ಬೆಂಗಳೂರು (ನ.30): ಎಂತಹ ಪರಿಸ್ಥಿತಿ ನಮ್ಮಲ್ಲಿ ಉದ್ಬವ ಆಗಿದೆ ಅಂತ ವ್ಯಥೆ ಆಗುತ್ತಿದೆ. ಹೆಣ್ಣು ಮೊಮ್ಮಗಳು ಹುಟ್ಟಿದಳು ಎನ್ನುವ ಕಾರಣಕ್ಕೆ ಅಜ್ಜಿಯೊಬ್ಬರು ರಾಕ್ಷಸಿಯಾಗಿದ್ದಾರೆ.

ತನ್ನ ಮಗನಿಗೆ ಹೆಣ್ಣು ಹುಟ್ಟಿದೆ ಅನ್ನೋ ಕಾರಣಕ್ಕೆ ಅಜ್ಜಿ, 9 ದಿನದ ಹಸುಳೆಯನ್ನು ಕೊಂದಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ಬೆಂಗಳೂರಿನ  ಸೋಲದೇವನಹಳ್ಳಿ ಬೆಳಕಿಗೆ ಬಂದಿದೆ.

ಬೆಂಗಳೂರು: ಅನುಮಾನ ಎಂಬ ಮಹಾಮಾರಿ ಗಂಡ-ಹೆಂಡ್ತಿ ಸಾವಿನಲ್ಲಿ ಅಂತ್ಯ

ತಮಿಳ್ ಸೆಲ್ವಿ ಮಗುವನ್ನು ಕಳೆದುಕೊಂಡ ನತದೃಷ್ಟೆ. ಪ್ರಕರಣ ಸಂಬಂಧ ಮಗುವಿನಿ ತಾಯಿ ತಮಿಳ್ ಸೆಲ್ವಿ, ತನ್ನ ಅತ್ತೆ ಪರಮೇಶ್ವರಿ ವಿರುದ್ಧ ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

'ನಿನ್ನೆ [ಶುಕ್ರವಾರ] ರಾತ್ರಿ ಮಗುವಿಗೆ ಹಾಲುಣಿಸಿ ಆಟವಾಡಿಸುತ್ತಿದ್ದೆ. ಬಳಿಕ ಮಗುವನ್ನು ಅತ್ತೆ ಕೈಗೆ ಕೊಟ್ಟು ಅಡುಗೆ ಮನೆಗೆ ಹೋಗಿದ್ದೆ. ಬಂದು ನೋಡುವಷ್ಟರಲ್ಲಿ ಅತ್ತೆ ಕೈಯಲ್ಲಿ ಮಗು ಇರಲಿಲ್ಲ. ಮಗುವನ್ನ ಯಾರೋ ತೆಗೆದುಕೊಂಡು ಹೋಗಿದ್ದಾರೆ ಎಂದು ಅತ್ತೆ ಹೇಳಿದ್ದಳು. ಅಕ್ಕಪಕ್ಕದ ಮನೆ ಹಾಗೂ ಮನೆಯ ಸುತ್ತ ಹುಡುಕಾಟ ನಡೆಸಿದೆವು. ಈ ವೇಳೆ ಮನೆ ಹಿಂಭಾಗದಲ್ಲಿ ಮಗು ಬಿದ್ದಿತ್ತು.' ಎಂದು ಸೆಲ್ವಿ ದೂರಿನಲ್ಲಿ ತಿಳಿಸಿದ್ದಾರೆ.

ಮಗುವಿನ ಕತ್ತಿನ ಬಳಿ ಗಾಯದ ಗುರುತು ಪತ್ತೆಯಾಗಿದೆ. ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರೋ ಶಂಕೆ ಇದೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಮಗು ಜನಿಸಿದೆ ಎನ್ನುವ ಕಾರಣಕ್ಕೆ ಅಜ್ಜಿ ಮಗುವನ್ನ ಉಸಿರುಗಟ್ಟಿಸಿ ಸಾಯಿಸಿರುವ ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.