ಲಕ್ನೊ(ಡಿ. 13)   ಕುಟುಂಬದ ಒಪ್ಪಿಗೆ ಇಲ್ಲದೆ ದಲಿತ ವ್ಯಕ್ತಿಯನ್ನು ಮದುವೆ   23 ವರ್ಷದ ಸಹೋದರಿಯನ್ನು 32 ವರ್ಷದ  ಸಹೋದರ ಹತ್ಯೆ ಮಾಡಿ ಜಮೀನಿನಲ್ಲಿ ಸಮಾಧಿ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಮೈನ್ ಪುರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸಹೋದರನಿಂದಲೇ ಹತ್ಯೆಗೀಡಾದವಳನ್ನು ಚಾಂದನಿ ಕಶ್ಯಪ್ ಎಂದು ಗುರುತಿಸಲಾಗಿದೆ. ಪತಿ ಅರ್ಜುನ್ ಕುಮಾರ್ (25) ಅವರೊಂದಿಗೆ ಪೂರ್ವ ದೆಹಲಿಯ ತ್ರಿಲೋಕ್ಪುರಿಯಲ್ಲಿ ವಾಸಿಸುತ್ತಿದ್ದರು. ಇಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

 ಚಾಂದನಿಯ ಸಹೋದರರಾದ ಸುನಿಲ್ (32), ಸುಶೀಲ್ (28) ಮತ್ತು ಸುಧೀರ್ (26) ಸಹೋದರಿಯನ್ನು ನವೆಂಬರ್ 17 ರಂದು ದೆಹಲಿಯಲ್ಲಿ ಭೇಟಿಯಾಗಿ ಮೈನ್ ಪುರಿಯ ಮನೆಗೆ ಕರೆದುಕೊಂಡು ಬಂದಿದ್ದರು. ನವೆಂಬರ್ 20 ರಂದು ಆಕೆಯ ಮೇಲೆ ಗುಂಡು  ಹಾರಿಸಿ ಹತ್ಯೆ ಮಾಡಿ ಜಮೀನಿನಲ್ಲಿ  ಅಂತ್ಯಸಂಸ್ಕಾರವನ್ನು ಮಾಡಿದ್ದರು.

ಹೆಂಡತಿಗೆ ಪ್ರಪೋಸ್ ಮಾಡಿದ್ದವನ ಕೊಂದು ಮೂಟೆ ಕಟ್ಟಿದರು

ಪತ್ನಿಯ ಸುಳಿವು ಸಿಗದ ಗಂಡ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಸಹೋದರರನ್ನು ಬಂಧಿಸಲಾಗಿದೆ. ಕಳೆದ ಜೂನ್ ನಲ್ಲಿ ಯುವತಿಯ ಕುಟುಂಬಕ್ಕೆ ವಿರುದ್ಧವಾಗಿ ಅರ್ಜುನ್ ಮದುಬೆ ಮಾಡಿಕೊಂಡಿದ್ದರು.  ಒಬಿಸಿ ಕೆಟಗರಿಯ ಯುವತಿಯನ್ನು ದಲಿತ ಸಮುದಾಯದ ಯುವಕ ಮದುವೆಯಾಗಿದ್ದು ತಿಕ್ಕಾಟಕ್ಕೆ ಕಾರಣವಾಗಿತ್ತು.

ಯುವತಿ ನಾಪತ್ತೆ ದೂರು ದಾಖಲಾದ ನಂತರ ಆಕೆಯ  ತವರು ಮನೆಯವರನ್ನು ವಿಚಾರಣೆಗೆ ಒಳಪಡಿಸಿದಾಗ  ಒಬ್ಬೊಬ್ಬರು  ಒಂದೊಂದು ಉತ್ತರ ನೀಡುತ್ತಿದ್ದರು. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಸಂಗತಿ ಬಯಲಾಗಿದೆ.