ಲಕ್ನೋ ಶಾಕಿಂಗ್; ತನ್ನ ಕ್ಲಾಸ್ ಮೇಟ್‌ನನ್ನೇ ಗುಂಡಿಟ್ಟು ಹತ್ಯೆ ಮಾಡಿದ ಬಾಲಕ
ತನ್ನ ಕ್ಲಾಸ್ ಮೇಟ್ ಶೂಟ್ ಮಾಡಿದ ವಿದ್ಯಾರ್ಥಿ/ ಗುಂಡಿಟ್ಟು ಹತ್ಯೆ ಮಾಡಿದ/ ಕುಳಿತುಕೊಳ್ಳುವ ಜಾಗದ ವಿಚಾರದಲ್ಲಿ ಜಟಾಪಟಿ/ ಸೈನ್ಯದಲ್ಲಿದ್ದ ಚಿಕ್ಕಪ್ಪನ ಗನ್ ತಂದು ಶೂಟ್ ಮಾಡಿದ
ಲಕ್ನೋ (ಡಿ. 31) ಮಕ್ಕಳ ನಡುವಿನ ಕ್ಷುಲ್ಲಕ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಕುಳಿತುಕೊಳ್ಳುವ ಜಾಗದ ವಿಚಾರದಲ್ಲಿ ಉಂಟಾದ ಜಗಳದಲ್ಲಿ 10 ನೇ ತರಗತಿಯ ವಿದ್ಯಾರ್ಥಿಯು ಇನ್ನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾನೆ. ಕಿತ್ತಾಟ ಮಾಡಿಕೊಂಡ ಇಬ್ಬರೂ 14 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಇಬ್ಬರ ನಡುವೆ ಜಗಳವಾಗಿತ್ತು. ಗುರುವಾರ ತನ್ನ ಚಿಕ್ಕಪ್ಪನ ಗನ್ ತೆಗೆದುಕೊಂಡು ಬುಲಂದೇಶ್ವರ ಜಿಲ್ಲೆಯ ಶಾಲೆಗೆ ಬಂದ ವಿದ್ಯಾರ್ಥಿಯೊಬ್ಬ ಇನ್ನೊಬ್ಬನನ್ನು ಶೂಟ್ ಮಾಡಿದ್ದಾನೆ.
ಆಂಟಿ ಹಿಂದೆ ಹೊರಟ... ಮಾರ್ಕೆಟ್ ನಲ್ಲೇ ಹೆಣ ಬಿತ್ತು
ಸೇನೆಯಲ್ಲಿರುವ ಚಿಕ್ಕಪ್ಪ ಮನೆಗೆ ಬಂದಿದ್ದು ಅವರು ಗನ್ ತಂದಿರುವುದನ್ನು ವಿದ್ಯಾರ್ಥಿ ನೋಡಿದ್ದಾನೆ. ಗುರುವಾರ ಅದನ್ನು ಶಾಲೆಗೆ ತೆಗೆದುಕೊಂಡು ಬಂದಿದ್ದಾನೆ. ಶೂಟ್ ಮಾಡಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆದರೆ ಇದೆಲ್ಲದಕ್ಕಿಂತ ವಿಚಿತ್ರ ಎಂದರೆ ಹುಡುಗನ ಬ್ಯಾಗ್ ನಲ್ಲಿ ಮತ್ತೊಂದು ಕಂಟ್ರಿ ಮೇಡ್ ಪಿಸ್ತೂಲ್ ಪತ್ತೆಯಾಗಿದೆ. ಎದುರಿನ ವಿದ್ಯಾರ್ಥು ತಲೆ. ಎದೆ ಮತ್ತು ಹೊಟ್ಟೆ ಮೇಲೆ ಮೂರು ಸಾರಿ ಒಬ್ಬ ಗುಂಡು ಹಾರಿಸಿದ್ದು ಆತ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದಾನೆ.
ಅಮೆರಿಕದಲ್ಲಿ ಮಾತ್ರ ಇಂಥ ಪ್ರಕರಣಗಳು ವರದಿಯಾಗುತ್ತಿದ್ದವು. ಭಾರತದಲ್ಲಿಯೂ ವರದಿಯಾಗಿದ್ದು ಆತಂಕಕ್ಕೆ ಕಾರಣವಾಗಿದ್ದು ಮಕ್ಕಳ ಮನಸ್ಥಿತಿ ಅಧ್ಯಯನ ಮುಖ್ಯ ಎಂದು ತಜ್ಞರು ಹೇಳಿದ್ದಾರೆ.