ಧಾರವಾಡ: ಅಪ್ರಾಪ್ತಳ ಮೇಲೆ ಅತ್ಯಾಚಾರ

*  ಇಬ್ಬರು ಆರೋಪಿಗಳ ಬಂಧನ
*  ತಡವಾಗಿ ಬೆಳಕಿಗೆ ಬಂದ ಪ್ರಕರಣ 
*  ಈ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

Two Arrested for Rape on Minor Girl in Dharwad grg

ಧಾರವಾಡ(ಆ.29): ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಧಾರವಾಡದಲ್ಲೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

"

ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ನೆಹರು ನಗರದ ಶ್ರೀನಿವಾಸ ಮತ್ತು ಗಣೇಶ ನಗರದ ಫಯೂಮ್‌ ಎಂಬುವರು ಬಂಧಿತ ಆರೋಪಿಗಳು.

2 ವರ್ಷದಲ್ಲಿ ರಾಜ್ಯದಲ್ಲಿ 1,136 ಅತ್ಯಾಚಾರ ಪ್ರಕರಣ

ಅಪ್ರಾಪ್ತಳು ಕೂಡಾ ಧಾರವಾಡ ನಗರದ ನಿವಾಸಿಯಾಗಿದ್ದು, ಈ ಇಬ್ಬರು ಆರೋಪಿಗಳು ಬಾಲಕಿಯನ್ನು ಪುಸಲಾಯಿಸಿ, ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಬಹಳ ದಿನಗಳ ಹಿಂದೆಯೇ ನಡೆದಿತ್ತು. ಬಾಲಕಿ ತನಗಾದ ಅನ್ಯಾಯ ಕುರಿತು ತಡವಾಗಿ ಮಾಹಿತಿ ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಅತ್ಯಾಚಾರ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಈ ಕುರಿತಂತೆ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios