ನೋಯ್ಡಾ(ಆ. 23) 23  ವರ್ಷದ ಯುವಕನೊಬ್ಬ ತನ್ನ ಮನೆ ಮಾಲೀಕನ ಹೆಂಡತಿಯ ಮೇಲೆ ರೇಪ್ ಮಾಡಿದ್ದಾನೆ. ಜೇವಾರ್‌ ನ ಜಹಾಂಗಿಪುರ್ ಏರಿಯಾದಲ್ಲಿ ಘಟನೆ ನಡೆದಿದೆ. 

ಕನ್ ಸ್ಟ್ರಕ್ಷನ್ ಕೆಲಸ ಮಾಡುತ್ತಿದ್ದ ವಿಶಾಲ್ ಆರೋಪಿ.  ಮನೆಯ ಮಾಲೀಕನ  ಹೆಂಡತಿಗೆ ಅಮಲು ತರಿಸುವ ಟೀ ಕುಡಿಸಿ ರೇಪ್ ಮಾಡಿದ್ದಾನೆ. ಮಹಿಳೆ ದೂರು ದಾಖಲಿಸಿದ್ದು, ಕೆಲಸದ ಮೇಲೆ ನನ್ನ ಗಂಡ ರಾಜಸ್ಥಾನಕ್ಕೆ ತೆರಳಿದ್ದರು. ಲಾಕ್ ಡೌನ್ ಕಾರಣಕ್ಕೆ ಅಲ್ಲಿಯೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. 

ಬಾಲಕಿ ಮೇಲೆ ರೇಪ್ ಮಾಡಲು ಕ್ಯೂನಲ್ಲಿ ನಿಂತರು!

ಬಾಡಿಗೆ ನೀಡುವ ನೆಪದಲ್ಲಿ ಮನೆಗೆ ಬಂದು ನನಗೆ ಮತ್ತು ತರಿಸುವ ಟೀ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಟೀ ಕುಡಿದ ಮೇಲೆ ನಾನು ಅರೆಪ್ರಜ್ಞಾವಸ್ಥೆಗೆ ತಲುಪಿದ್ದೇನೆ. ಈ ವೇಳೆ ನನ್ನ ಬಟ್ಟೆ ಕಳಚಲು ಆರಂಭಿಸಿದ್ದಾನೆ. ನಾನು ವಿರೋಧ ವ್ಯಕ್ತಪಡಿಸಿದಾಗ ಸಾಯಿಸುವ ಬೆದರಿಕೆ ಹಾಕಿದ್ದು ನಿನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡುತ್ತೇನೆ ಎಂದು ಗದರಿಸಿದ್ದಾನೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ, ಮಹಿಳೆ ವಿಶಾಲ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಗಂಡನಿಗೆ ಗೊತ್ತಾಗಿ ಕೆಲ ದಿನದ ಹಿಂದೆಯೇ ಆತ ಬೇರೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.