Asianet Suvarna News

ಗೆಳತಿ ಮೇಲೆ ದೌರ್ಜನ್ಯ ಎಸಗಿ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಹೊರಗೆ ತಳ್ಳಿದ!

ಕಾರಿನಲ್ಲೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ/ ಕಾರು ತಡೆಯಲು ಯತ್ನಿಸಿದ ದಂಪತಿ/ ಯುವತಿಯನ್ನು ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಹೊರಕ್ಕೆ ತಳ್ಳಿದ ಗೆಳೆಯ/ ಕೋಲ್ಕತ್ತಾದಲ್ಲಿ ಪ್ರಕರಣ

woman molested pushed off speeding car Kolkata
Author
Bengaluru, First Published Sep 7, 2020, 4:25 PM IST
  • Facebook
  • Twitter
  • Whatsapp

ಕೋಲ್ಕತ್ತಾ(ಸೆ. 07)  31 ವರ್ಷದ ಮಹಿಳೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಎಸೆಯಲಾಗಿದೆ.  ಇದಾದ ಮೇಲೆ ಗಂಡನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಕಾರು ಹರಿದಿದೆ.  ಈ ಮಹಿಳೆ ಕಾರು  ನಿಲ್ಲಿಸಲು ಯತ್ನ ಮಾಡಿದ್ದಾರೆ.

ಕೋಲ್ಕತ್ತಾದ ಆನಂದಪುರ ಏರಿಯಾದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.  ಬಾಯ್ ಪ್ರೆಂಡ್ ಜತೆ ರಾತ್ರಿ ಸುತ್ತಾಟಕ್ಕೆ ಹೋಗಿದ್ದ ಮಹಿಳೆ ಮೇಲೆ ಆಕೆಯ ಗೆಳೆಯನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.  ಮನೆಗೆ ಬಿಡು ಎಂದು ಯುವತಿ ಒತ್ತಾಯ ಮಾಡಲು ಆರಂಭಿಸಿದಾಗ ಯರ್ರಾ ಬಿರ್ರಿ ಕಾರು ಚಲಾಯಿಸಲು ಆರಂಭಿಸಿದ್ದಾನೆ. ಕಾರಿನ ಒಳಗಿದ್ದ ಯುವತಿ ಕಿರುಚಾಡಿದ್ದು ಎಸ್ತೆ ಪಕ್ಕದಲ್ಲಿದ್ದ ದಂಪತಿಗೆ ಕೇಳಿಸಿದ್ದು ಅವರು ಕಾರನ್ನು ತಡೆಯುವ ಯತ್ನ ಮಾಡಿದ್ದಾರೆ.

ವಿಡಿಯೋ ಕಾಲ್ ಮಾಡಿ ಬೆತ್ತಲಾಗುತ್ತಿದ್ದ ಆಸಾಮಿ ಮೊಬೈಲ್‌ನಲ್ಲಿ 500 ಮಹಿಳೆಯರು!

ಗಲಿಬಿಲಿಗೊಂಡ ಯುವಕ ಗೆಳತಿಯನ್ನು ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಹೊರಕ್ಕೆ ತಳ್ಳಿದ್ದಾನೆ.  ಕಾರನ್ನು ತಡೆಯಲು ಯತ್ನಿಸಿದ ನಿಲಂಜನಾ ಚಟರ್ಜಿ ಎಂಬುವರಿಗೂ ಕಾರು ಗುದ್ದಿದೆ. 

ಘಟನೆ ಗಮನಕ್ಕೆ ಬಂದ ತಕ್ಷಣ ಪೊಲೀಸರಿಗೆ ಕರೆ ಮಾಡಿದರೂ ಯಾವುದೆ ಸಹಕಾರ ಸಿಗಲಿಲ್ಲ. ಕೊರೊನಾ ಕಾರಣಕ್ಕೆ ಆಂಬುಲೆನ್ಸ್ ಸಹಜ ಸರಿಯಾದ ಸಮಯಕ್ಕೆ ಬರಲಿಲ್ಲ.  ನಂತರ ಮತ್ತೊಮ್ಮೆ ಕರೆ ಮಾಡಿದಾಗ ಟ್ರಾಫಿಕ್ ಪೊಲೀಸ್ ಕಡೆಯಿಂದ ಆಂಬುಲೆನ್ಸ್ ಕಳುಹಿಸಿಕೊಟ್ಟರು ಎಂದು ಚಟರ್ಜಿ ಗಂಡ ತಿಳಿಸಿದ್ದಾರೆ.

ಕೊಲೆ ಮಾಡಲು ಯತ್ನ ದೂರಿನಲ್ಲಿ ನಾನು ಪ್ರತ್ಯೇಕ ಕಂಪ್ಲೆಂಟ್ ನೀಡಲು ಮುಂದಾದರೆ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣದ ಜತೆಯೇ ಸೇರಿಸಿದ್ದಾರೆ ಎಂದಿದ್ದಾರೆ. ಗಾಯಗೊಂಡ ಚಟರ್ಜಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಯುವತಿಯನ್ನು ರಕ್ಷಣೆ ಮಾಡಿ ಮನೆಗೆ ಕಳಿಸಲಾಗಿದೆ. 

Follow Us:
Download App:
  • android
  • ios