ಆಗ್ರಾ(ಮಾ.  31)   ಗಂಡನ ಎದುರೆ ಪತ್ನಿಯ ಮೇಲೆ ಮೂವರು ಗ್ಯಾಂಗ್ ರೇಪ್ ಮಾಡಿದ್ದಾರೆ. ಪ್ರಕರಣ ಆಗ್ರಾದಿಂದ ವರದಿಯಾಗಿದೆ. ಅತ್ಯಾಚಾರ ಎಸಗಿದ್ದು ಅಲ್ಲದೆ ಘಟನೆಯ ವಿಡಿಯೋ ರೇಕಾರ್ಡ್ ಮಾಡಿಕೊಂಡಿದ್ದಾರೆ.

ಎಟ್ಮಾದ್ಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.  ಮಹಿಳೆ ತನ್ನ ಪತಿಯ ಜತೆ ಸಂಜೆ 6 ಗಂಟೆ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಎಟ್ಮೌದೌಲಾ ಪ್ರದೇಶದ ಪೋಷಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಇವರನ್ನು ಅಡ್ಡ ಹಾಕಿದ ದುಷ್ಕರ್ಮಿಗಳು ದಂಪತಿಯನ್ನು ಥಳಿಸಿದ್ದಾರೆ. ನಂತರ ಮಹಿಳೆಯನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಎತ್ತಿಕೊಂಡು ಹೋಗಿದ್ದಾರೆ.

ಸಂತ್ರಸ್ತೆಯ ಮೆಡಿಕಲ್ ಟೆಸ್ಟ್ ಯಾವ ರೀತಿ ನಡೆಯುತ್ತದೆ?

ನಂತರ ಮೂವರು ಗಂಡನ ಎದುರಿನಲ್ಲಿಯೇ ಮಹಿಳೆ ಮೇಲೆ ಎರಗಿದ್ದಾರೆ.  ಅಲ್ಲಿಂದ ಪಲಾಯನ ಮಾಡುವ ಮೊದಲು 10,000 ರೂ. ಮತ್ತು ಮಹಿಳೆಯ ಕಿವಿಯೋಲೆಗಳು ಸೇರಿದಂತೆ  ಆಭರಣಗಳನ್ನು ದೋಚಿಕೊಂಡಿದ್ದಾರೆ.

ಮರುದಿನ ಬೆಳಗ್ಗೆ ದಂಪತಿ ಸ್ಟೇಶನ್ ಗೆ ತೆರಳಿ ದುರು ದಾಖಲಿಸಿದ್ದು  ಮಹಿಳೆಯನ್ನು ವೈದ್ಯಪರೀಕ್ಷೆಗೆ ಕಳಿಸಿಕೊಡಲಾಗಿದೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಿಂದ ಈ ರೀತಿ ಮಹಿಳಾ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಲೇ ಇವೆ.