ಲಕ್ನೋ(ಜು. 06)  ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದ ಹಿರಿಯ ಅಣ್ಣನ ಕೊಲೆ ಮಾಡಿದ  20  ವರ್ಷದ ಯುವತಿ ಪೊಲೀಸರಿಗೆ ಶರಣಾಗಿದ್ದಾರೆ.

ಇತಾವ್ ಜಿಲ್ಲೆಯ ಕೋಟವಾಲಿ ಪೊಲೀಸ್ ಸ್ಟೇಶನ್ ಗೆ ಬಂದ ಯುವತಿ ಶರಣಾಗಿದ್ದಾರೆ. ಸಾತಿ ಮೊಹಲ್ಲಾದ  ಆರೋಪಿ ದೀಪಕ್ ರಜಪೂತ್ ತಂಗಿಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದ.

ವೇಶ್ಯಾವಾಟಿಕೆಗೆ ಹೆಣ್ಣು ಮಕ್ಕಳ ಸಾಗಾಟ; ಸಿಕ್ಕಾಕೊಂಡ ಟ್ರಂಪ್  ಗೆಳಯನ ಗೆಳತಿ

ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದ ದೀಪಕ್ ತನ್ನ ತಂಗಿಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಇದನ್ನು ತಡೆದ ತಂಗಿ ಆತನ ಮೇಲೆ ಕುಡುಗೋಲಿನಿಂದ ದಾಳಿ ಮಾಡಿದ್ದಾಳೆ. ಪೋಷಕರು ಈ ವೇಳೆ ಮನೆಯಲ್ಲಿ ಇರಲಿಲ್ಲ.

ಅಣ್ಣನನ್ನು ಕೊಂದ ತಂಗಿ ಹತ್ತಿರದ ಪೊಲೀಸ್ ಠಾಣೆಗೆ ನೇರವಾಗಿ ನಡೆದಿದ್ದಾರೆ.  ಆರೋಪಿಯನ್ನು ಬಂಧಿಸಲಾಗಿದೆ. ವಿಚಿತ್ರ ಎಂದರೆ ಮಗಳು ಮಗನ ಮೇಲೆ ಮಾಡಿರುವ ಆರೋಪವನ್ನು ಪಾಲಕರು ತಳ್ಳಿಹಾಕಿದ್ದಾರೆ.