ದಾವಣಗೆರೆ (ಅ.25): ವ್ಯಕ್ತಿಯೊಬ್ಬ ಕುರ್ ಕುರೇ ಆಸೆ ತೋರಿಸಿ 2 ವರ್ಷದ ಹೆಣ್ಣು ಮಗುವನ್ನು ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಬುಧವಾರ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಮಗೊಂಡನಹಳ್ಳಿ ಗ್ರಾಮದ ಶಿವಕುಮಾರ (30 ವರ್ಷ) ಆರೋಪಿ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಈತ ಇತ್ತೀಚೆಗಷ್ಟೇ ಜೈಲಿನಿಂದ ಬಂದಿದ್ದ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬುಧವಾರ ಮನೆ ಬಳಿ ಆಟವಾಡುತ್ತಿದ್ದ 2 ವರ್ಷದ ಹೆಣ್ಣು ಮಗುವಿಗೆ ಕುರ್ ಕುರೇ ಆಸೆ ತೋರಿಸಿ, ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. 

ನಂತರ ಗ್ರಾಮಸ್ಥರು ಆರೋಪಿಯನ್ನು ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಬಳಿಕ ಮಾಯಕೊಂಡ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.