸಿದ್ದು-ರವಿ ಟ್ವಿಟ್ ವಾರ್, ಕೈ ಪ್ರಣಾಳಿಕೆ ಕದ್ದೊಯ್ಯಲು ಮೋದಿಗೆ ಮನವಿ: ಅ.19ರ ಟಾಪ್ 10 ಸುದ್ದಿ!

ಬೆಳಗ್ಗೆ 9ರಿಂದ ಮಧ್ಯಾಹ್ನ 12.45 ವರಗೆ ಪರೀಕ್ಷೆಗಳು ನಡೆಯಲಿವೆ. ಈ ವೇಳಾಪಟ್ಟಿ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ನಾಳೆಯಿಂದ (20/10/2020) ರಿಂದ ಇದೇ ನವೆಂಬರ್ 19ರ ಒಳಗಾಗಿ ಪ್ರೌಢಶಿಕ್ಷಣ ಮಂಡಳಿಯ ನಿರ್ದೇಶಕರಿಗೆ ದೂರು ನೀಡಬಹುದಾಗಿದೆ ಎಂದು ಮಂಡಳಿ ತಿಳಿಸಿದೆ.

ವೇಳಾಪಟ್ಟಿ ಇಂತಿದೆ
* 20/03/2020: ಕನ್ನಡ, ತೆಲುಗು,ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಸಂಸ್ಕೃತ  
* 21/03/2020: ಅರ್ಥಶಾಸ್ತ್ರ ಮತ್ತು ತಂತ್ರಜ್ಞಾನ ಸಂಬಂಧಿ ಕೋರ್‌ ವಿಷಯಗಳು 
22/03/2020: ಭಾನುವಾರ ರಜೆ
* 23/03/2020: ಸಮಾಜ ವಿಜ್ಞಾನ
* 24/03/2020: ಮಂಗಳವಾರ ಪರೀಕ್ಷೆ ಇರುವುದಿಲ್ಲ
25/03/2020: ಯುಗಾದಿ ಹಬ್ಬದ ರಜಾ ದಿನ
* 26/03/2020: ರಾಜ್ಯಶಾಸ್ತ್ರ
27/03/2020: ಶುಕ್ರವಾರ ಪರೀಕ್ಷೆ ಇರುವುದಿಲ್ಲ
28/03/2020: ಶನಿವಾರ ಪರೀಕ್ಷೆ ಇರುವುದಿಲ್ಲ
29/03/2020: ಭಾನುವಾರ ಪರೀಕ್ಷೆ ಇರುವುದಿಲ್ಲ
* 30/03/2020: ಗಣಿತ, ಸಮಾಜ ಶಾಸ್ತ್ರ
* 01/04/2020: ಇಂಗ್ಲೀಷ್
* 02/04/2020: ಗುರುವಾರ ಪರೀಕ್ಷೆ ಇರುವುದಿಲ್ಲ
* 03/04/2020: ಹಿಂದಿ, ಇಂಗ್ಲಿಷ್‌, ಅರೆಬಿಕ್, ಉರ್ದು, ಪರ್ಷಿಯನ್, ಕೊಂಕಣಿ, ಸಂಸ್ಕೃತ, ತುಳು.

Follow Us:
Download App:
  • android
  • ios