ಲಕ್ನೋ[ಡಿ.05]: ಭಾರತದಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ದೇಶ ಹೆಣ್ಮಕ್ಕಳ್ಳಿಗೆ ಸೇಫ್ ಅಲ್ಲ ಎಂಬ ಧ್ವನಿ ಜೋರಾಗಿದೆ. ರೇಪ್ ಅರೋಪಿಗಳಿಗೆ ಗಲ್ಲುಶಿಕ್ಷೆ ನೀಡಿ ಎಂಬ ಕೂಗು, ಪ್ರತಿಭಟನೆಗಳು ದೇಶದಾದ್ಯಂತ ನಡೆಯುತ್ತಿವೆ. ಹೀಗಿದ್ದರೂ ಹೆಣ್ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಾತ್ರ ಮುಂದುವರೆದಿವೆ. ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ ಬೇಲ್ ಪಡೆದು ಹೊರ ಬಂದ ಆರೋಪಿಗಳು ಉನ್ನಾವೋ ರೇಪ್ ಸಂಸತ್ರಸ್ತೆಯನ್ನು ಸುಟ್ಟಾಕಿರುವ ಸುದ್ದಿ ಸದ್ದು ಮಾಡಿದೆ.

ಹೌದು ಕಾಮುಕರ ಅಟ್ಟಹಾಸ ಮಿತಿ ಮೀರಿದೆ. ಅತ್ಯಾ ಚಾರ ನಡೆಸಿ ಜೈಲು ಪಾಲಾಗಿದ್ದ ಉನ್ನಾವೋ ರೇಪ್ ಕೇಸ್ ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರ ಬಂದಿದ್ದಲ್ಲದೇ, ಪಾರಾದ ಸಂತ್ರಸ್ತೆಗೆ ಬೆಂಕಿ ಹಚ್ಚಿ ಕೊಲ್ಲುವ ಯತ್ನ ನಡೆಸಿದ್ದಾರೆ. ಈ ಘಟನೆಯಲ್ಲಿ ಯುವತಿ ದೇಹ ಶೇ. 90ರಷ್ಟು ಸುಟ್ಟುಕೊಂಡಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ದೇಶದೆಲ್ಲೆಡೆ ಸದ್ದು ಮಾಡುತ್ತಿವೆ ಅತ್ಯಾಚಾರ ಪ್ರಕರಣಗಳು: ಒಂದು ಕ್ಲಿಕ್ ಹಲವು ಸುದ್ದಿ

ಕಳೆದ ಮಾರ್ಚ್ ನಲ್ಲಿ ಉತ್ತರ ಪ್ರದೇಶದ ಉನ್ನಾವೋದಲ್ಲಿ 20 ವರ್ಷದ ಯುವತಿ ಮೇಲೆ ಐವರು ಕಾಮುಕರು ಅತ್ಯಾಚಾರ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಅದೃಷ್ಟವಶಾತ್ ಪಾರಾಗಿದ್ದಳು. ಪ್ರಕರಣ ಭೇದಿಸಿದ್ದ ಪೊಲೀಸರು ಅತ್ಯಾಚಾರದಲ್ಲಿ ಪಾಲ್ಗೊಂಡಿದ್ದ  ಆರೋಪಿಗಳನ್ನು ಹುಡುಕಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. 

ಆದರೆ ಈ ಆರೋಪಿಗಳು ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಹೊರ ಬಂದ ಬೆನ್ನಲ್ಲೇ ಅತ್ಯಾಚಾರ ಸಂಸತ್ರಸ್ತೆ ಮೇಲೆ ಭೀಕರ ದಾಳಿ ನಡೆದಿದೆ. ಅತ್ಯಾಚಾರ ಆರೋಪಿಗಳು ತನ್ನ ಗೆಳೆಯರ ಜೊತೆಗೂಡಿ ಸಂತ್ರಸ್ತೆಯನ್ನು ಆಕೆಯ ಮನೆಯಿಂದ ಪಹರಿಸಿ, ಹಳ್ಳಿಯ ಹೊರ ಪ್ರದೇಶಕ್ಕೆ ಒಯ್ದಿದ್ದಾರೆ. ಬಳಿಕ ಅಲ್ಲಿನ ಹೊಲದಲ್ಲಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯುವತಿಯನ್ನು ಪರಿಶೀಲಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಲಕ್ನೋ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.

ಅತ್ಯಾಚಾರ ಪ್ರಕರಣದಳ ಸದ್ದು: ದೇಶದಾದ್ಯಂತ ಪ್ರತಿಭಟನೆಯ ಕಾವು

ಪ್ರಕರಣದ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು 'ಸಂತ್ರಸ್ತ ಯುವತಿಯನ್ನು ಹೆಚ್ಚಿನ ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಇಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ. ಈ ಹಿಂದೆ ಸಂತ್ರಸ್ತೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ಅವರು ದೂರು ನೀಡಿದ್ದ ಆರೋಪಿಗಳಲ್ಲಿ ಒಬ್ಬಾತ, ಬೆಂಕಿ ಹಚ್ಚಿದ ಪ್ರಕರಣದಲ್ಲೂ ಪಾಲ್ಗೊಂಡಿದ್ದಾನೆ' ಎಂದಿದ್ದಾರೆ. ಇನ್ನು ಈ ಐವರು ಆರೋಪಿಗಳಲ್ಲಿ ಒಬ್ಬಾತ ಹಳ್ಳಿಯ ನಾಯಕನ ಮಗ ಎನ್ನಲಾಗಿದೆ.