ಮೀರತ್(ಎ.03): 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಗುರುವಾರ(ಎ.01)ರಂದು ನಾಲ್ವರು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಘಟನೆ ಬೆಳೆಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮೀರತ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣ ಪೊಲೀಸರು ಗುಂಡಿನ ಮೂಲಕ ಉತ್ತರ ನೀಡಿದ್ದಾರೆ.

ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದಾಕೆಯ ಅತ್ಯಾಚಾರ: ನೇಣಿಗೆ ಶರಣಾದ ಬಾಲಕಿ!

ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಲಖನ್ ಹಾಗೂ ವಿಕಾಸ್ ಎಂಬ ಇಬ್ಬರನ್ನು ನಿನ್ನೆ(ಎ.02) ಬಂಧಿಸಲಾಗಿತ್ತು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಪೊಲೀಸರ ಪಿಸ್ತೂಲ್ ಕಸಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಫೈರಿಂಗ್ ಮಾಡುತ್ತಾ ಓಡಿದ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಒರ್ವ ಆರೋಪಿಗೆ ಕಾಲಿಗೆ ಗುಂಡು ತಗುಲಿದೆ.

ಪೊಲೀಸರ ತಕ್ಷಣವೇ ಕಾರ್ಯಪ್ರವೃತ್ತರಾದ ಕಾರಣ ಇಬ್ಬರು ಆರೋಪಿಗಳನ್ನು ಮತ್ತೆ ಹಿಡಿದ್ದಾರೆ. ಇದೀಗ ಪೊಲೀಸ ಪಿಸ್ತೂಲ್ ಕಸಿದು ಫೈರಿಂಗ್ ಮಾಡುತ್ತಾ ಓಡಿದ ಲಖನ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಇದೀಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊಮ್ಮಗಳಿಗೆ ಬಂದ ಅದೊಂದು ಅನುಮಾನ, ತಾತನನ್ನೇ ಕೊಂದಿದ್ದ ಮೊಮ್ಮಗ!

ಎಪ್ರಿಲ್ 1 ರಂದು 3.30ರ ವೇಳೆ ಮನೆಯಿಂದ ಟ್ಯೂಶನ್ ಕ್ಲಾಸ್‌ಗೆ ಹೊರಟ ವಿದ್ಯಾರ್ಥಿನಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಗೆ ವಿಷ ಕುಡಿಸಲು ಯತ್ನಿಸಿದ್ದರು. 5.30ಕ್ಕೆ ಮನೆಗೆ ಬಂದ ವಿದ್ಯಾರ್ಥಿನಿ ನಡೆದ ಘಟನೆಯನ್ನು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್‌ನೋಟ್‌ನಲ್ಲಿ ಟ್ಯೂಶನ್ ಕ್ಲಾಸ್‌ಗೆ ಬರುತ್ತಿದ್ದ ಲಖನ್ ಹೆಸರನ್ನು ದಾಖಲಿಸಿದ್ದಾಳೆ. ಈ ಘಟನೆ ಬಳಿಕ ವಿರೋಧ ಪಕ್ಷಗಳು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಮುಗಿಬಿದ್ದಿವೆ. ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ಮಹಿಳೆಯರು, ಬಾಲಕಿಯರು, ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದ್ದಾರೆ. ಇದು ಒಂದರ ಮೇಲೊಂದರಂತೆ ಈ ರೀತಿಯ ಘಟನೆಗಳು ಇದೀಗ ಯುಪಿ ಸರ್ಕಾರಕ್ಕೆ ತೀವ್ರ ತಲೆನೋವು ತಂದಿದೆ.