ಬೆಳಗಾವಿ(ಜ.19): ಅಪರಿಚಿತ ದುಷ್ಕರ್ಮಿಗಳು ದಂಪತಿ, ಪುತ್ರನನ್ನ ಬರ್ಬವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ತಾಲೂಕು ಪಂಚಾಯತಿ ಮಾಜಿ ಸದಸ್ಯ ಶಿವಾನಂದ ಅಂದಾನ ಶೆಟ್ಟಿ, ಶಾಂತವ್ವಾ ಪುತ್ರ ವಿನೋದ್ ಅಂದಾನ ಶೆಟ್ಟಿ ಕೊಲೆಯಾದವರಾಗಿದ್ದಾರೆ. 

ಶನಿವಾರ ರಾತ್ರಿ ಮನೆಗೆ ನುಗ್ಗಿದ ಹಂತಕರು ಶಿವಾನಂದ ಅಂದಾನ ಶೆಟ್ಟಿ, ಶಾಂತವ್ವಾ ಪುತ್ರ ವಿನೋದ್ ಅಂದಾನ ಶೆಟ್ಟಿಯನ್ನ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಒಂದೇ ಮನೆಯಲ್ಲಿ ಮೂರು ಜನರನ್ನ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆಯ ಸುದ್ದಿ ಕೇಳಿದ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ.