Asianet Suvarna News Asianet Suvarna News

ಮಗಳ ಮೇಲೆ ತಂದೆ ಸೇರಿ 28 ಜನರಿಂದ ಅತ್ಯಾಚಾರ!

* ಉತ್ತರಪ್ರದೇಶದಲ್ಲೊಂದು ಭೀಕರ ಘಟನೆ

* ಮಗಳ ಮೇಲೆ ತಂದೆ ಸೇರಿ 28 ಜನರಿಂದ ಅತ್ಯಾಚಾರ

* ಪ್ರಕರಣದಲ್ಲಿ ಅಪ್ಪ ಸೇರಿ 28 ಜನ ಅರೆಸ್ಟ್‌

UP man rapes daughter forces her to have sexual relation with others 28 booked pod
Author
Bangalore, First Published Oct 14, 2021, 8:06 AM IST
  • Facebook
  • Twitter
  • Whatsapp

ಲಲಿತ್‌ಪುರ್‌(ಅ.14): ಮಗಳ ಮೇಲೆ ಅಪ್ಪನೇ ಅತ್ಯಾಚಾರ(Rape) ನಡೆಸಿದ್ದೂ, ಅಲ್ಲದೆ ತನ್ನ ಉದ್ಯಮ ಸಂಬಂಧಿ ಪರಿಚಯಸ್ಥ ಇತರೆ 27 ಜನರಿಗೂ ಮಗಳ(Daughter) ಮೇಲೆ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ಹೇಯ ಘಟನೆಯೊಂದು ಉತ್ತರಪ್ರದೇಶದ(Uttarpradesh) ಲಲಿತ್‌ಪುರ ಜಿಲ್ಲೆಯಲ್ಲಿ9lalitpur District) ನಡೆದಿದೆ. ಪ್ರಕರಣ ಸಂಬಂಧ 11ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ನೀಡಿದ ದೂರಿನ ಮೇರೆಗೆ ಇದೀಗ ಆಕೆಯ ತಂದೆ ಸೇರಿದಂತೆ ಅತ್ಯಾಚಾರ ಎಸಗಿದ್ದ 28 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಎಸ್‌ಪಿ, ಬಿಎಸ್‌ಪಿ ಪಕ್ಷದ ಹಲವು ನಾಯಕರು ಕೂಡಾ ಸೇರಿದ್ದಾರೆ ಎಂಬುದು ನಾಚಿಕೆಗೇಡಿನ ಸಂಗತಿ.

ಬಾಲಕಿ ಹೇಳಿದ್ದೇನು?:

ನಾನು 6ನೇ ತರಗತಿ ಓದುತ್ತಿದ್ದಾಗ ಮೊದಲ ಬಾರಿ ನನ್ನ ತಂದೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕವೂ ಹಲವು ಬಾರಿ ನನಗೆ ಲೈಂಗಿಕ ಕಿರುಕುಳ(Sexual harassment) ನೀಡಿದ್ದರು. ಜೊತೆಗೆ ತಮ್ಮ ಉದ್ಯಮ ಸಂಬಂಧ ತಂದೆ ಹಲವರನ್ನು ಮನೆಗೆ ಬರಲು ಹೇಳುತ್ತಿದ್ದರು. ಹೀಗೆ ಬಂದವರಿಗೂ ನನ್ನ ಮೇಲೆ ಅತ್ಯಾಚಾರವೆಸಗಲು ಅವಕಾಶ ಕೊಡುತ್ತಿದ್ದರು. ಈ ವಿಷಯ ತಿಳಿಸಿದರೆ ನನ್ನ ತಾಯಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಜೊತೆಗೆ ತನ್ನ ಮೇಲೆ ತನ್ನ ತಂದೆ, ಸಮಾಜವಾದಿ ಪಕ್ಷ ಜಿಲ್ಲಾಧ್ಯಕ್ಷ ತಿಲಕ್‌ ಯಾದವ್‌, ಆತನ ಮೂವರು ಸೋದರರು, ಬಿಎಸ್‌ಪಿ ಜಿಲ್ಲಾಧ್ಯಕ್ಷ ದೀಪಕ್‌ ಅಹಿರ್‌ವಾರ್‌, ಬೆಸ್‌ಪಿ ಉಪಾಧ್ಯಕ್ಷ ನೀರತ್‌ ತಿವಾರಿ ಮತ್ತು ಆತನ ಕುಟುಂಬ ಸದಸ್ಯರು ಸೇರಿದ್ದಾರೆ. ಬಳಿಕ ಈಕೆ ನೀಡಿದ ದೂರಿನ ಅನ್ವಯ ಆಕೆಯ ತಂದೆ ಸೇರಿದಂತೆ 28 ಜನರನ್ನು ಬಂಧಿಸಿದ್ದು, ಅವರ ವಿರುದ್ಧ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

15ರ ವಿದ್ಯಾರ್ಥಿ ಜತೆ 41ರ ಶಿಕ್ಷಕಿ ಕಾಮದಾಟ

 

ವಿದ್ಯಾರ್ಥಿ(Student) ಜತೆ ಕಾಮದಾಟ (sexual relationship) ಆಡಿದ ಶಿಕ್ಷಕಿಯನ್ನು ಬಂಧಿಸಲಾಗಿದೆ.  ಶಿಕ್ಕಿ ಹೆಸರು ಹ್ಯಾರಿ ಕ್ಲಾವಿ. 41 ವರ್ಷ ಈಕೆ 15 ವರ್ಷ ವಯಸ್ಸಿನ ವಿದ್ಯಾರ್ಥಿ ಜೊತೆಗೆ ಕಾಮದಾಟ ಆಡಿದ್ದಾಳೆ ಶಿಕ್ಷಕಿ ಮತ್ತು ವಿದ್ಯಾರ್ಥಿ  ಖಾಸಗಿ ಕ್ಷಣಗಳನ್ನು ಕಳೆದಿರುವ ದೃಶ್ಯಗಳು ಲಭ್ಯವಾಗಿವೆ ಎನ್ನಲಾಗಿದೆ. ಶಿಕ್ಷಕಿಯ ಬಳಿ ಗನ್ ಸಹ ಪತ್ತೆಯಾಗಿದೆ.

ಈಜುಕೋಳದಲ್ಲಿ ಮಹಿಳಾ ಪೇದೆ ಜತೆ ಜಗತ್ತನ್ನೇ ಮರೆತ ಡಿಎಸ್‌ಪಿ

ಬಾಲಕನ ಮೇಲೆ ಆಕೆ ಅತ್ಯಾಚಾರ ಮಾಡಿದ್ದಾಳೆ ಎನ್ನಲು ಸಾಧ್ಯವಿಲ್ಲ. ಇದು ಒಪ್ಪಿತ ಕ್ರಿಯೆಯೇ ಆಗಿರಬಹುದು ಆದರೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕಿ ಈಗ  8 ತಿಂಗಳ ಗರ್ಭಿಣಿ.  ಮಹಿಳೆಯನ್ನು ಕೆಲಸಿದಿಂದ ವಜಾ ಮಾಡಲಾಗಿದೆ. 

ಬಾಲಕ ತಾನು ಟೀಚರ್ ಜತೆ ಸೆಕ್ಸ್ ಮಾಡುತ್ತಿರುವ ವಿಡಿಯೋವನ್ನು ಗೆಳೆಯರಿಗೆ ತೋರಿಸಿದ್ದಾನೆ. ಈ ಕಾರಣದಿಂದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿಗೆ ಯಾವ ಆಧಾರಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನುವ ತಲೆಬಿಸಿಯೂ ಉಂಟಾಗಿದೆ. ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿದ ಆರೋಪ ಸಹ ಹ್ಯಾರಿ ಕ್ಲಾವಿ ಮೇಲೆ ಇದೆ. 

Follow Us:
Download App:
  • android
  • ios