ಹುಬ್ಬಳ್ಳಿ [ಅ.26]:  ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್‌ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿರುವ ಮೊಹಮ್ಮದ್‌ ಸಾದಿಕ್‌ ಜಾಫರ್‌ನನ್ನು ರೈಲ್ವೆ ಇಲಾಖೆ ಅಮಾನತು ಮಾಡಿದೆ. 

ಹುಬ್ಬಳ್ಳಿಯ ಅರವಿಂದನಗರ ನಿವಾಸಿಯಾದ ಸಾದಿಕ್‌, ಇಲ್ಲಿನ ಗದಗ ರಸ್ತೆಯ ರೈಲ್ವೆ ಕಾರ್ಯಾಗಾರದ ಎಲೆಕ್ಟ್ರಿಕ್‌ ವಿಭಾಗದಲ್ಲಿ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ತಿವಾರಿ ಹತ್ಯೆಯಲ್ಲಿ ಭಾಗಿಯಾದ ಆರೋಪದಡಿ ಐಎಸ್‌ಡಿ ಬಂಧಿಸಿ, ವಿಚಾರಣೆ ನಡೆಸಿ ಬಿಡುಗಡೆಗೊಳಿಸಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈತನ ಮೇಲೆ 2017ರಲ್ಲಿ ರೌಡಿಶೀಟರ್‌ ಪ್ರಕರಣವೂ ದಾಖಲಾಗಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ನೈಋುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ(ಸಿಪಿಆರ್‌ಒ) ಇ. ವಿಜಯಾ ತಿಳಿಸಿದ್ದಾರೆ.