ಮೇಷ: ಬೆಲೆ ಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ ಮಾಡಿಕೊಳ್ಳುವಿರಿ. ಧನಾಗಮನವಾಗಲಿದೆ. ದುಷ್ಟರಿಂದ ದೂರ ಇರುವುದು ಒಳ್ಳೆಯದ್ದು.

ವೃಷಭ: ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ ಬರುವಂತೆ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು ಬಳಸಿಕೊಂಡರೆ ಒಳ್ಳೆಯ ಲಾಭ ಬರಲಿದೆ.

ಮಿಥುನ: ಸ್ಥಳೀಯ ಮಟ್ಟದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಪೂರ್ವ ತಯಾರಿ ಮುಗಿಯಲಿದೆ.

ಕಟಕ: ಮನೆ ಮತ್ತು ಮನವನ್ನು ಶುಚಿಯಾಗಿ ಇಟ್ಟುಕೊಳ್ಳಿ. ಇದರಿಂದ ಮನಶಾಂತಿ ಹೆಚ್ಚಾಗುತ್ತದೆ. ಸ್ವಚ್ಛತೆಯೇ ದೇವರು.

ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಈ ದಿಕ್ಕಿನಲ್ಲಿಟ್ಟರೆ ಕ್ಷೇಮ

ಸಿಂಹ: ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಬಂಧುಗಳ ಜೊತೆಗೆ ಸಣ್ಣ ಮನಸ್ಥಾಪ, ಜೀವನ ಕ್ರಮದಲ್ಲಿ ವ್ಯತ್ಯಯ.

ಕನ್ಯಾ: ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಡೆಯಲ್ಲಿ ಹೆಚ್ಚು ಸಮಯ ನಿಲ್ಲದಿರಿ. ಗೆಳೆಯರಿಗೆ ಸಹಾಯ ಮಾಡಬೇಕಾದ ಸಂದರ್ಭ ಬರಲಿದೆ

ತುಲಾ: ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳಿದ್ದೀರಿ. ದೂರದ ಪ್ರಯಾಣ ಸಾಧ್ಯವಾಗಲಿದೆ.

ವೃಶ್ಚಿಕ: ಹೊಸ ವ್ಯಕ್ತಿಗಳ ಪರಿಚಯದ ವೇಳೆ ಅಗತ್ಯ ಎಚ್ಚರಿಕೆ ಇರಲಿ. ಹಿರಿಯರಿಂದ ಒಳ್ಳೆಯ ಮಾರ್ಗದರ್ಶನ ದೊರೆಯಲಿದೆ. ಶುಭ ಫಲ. 

ಈ ಪಂಚಗ್ರಹ ಯೋಗ ನಿಮಗಿದ್ಯಾ? ನಿಮ್ಮ ಜಾತಕ ನೀವೇ ನೋಡ್ಕಳಿ...

ಧನುಸ್ಸು: ನಿಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುವುದನ್ನು ಕಲಿಯಿರಿ. ಅಂತರಂಗದ ಶುದ್ಧಿಯಿಂದ ಅವಕಾಶಗಳು ಹೆಚ್ಚಾಗಲಿವೆ.

ಮಕರ: ಹಳೆಯ ಸ್ನೇಹಿತರನ್ನೆಲ್ಲಾ ಒಟ್ಟಾಗಿ ಭೇಟಿಯಾಗಲಿದ್ದೀರಿ. ಇಂದು ಮತ್ತು ನಾಳೆ ಇಡೀ ದಿನ ಸಂತೋಷದಿಂದ ಕಳೆಯುವಿರಿ.

ಕುಂಭ: ಮತ್ತೊಬ್ಬರ ಆತುರಕ್ಕೆ ನೀವು ಸಂಕಷ್ಟಕ್ಕೆ ಸಿಲುಕಲಿದ್ದೀರಿ. ನಮ್ಮ ಪಾಲಿಗೆ ಬಂದ ಕೆಲಸವನ್ನು ನಾವೇ ಮಾಡಿ ತೀರಬೇಕು.

ಮೀನ: ಉದ್ದಿಮೆಯ ಬಗ್ಗೆ ಮಾತುಕತೆಗಳು ಶುರುವಾಗಲಿವೆ. ಕೊನೆಯ ಗಳಿಗೆಯಲ್ಲಿ ಆತುರ ಮಾಡುವುದು ಬೇಡ. ಶುಭವಾಗಲಿದೆ.