ಬೆಂಗಳೂರು[ಜ.16]: ಖ್ಯಾತ ನಟ ಕಿಚ್ಚ ಸುದೀಪ್‌ ಅವರ ಸಿನಿಮಾದಲ್ಲಿ ನಟನೆಗೆ ಅವಕಾಶ ಕಲ್ಪಿಸುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ನೃತ್ಯಗಾರನೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ಎರಡನೇ ಹಂತದ ಅನ್ನಪೂರ್ಣೇಶ್ವರಿ ನಗರದ ರೈನ್‌ ಬೋ ಡ್ಯಾನ್ಸ್‌ ಶಾಲೆಯ ಪವನ್‌ ಮಾಸ್ಟರ್‌ ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ಪರಿಚಿತ 20 ವರ್ಷದ ವಿದ್ಯಾರ್ಥಿನಿ ಮೇಲೆ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಡ್ ಲೈಟ್ ಏರಿಯಾಗೆ ಬರಲ್ಲ ಎಂದ ಕ್ಯಾಬ್ ಚಾಲಕನನ್ನೇ ರೇಪ್ ಮಾಡಿದ ಬರಗೆಟ್ಟ ಪೊಲೀಸಪ್ಪ

ತಂಗಿ ಪಾತ್ರ ಕೊಡಿಸುವುದಾಗಿ ನಂಬಿಸಿ ವಂಚಿಸಿದ:

ಮೂರು ವರ್ಷಗಳಿಂದ ಪವನ್‌ ನೃತ್ಯ ಶಾಲೆಯಲ್ಲಿ ನೃತ್ಯ ಕಲಿಕೆಗೆ ಸಂತ್ರಸ್ತೆ ಬರುತ್ತಿದ್ದು, ಇಬ್ಬರಿಗೂ ಪರಿಚಯವಿತ್ತು. ಈ ಪರಿಚಯದ ಹಿನ್ನೆಲೆಯಲ್ಲಿ ಪವನ್‌ ಆಯೋಜಿಸುವ ನೃತ್ಯ ಕಾರ್ಯಕ್ರಮಗಳಲ್ಲಿ ಸಂತ್ರಸ್ತೆ ಪ್ರದರ್ಶನ ನೀಡುತ್ತಿದ್ದಳು. ಈ ಸಲುಗೆ ಬಳಸಿಕೊಂಡ ಆರೋಪಿ, ಜ.12ರಂದು ಸಂತ್ರಸ್ತೆಗೆ ಕರೆ ಮಾಡಿ ‘ನಿನಗೆ ಸುದೀಪ್‌ ಅವರ ಚಿತ್ರದಲ್ಲಿ ತಂಗಿ ಪಾತ್ರ ಇದೆ. ಅಡಿಷನ್‌ ಇದ್ದು ಆ ಸಿನಿಮಾದ ನಿರ್ದೇಶಕರು ಬರುತ್ತಿದ್ದಾರೆ. ಕೂಡಲೇ ಡ್ಯಾನ್ಸ್‌ ಕ್ಲಾಸ್‌ ಹತ್ತಿರ ಬಾ ಎಂದು ಸೂಚಿಸಿದ್ದ’. ಈ ಮಾತು ನಂಬಿದ ಆಕೆ, ಡ್ಯಾನ್ಸ್‌ ಕ್ಲಾಸ್‌ ಬಳಿ ತೆರಳಿದ್ದಾಳೆ. ಬಳಿಕ ‘ನೀನು ಸಿನಿಮಾಗೆ ಆಯ್ಕೆ ಆಗಿದ್ದೀಯಾ’ ಎಂದು ಹೇಳಿದ ಆರೋಪಿ, ‘ಪಾರ್ಟಿಗೆ ಹೋಗೋಣ’ ಎಂದಿದ್ದಾನೆ. ಇದಕ್ಕೊಪ್ಪದೆ ಆಕೆ, ‘ಫೋಟೋ ಶೂಟ್‌ ಇದೆ’ ಎಂದು ಹೇಳಿ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ.

ಕ್ಷಮಿಸಿಬಿಡಿ: ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ಹತ್ಯಾಚಾರಿ!

ಆಗ ಮೊಬೈಲ್‌ನಲ್ಲಿ ಆಶ್ಲೀಲ ವಿಡಿಯೋ ತೋರಿಸಿ ಅಸಭ್ಯವಾಗಿ ಆತ ವರ್ತಿಸಿದ್ದಾನೆ. ಇದರಿಂದ ಭಯಗೊಂಡ ಯುವತಿ, ಕೂಡಲೇ ತನ್ನ ಗೆಳೆಯನಿಗೆ ಕರೆ ಮಾಡಿ ಡ್ಯಾನ್ಸ್‌ ಶಾಲೆಗೆ ಬರುವಂತೆ ಸೂಚಿಸಿದ್ದಾಳೆ. ಆ ವೇಳೆ ನೀರು ತರಹದ ದ್ರಾವಣವನ್ನು ಸಂತ್ರಸ್ತೆಗೆ ಬಲವಂತವಾಗಿ ಆತ ಕುಡಿಸಿದ್ದು, ಆಕೆ ಪ್ರಜ್ಞಾಹೀನಳಾಗಿದ್ದಾಳೆ. ನಂತರ ಆಕೆ ಮೇಲೆ ಅತ್ಯಾಚಾರ ಎಸಗಿದ ಎಂದು ಆರೋಪಿಸಲಾಗಿದೆ. ಕೃತ್ಯ ಎಸೆಗಿದ ನಂತರ ಪವನ್‌ ಮಾಸ್ಟರ್‌, ಸಂತ್ರಸ್ತೆಯ ಸ್ನೇಹಿತನ ಜತೆ ಸೇರಿ ಆಕೆಯನ್ನು ಮನೆಗೆ ಕರೆ ತಂದು ಬಿಟ್ಟಿದ್ದಾನೆ. ಕೆಲ ಹೊತ್ತಿನ ನಂತರ ಪ್ರಜ್ಞೆ ಬಂದಿದ್ದು, ತನ್ನ ಸಂತ್ರಸ್ತೆಗೆ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.