Asianet Suvarna News Asianet Suvarna News

ಸಂತ್ರಸ್ತರಿಗೆ ರಾಖಿ ಕಟ್ಟಿಸಿಹಿ ತಿನ್ನಿಸಿದ ಶಾಸಕರ ಪತ್ನಿ, ತಾಯಿ

ಬೆಳಗಾವಿಯ ಚಿಕ್ಕೋಡಿಯಲ್ಲಿ ಶಾಸಕರ ಪತ್ನಿ ಹಾಗೂ ತಾಯಿ ನೆರೆ ಸಂತ್ರಸ್ತರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದಾರೆ. ಮಲಿಕವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರಿಗೆ ರಕ್ಷಾ ಬಂಧನದಂದು ರಾಖಿ ಕಟ್ಟಿ, ಸಿಹಿ ತಿನ್ನಿಸಿ ಶುಭಾಶಯ ತಿಳಿಸಿದ್ದಾರೆ.

mla wife and mother tie rakhi to flood victims in Belagavi
Author
Bangalore, First Published Aug 16, 2019, 12:28 PM IST

ಬೆಳಗಾವಿ(ಆ.16): ಶಾಸಕರ ಪತ್ನಿ ಹಾಗೂ ತಾಯಿ ನೆರೆ ಪರಿಹಾರ ಕೇಂದ್ರದಲ್ಲಿರುವವರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ರಾಖಿ ಹಬ್ಬ ಆಚರಿಸಿದ್ದಾರೆ.

ಮಹಾಪ್ರವಾಹದಿಂದ ಸೂರು ಕಳೆದುಕೊಂಡು ತಾಲೂಕಿನ ಮಲಿಕವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರಿಗೆ ರಕ್ಷಾ ಬಂಧನದಂದು ರಾಖಿ ಕಟ್ಟಿ, ಸಿಹಿ ತಿನ್ನಿಸುವ ಮೂಲಕ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ಶಾಸಕ ಗಣೇಶ ಹುಕ್ಕೇರಿ ಪತ್ನಿ ಸ್ವಪ್ನಾಲಿ ಹಾಗೂ ತಾಯಿ ನೀಲಾಂಬಿಕಾ ಹುಕ್ಕೇರಿ ಧೈರ್ಯ ತುಂಬಿದರು.

ರಕ್ಷಾ ಬಂಧನ: ಮಹಿಳೆಯರಿಗೆ ಉಚಿತ ಆಟೋ ಸೇವೆ

ತಾಲೂಕಿನ ಮಲಿಕವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿರುವ ನೆರೆಯಲ್ಲಿ ಸಿಲುಕಿ ನಮಗೆ ಈ ವರ್ಷ ರಕ್ಷಾ ಬಂಧನ ಹಬ್ಬವೇ ಆಚರಿಸುವ ಅದೃಷ್ಟವೇ ಇಲ್ಲ ಎಂದು ಕಂಗಾಲಾಗಿ ಕುಳಿತಿದ್ದ ನಿರಾಶ್ರಿತ ಜನರ ಬಳಿ ಶಾಸಕರ ಪತ್ನಿ ಸ್ವಪ್ನಾಲಿ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಪತ್ನಿ ನೀಲಾಂಬಿಕಾ ರಾಖಿ ಕಟ್ಟುವ ಮೂಲಕ ನೀವೆಲ್ಲ ನಮ್ಮ ಸಹೋದರರಿದ್ದಂತೆ. ಈ ಬಾರಿ ರಕ್ಷಾ ಬಂಧನವಿಲ್ಲ ಎನ್ನುವ ನೋವು ಇಟ್ಟುಕೊಳ್ಳಬೇಡಿ ಎಂದು ಭರವಸೆಯ ಮಾತುಗಳನ್ನಾಡಿದರು.

ಜೀವ ಕಾಪಾಡಿದ ಯೋಧರಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಕಳುಹಿಸಿಕೊಟ್ಟ ಸಂತ್ರಸ್ತರು!

Follow Us:
Download App:
  • android
  • ios