ಬೆಂಗಳೂರು(ಏ.12): ಮಹಿಳೆಯ ಕುತ್ತಿಗೆ ಕೊಯ್ದು ಬರ್ಬ​ರ​ವಾಗಿ ಹತ್ಯೆ ಮಾಡಿರುವ ಘಟನೆ ಎಲೆ​ಕ್ಟ್ರಾ​ನಿಕ್‌ ಸಿಟಿ ಠಾಣಾ ವ್ಯಾಪ್ತಿ​ಯಲ್ಲಿ ನಡೆ​ದಿ​ದೆ.

ಸುಭಾ​ಷ್‌​ನ​ಗ​ರ ನಿವಾ​ಸಿ ಶಹಿನಾ ತಾಜ್‌​(40) ಕೊಲೆ​ಯಾದ ಮಹಿಳೆ. ಮಹಿಳೆ ಹತ್ತು ವರ್ಷಗಳ ಹಿಂದೆ ಆಟೋ ಚಾಲಕ ಚಾಂದ್‌ ಪಾಷಾ ಎಂಬಾತನನ್ನು ವಿವಾಹವಾಗಿದ್ದರು. ದಂಪತಿ ಸುಭಾ​ಷ್‌ ​ನ​ಗ​ರದಲ್ಲಿ ಬಾಡಿಗೆ ಮನೆಯಲ್ಲಿ ವಾಸ​ವಿದ್ದರು. ಚಾಂದ್‌​ಪಾಷಾ ಶನಿ​ವಾರ ಬೆಳಗ್ಗೆ ಆಟೋ ಬಾಡಿ​ಗೆಗೆ ಹೋಗಿ​ದ್ದರು. ರಾತ್ರಿ 10ರ ಸುಮಾ​ರಿಗೆ ಮನೆಗೆ ವಾಪಸ್‌ ಬಂದಾಗ ಮನೆಯ ಬಾಗಿಲು ತೆರೆ​ದಿತ್ತು. ಮನೆ ಒಳಗೆ ಹೋಗಿ ನೋಡಿ​ದಾಗ ಮಂಚದ ಮೇಲೆ ಮಲ​ಗಿದ್ದ ಪತ್ನಿ​ಯನ್ನು ಯಾರು ದುಷ್ಕ​ರ್ಮಿ​ಗಳು ಆಕೆಯ ಕುತ್ತಿಗೆಗೆ ಚಾಕು​ವಿ​ನಿಂದ ಇರಿದು ಕೊಲೆ​ಗೈ​ದಿ​ರುವುದು ಗೊತ್ತಾ​ಗಿದೆ. ಈ ಸಂಬಂಧ ಕೂಡಲೇ ಪತಿ ಪೊಲೀ​ಸ​ರಿಗೆ ಮಾಹಿತಿ ನೀಡಿ​ದ್ದರು.

ಅವನು ರೌಡಿಶೀಟರ್ - ಇವನ ಹೆಂಡ್ತಿ ಜೊತೆ ಅಕ್ರಮ ಸಂಬಂಧ : ನೋಡಿ ನೋಡಿ ಕೊಂದೇ ಬಿಟ್ಟ

ಸ್ಥಳಕ್ಕೆ ಬಂದ ಪೊಲೀ​ಸರು ಪರಿ​ಶೀ​ಲಿ​ಸಿ​ದಾಗ ಮನೆಗೆ ನುಗ್ಗಿ​ರುವ ದುಷ್ಕ​ರ್ಮಿ​ಗ​ಳು, ಮೊದ​ಲಿಗೆ ಶಹಿನಾ ತಾಜ್‌ ಮೇಲೆ ಹಲ್ಲೆ ನಡೆಸಿ, ಆಕೆಯ ಮುಖ​ವನ್ನು ದಿಂಬಿ​ನಿಂದ ಒತ್ತಿ ಉಸಿ​ರು​ಗ​ಟ್ಟಿಸಿದ್ದಾರೆ. ಬಳಿಕ ಆಕೆಯ ಕುತ್ತಿಗೆಗೆ ಚಾಕು​ವಿ​ನಿಂದ ಇರಿದು ಕೊಲೆ​ಗೈ​ದಿ​ದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕ​ರಣ ದಾಖ​ಲಿ​ಸಿ​ಕೊಂಡು ತನಿಖೆ ನಡೆ​ಸ​ಲಾ​ಗು​ತ್ತಿದೆ ಎಂದು ಎಲೆ​ಕ್ಟ್ರಾ​ನಿಕ್‌ ಸಿಟಿ ಠಾಣೆ ಪೊಲೀ​ಸರು ಹೇಳಿ​ದ್ದಾರೆ.