ಲಕ್ನೋ(ನ. 01) ಉತ್ತರ ಪ್ರದೇಶದಿಂದ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ವರಿಯಾಗಿದೆ.  ಅವಿವಾಹಿತ ಗರ್ಭಿಣಿ ಬಾಲಕಿಯನ್ನು ಆಕೆಯ ಪೋಷಕರು ಕೊಲೆ ಮಾಡಿ ರೈಲ್ವೆ ಹಳಿಯ ಮೇಲೆ ಎಸೆದಿದ್ದಾರೆ.

ಅಕ್ಟೋಬರ್ 25 ರಂದು ನವಾಬ್‌ಗಂಜ್ ಪೊಲೀಸ್ ಠಾಣೆ ವೇಳೆ  ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಆಕೆಯ ಗುರುತು ಪತ್ತೆ ಹಚ್ಚಲು ಯತ್ನ ಮಾಡುತ್ತಿದ್ದಾಗ  ಕಿಶುಂದಸ್‌ಪುರ ಗ್ರಾಮದ ನಿವಾಸಿ ಕಮಲೇಶ್ ಕುಮಾರ್ ಯಾದವ್ ತನ್ನ ಮಗಳು ಎಂದು ಹೇಳಿದ್ದಾರೆ.  ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ.

ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮುಟ್ಟಬಾರದ ಜಾಗದಲ್ಲಿ ಮುಟ್ಟಿದರು!

ಇಪ್ಪತ್ತು ವರ್ಷದ ಮಗಳು ಗರ್ಭ ಧರಿಸಿದ್ದಳು. ಮದುವೆಯಾಗದೆ ಹೀಗೆಲ್ಲ ಮಾಡಿಕೊಂಡಿದ್ದ ಕಾರಣ ಏನು ಮಾಡಲು ತೋಚದೆ ಮಗಳನ್ನೇ ಹತ್ಯೆ ಮಾಡಿದ್ದೇವೆ ಎಂದು ತಂದೆ ತಾಯಿ ಒಪ್ಪಿಕೊಂಡಿದ್ದಾರೆ.

ಮಗಳೊಂದಿಗೆ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿ ಯಾರು ಎಂಬುದನ್ನು ಬಹಿರಂಗ ಪಡಿಸಲು ಪೋಷಕರು ಒಪ್ಪಿಲ್ಲ.  ಮಗಳಿಗೆ ಆರೋಗ್ಯ ಸರಿ ಇರಲಿಲ್ಲ, ಈ ವೇಳೆ ಶಾಕ್ ಟ್ರೀಟ್ ಮೆಂಟ್ ಸಹ ನೀಡಿಸಿದ್ದೇವೆ ಎಂಬ ವಿಚಾರವನ್ನು ಹೇಳಿದ್ದಾರೆ.