ಕಳೆದ ಒಂದು ತಿಂಗಳ ಹಿಂದೆ ಸಿದ್ದಾಪುರ ಬಳಿ ಕಾರಿನ ಸಮೇತ ಹಳ್ಳದಲ್ಲಿ ಮುಳುಗಿ ಸಾವನಪ್ಪಿದ್ದ ಹುಬ್ಬಳ್ಳಿಯ ಮೂಲದ ನಾಲ್ಕು ಜನರು| ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡ ಯುವತಿ| ಪ್ರಕರಣ ದಾಖಲಿಸಿಕೊಂಡ ಕೇಶ್ವಾಪುರ ಪೊಲೀಸರು|
ಹುಬ್ಬಳ್ಳಿ(ನ.29): ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಹಳ್ಳಕ್ಕೆ ಕಾರು ಉರುಳಿ ಬಿದ್ದು ನಾಲ್ವರು ಸ್ನೇಹಿತರು ಮೃತಪಟ್ಟ ಘಟನೆಯಿಂದ ಮನನೊಂದ ಕೇಶ್ವಾಪುರದ ಪಾರಸವಾಡಿ ಯುವತಿ ನೇಹಾ ಪಾಟೀಲ್(19) ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಳೆದ ಒಂದು ತಿಂಗಳ ಹಿಂದೆ ಸಿದ್ದಾಪುರ ಬಳಿ ಹುಬ್ಬಳ್ಳಿಯ ಮೂಲದ ನಾಲ್ಕು ಜನರು ಕಾರಿನ ಸಮೇತ ಹಳ್ಳದಲ್ಲಿ ಮುಳುಗಿ ಸಾವನಪ್ಪಿದ್ದರು.
ಮದ್ಯದ ಅಮಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ
ಇವರ ಜೊತೆ ಹೆಚ್ಚಿನ ಸ್ನೇಹ ಹೊಂದಿದ್ದ ನೇಹಾ ಪಾಟೀಲ್ ಶುಕ್ರವಾರ ರಾತ್ರಿ ತನ್ನ ಮನೆಯಲ್ಲಿ ಇಂಗ್ಲಿಷ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾಳೆ. ಕೇಶ್ವಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
