Asianet Suvarna News Asianet Suvarna News

ಅತೀಕ್‌, ಅಶ್ರಫ್‌ ಹತ್ಯೆ ಪ್ರಕರಣದ ದೃಶ್ಯವನ್ನು ಇಂಚಿಂಚಾಗಿ ಮರುಸೃಷ್ಟಿ ಮಾಡಲಿರೋ ಎಸ್‌ಐಟಿ

ಭಾನುವಾರ, ಪ್ರಯಾಗರಾಜ್‌ನಲ್ಲಿ ಗ್ಯಾಂಗ್‌ಸ್ಟರ್‌ - ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಅವರನ್ನು ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿದ್ದ ಮೂರು ವ್ಯಕ್ತಿಗಳು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ, ಉತ್ತರ ಪ್ರದೇಶ ಪೊಲೀಸರು ಲಜ್ಜೆಗೆಟ್ಟ ಹತ್ಯೆಗಳ ತನಿಖೆಗಾಗಿ ಎರಡು ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸುವುದಾಗಿ ಘೋಷಿಸಿದರು. 

uttar pradesh sit  to recreate crime scene in atiq ashraf murder case ash
Author
First Published Apr 19, 2023, 10:36 AM IST

ಪ್ರಯಾಗರಾಜ್ (ಏಪ್ರಿಲ್ 19, 2023): ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್‌ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಈ ಹತ್ಯೆಯ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ತನಿಖೆಯ ಭಾಗವಾಗಿ ಶೀಘ್ರದಲ್ಲೇ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. 

ಹತ್ಯೆ ಮಾಡಿದ ದಾಳಿಕೋರರನ್ನು ಹಿಡಿಯಲು ಎಷ್ಟು ಪೊಲೀಸರು ಪ್ರಯತ್ನಿಸಿದರು ಮತ್ತು ಅವರನ್ನು ನಿಯಂತ್ರಿಸಲು ಎಷ್ಟು ಸಮಯ ತೆಗೆದುಕೊಂಡಿತು ಎಂಬುದನ್ನೂ ಎಸ್‌ಐಟಿ ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ. ಭಾನುವಾರ, ಪ್ರಯಾಗರಾಜ್‌ನಲ್ಲಿ ಗ್ಯಾಂಗ್‌ಸ್ಟರ್‌ - ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಅವರನ್ನು ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿದ್ದ ಮೂರು ವ್ಯಕ್ತಿಗಳು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ, ಉತ್ತರ ಪ್ರದೇಶ ಪೊಲೀಸರು ಲಜ್ಜೆಗೆಟ್ಟ ಹತ್ಯೆಗಳ ತನಿಖೆಗಾಗಿ ಎರಡು ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸುವುದಾಗಿ ಘೋಷಿಸಿದರು. 

ಇದನ್ನು ಓದಿ: ಏಕತೆಯ ಅಗತ್ಯವನ್ನು ಎತ್ತಿ ಹಿಡಿದ ಅತೀಖ್‌ ಅಹ್ಮದ್‌ ಹತ್ಯೆ: ಇದೇ ನಾವು ಕಲಿಯಬೇಕಿರೋ ಪಾಠ!

ಶಹಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಡಿಸಿಪಿ (ಅಪರಾಧ) ಸತೀಶ್ ಚಂದ್ರ ನೇತೃತ್ವದ ಮೊದಲ ಎಸ್‌ಐಟಿಯನ್ನು ರಚಿಸಲಾಗಿದೆ ಎಂದು ಪ್ರಯಾಗರಾಜ್ ಪೊಲೀಸ್ ಆಯುಕ್ತ ರಮಿತ್ ಶರ್ಮಾ ಅವರು ಭಾನುವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು, ಮೊದಲನೆಯದನ್ನು ಮೇಲ್ವಿಚಾರಣೆ ಮಾಡಲು ಎರಡನೇ ಎಸ್‌ಐಟಿಯನ್ನು ರಚಿಸಲಾಗಿದೆ. ಈ ಎಸ್‌ಐಟಿಗೆ ಎಡಿಜಿ ಪ್ರಯಾಗ್‌ರಾಜ್ ವಲಯದ ಭಾನು ಭಾಸ್ಕರ್ ನೇತೃತ್ವ ವಹಿಸಲಿದ್ದಾರೆ ಮತ್ತು ಪ್ರಯಾಗ್‌ರಾಜ್ ಪೊಲೀಸ್ ಆಯುಕ್ತರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರು ತಂಡದ ಸದಸ್ಯರಾಗಿರಲಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಆರ್‌.ಕೆ ವಿಶ್ವಕರ್ಮ ಭಾನುವಾರ ಹೊರಡಿಸಿದ ಆದೇಶದಲ್ಲಿ ಮಾಹಿತಿ ನೀಡಿದ್ದಾರೆ.

ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಅಹ್ಮದ್ ಅವರನ್ನು ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಪತ್ರಕರ್ತರ ವೇಷದಲ್ಲಿ ಬಂದವರು ಗುಂಡಿಕ್ಕಿ ಕೊಂದಿದ್ದರು. ಪಾಯಿಂಟ್-ಬ್ಲಾಂಕ್ ರೇಂಜ್ ಹತ್ತಿರ ಗುಂಡು ಹಾರಿಸಿದ ನಂತರ ಇಬ್ಬರೂ ಗ್ಯಾಂಗ್‌ಸ್ಟರ್‌ಗಳು ಸ್ಥಳದಲ್ಲೇ ಕುಸಿದರು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಪ್ರಕರಣದಲ್ಲಿ ನ್ಯಾಯಾಂಗ ಆಯೋಗವನ್ನು ಸ್ಥಾಪಿಸಲು ಆದೇಶಿಸಿದರು. ಎಲ್ಲಾ ಮೂವರು ದಾಳಿಕೋರರಾದ ಅರುಣ್ ಮೌರ್ಯ, ಸನ್ನಿ ಸಿಂಗ್ ಮತ್ತು ಲವ್ಲೇಶ್ ತಿವಾರಿ ಅವರನ್ನು ಜಿಲ್ಲಾ ನ್ಯಾಯಾಲಯ ಭಾನುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಇದನ್ನೂ ಓದಿ: 2 ವಾರಗಳಲ್ಲಿ ನನ್ನನ್ನು ಕೊಲ್ಲಲಾಗುವುದು ಎಂದು ಮೊದಲೇ ಹೇಳಿದ್ದ ಯುಪಿ ಗ್ಯಾಂಗ್‌ಸ್ಟರ್‌!

ಗ್ಯಾಂಗ್‌ಸ್ಟರ್‌ -ರಾಜಕಾರಣಿ ಮತ್ತು ಅವರ ಸಹೋದರನ ಅಂತ್ಯಕ್ರಿಯೆಗಳು ಪ್ರಯಾಗ್‌ರಾಜ್‌ನ ಕಸರಿ ಮಸಾರಿ ಪ್ರದೇಶದ ಕುಟುಂಬ ಸ್ಮಶಾನದಲ್ಲಿ ಭಾನುವಾರ ನಡೆಯಿತು. ಅತೀಕ್ ಅಹ್ಮದ್ 2005 ರಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ ರಾಜು ಪಾಲ್ ಅವರ ಹತ್ಯೆ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆಯಲ್ಲಿ ಆರೋಪಿಯಾಗಿದ್ದರು.

ಇದನ್ನೂ ಓದಿ: ದೊಡ್ಡ ಡಾನ್‌ ಆಗಲು ದೊಡ್ಡ ತಲೆಯನ್ನೇ ತೆಗೆಯಬೇಕೆಂದು ಯುಪಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ!

Follow Us:
Download App:
  • android
  • ios