Asianet Suvarna News

ಪತಿ ಎದುರೇ ಪತ್ನಿ, ಮಗಳ ಮೇಲೆ ಸಾಮೂಹಿಕ ಅತ್ಯಾಚಾರ!

* ಉತ್ತರ ಪ್ರದೇಶದಲ್ಲಿ ಬಯಲಾಯ್ತು ಹೀನಾಯ ಕೃತ್ಯ

* ಗಂಡನೆದುರೇ ಹೆಂಡತಿ, ಮಗಳ ಅತ್ಯಾಚಾರ

* ದೂರು ಕೊಟ್ಟರೆ ಸಾಯಿಸುವ ಬೆದರಿಕೆ ಹಾಕಿದ್ದ ದುಷ್ಕರ್ಮಿಗಳು

Wife and daughter Raped Infront Of Husband at UP Moradabad pod
Author
Bangalore, First Published Jun 15, 2021, 5:41 PM IST
  • Facebook
  • Twitter
  • Whatsapp

ಲಕ್ನೋ(ಜೂ.15): ಬೆಚ್ಚಿ ಬೀಳಿಸುವ ಈ ಘಟನೆ ಉತ್ತರ ಪ್ರದೇಶದ ಮುರಾದಾಬಾದ್‌ನಲ್ಲಿ ನಡೆದಿದೆ. ಇಲ್ಲಿ ತಡರಾತ್ರಿ ಆಯುಧಗಳೊಂದಿಗೆ ಬಂದಿದ್ದ ಮೂವರು ಮುಸುಕುಧಾರಿಗಳು, ಇಡಿ ಕುಟುಂಬವನ್ನು ಬಂಧಿಗಳನ್ನಾಗಿಸಿದ್ದಾರೆ. ಇದಾದ ಬಳಿಕ ಪತಿ ಎದರೇ ಆತನ ಪತ್ನಿ ಹಾಗೂ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೇ ಬೇರೆ ಯಾರಿಗೂ ಮಾಹಿತಿ ಕೊಟ್ಟರೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಗಾಬರಿಗೀಡು ಮಾಡಿದೆ. ಇಲ್ಲೊಂದು ಮನೆಗೆ ನುಗ್ಗಿದ ಮುಸುಕುಧಾರಿಗಳು ಪತಿಯ ಕೈ ಕಾಲುಗಳನ್ನು ಕಟ್ಟಿ ಹಾಕಿ, ಪಿಸ್ತೂಲ್ ತೋರಿಸಿ ಬೆದರಿಸಿದ್ದಲ್ಲದೇ, ಆತನೆದುರೇ ಆತನ ಪತ್ನಿ ಹಾಗೂ ಹನ್ನೊಂದು ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚರಗೊಂಡಿದೆ. ಸ್ಥಳಕ್ಕೆ ತಲುಪಿದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

ಪತ್ನಿಗೆ ನೋವು ಕೊಡಲು ಮಕ್ಕಳನ್ನೇ ಕೊಂದ ಪತಿ, ಶವವನ್ನೂ ಸಮುದ್ರಕ್ಕೆಸೆದ!

ಕೈ ಕಾಲು ಕಟ್ಟಿ ತಲೆಗೆ ಪಿಸ್ತೂಲ್ ಇಟ್ಟಿದ್ದರು

ಸಂತ್ರಸ್ತ ಕುಟುಂಬ ಸದಸ್ಯರು ಸೆಕೆ ಇದ್ದ ಕಾರಣ ಮನೆ ಹೊರಗೆ ಮಲಗಿತ್ತು. ಹೀಗಿರುವಾಗಲೇ ಏಕಾಏಕಿ ಮೂವರು ಶಸ್ತ್ರಗಳನ್ನು ಹೊಂದಿದ್ದ ಮುಸುಕುಧಾರಿಗಳು ಬಂದಿದ್ದಾರೆ. ಪಿಸ್ತೂಲ್ ತೋರಿಸಿ ಎಲ್ಲರನ್ನೂ ಬಂಧಿಗಳನ್ನಾಗಿ ಮಾಡಿದ್ದಾರೆ. ಪತಿಯ ಕೈ ಕಾಲುಗಳನ್ನು ಕಟ್ಟಿ ಹಾಕಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಬಳಿಕ ಆತನೆದುರೇ ಆತನ ಹೆಂಡತಿ ಹಾಗೂ ಮಗಳನ್ನು ಅತ್ಯಾಚಾರಗೈದಿದ್ದಾರೆ.

ಪೊಲೀಸರಿಗೆ ದೂರು ಕೊಟ್ಟರೆ ಸಾಯಿಸ್ತೀವಿ

ಇನ್ನು ಇಂತಹ ದೌರ್ಜನ್ಯ ನಡೆಸುತ್ತಿದ್ದ ವೇಳೆ ಪತಿ ದುಷ್ಕರ್ಮನಿಗಳನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಬಂಧೂಕನ್ನು ವ್ಯಕ್ತಿಯ ಕತ್ತಿಗೆ ಇಟ್ಟ ದುಷ್ಕರ್ಮಿಗಳು ಈ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದಾದ ಬಳಿಕ ಸಂಸತ್ರಸ್ತ ಕುಟುಂಬ ಬೆಳಗ್ಗೆ ಪೊಲೀಸ್ ಠಾಣೆಗೆ ತಲುಪಿದಾಗ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಅಲ್ಲದೇ ಕೇಸ್‌ ಮುಚ್ಚಿ ಹಾಕುವ ಮಾತುಗಳನ್ನಾಡಿದ್ದಾರೆ. ಆದರೆ ಕುಟುಂಬ ಸದಸ್ಯರು ಹಿರಿಯ ಅಧಿಕಾರಿಗಳ ಬಳಿ ತಲುಪಿದಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಓರ್ವ ಅರೆಸ್ಟ್, ಇಬ್ಬರು ಇನ್ನೂ ಪರಾರಿ 

ಪ್ರಕರಣದ ತನಿಖೆ ನಡೆಸುತ್ತಿರುವ ಡಿಎಸ್‌ಪಿ ಡಿಡಿ ಸಿಂಗ್ ಈ ಬಗ್ಗೆ ಮಾತನಾಡುತ್ತಾ ಶನಿವಾರ ಹಾಗೂ ಭಾನುವಾರ ರಾತ್ರಿ ಮೂವರು ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಎದುರು ಆತನ ಹೆಂಡತಿ ಹಾಘೂ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕುಕೃತ್ಯ ನಡೆಸಿದ್ದ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನಿಬ್ಬರನ್ನು ಪತ್ತೆ ಹಚ್ಚಲು ಬಲೆ ಬೀಸಲಾಗಿದೆ ಎಂದಿದ್ದಾರೆ.

Follow Us:
Download App:
  • android
  • ios