ನವದೆಹಲಿ(ಸೆ. 13)   ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದು ಅಲ್ಲದೇ ಆಕೆಯನ್ನು ತಿಂಗಳುಗಟ್ಟಲೆ ಕಾಲ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಮಹಿಳೆಯ ಗಂಡನ ಸ್ನೇಹಿತನೆ ಇಂಥ ಕುಕೃತ್ಯ ಮಾಡಿದ್ದಾರೆ.

ಮಹಿಳೆಯ ಹತ್ತು ವರ್ಷದ ಪುತ್ರಿಯ ಮೇಲೂ ಕಾಮಾಂಧ ಕ್ರೌರ್ಯ ಮೆರೆದಿದ್ದಾನೆ ಎಂದು ದೂರು ಸೆಕ್ಟರ್ 10 ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಮಾರ್ಚ್ 19 ರಂದು ಮಹಿಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ ಮನೆಗೆ ಬಂದಿದ್ದ ಅಶು  ಆಕೆಗೆ ಮದ್ಯಪಾನ ಮಾಡಿಸಿದ್ದ. ಮತ್ತು ಬರುವ ಔಷಧಿ ಸೇರಿಸಿ ಕುಡಿಸಿದ್ದ.

ಮಕ್ಕಳಾಗುವಂತೆ ಮಾಡ್ತೆನೆ; ಮಹಿಳೆ ಮೇಲೆ ಎರಗಿದ ಬಾಬಾ!

ಮಹಿಳೆ ಅರೆಪ್ರಜ್ಞಾವಸ್ಥೆಗೆ ತಲುಪಿದ ಮೇಲೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು ಅಲ್ಲದೇ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ.

ಇದಾಗಿ ಕೆಲವೇ ದಿನದಲ್ಲಿ ಮಹಿಳೆಯ ಗಂಡನಿಗೆ ಹೃದಯಾಘಾತವಾಗಿದೆ.. ಆರೈಕೆ ಕಾರಣಕ್ಕೆ ಮಹಿಳೆ ಆಸ್ಪತ್ರೆಯಲ್ಲಿ ಗಂಡನೊಂದಿಗೆ  ಇದ್ದರು. ಮಗಳನ್ನು ತಮ್ಮ ತಾಯಿಯ ಮನೆಯಲ್ಲಿ ಬಿಟ್ಟಿದ್ದರು.

ಈ ವೇಳೆ ಮಗಳು ಇದ್ದ ಜಾಗಕ್ಕೆ ತೆರಳಿದ ಆರೋಪಿ ತಂದೆಯ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

ಜೂನ್ 28 ರಂದು ಸಂತ್ರಸ್ತೆಯ ಗಂಡ ನಿಧನರಾಗಿದ್ದಾರೆ. ಇದೇ ಸಂದರ್ಭದಲ್ಲಿ ಆರೋಪಿಯನ್ನು ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಂಧಿಸಲಾಗಿದೆ. ಮಹಿಳೆ ಅಂತಿಮವಾಗಿ ಧೈರ್ಯ ತೋರಿ ಪೊಲೀಸರ ಮೊರೆ ಹೋಗಿದ್ದಾರೆ. ಅತ್ಯಾಚಾರ ಪ್ರಕರಣವನ್ನು ಆರೋಪಿ ವಿರುದ್ಧ ದಾಖಲು ಮಾಡಿಕೊಳ್ಳಲಾಗಿದೆ.