ಕೋಲ್ಕತ್ತಾ(ಸೆ. 09)  ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಸಹೋದರಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ. ನೊಂದ ಬಾಲಕಿಯರು ವಿಷ ಸೇವಿಸಿದ್ದು ಒಬ್ಬಳು ಅಸುನೀಗಿದ್ದರೆ ಇನ್ನೊಬ್ಬಳು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ.

ಅತ್ಯಾಚಾರವಾದ ನಂತರ 14 ಮತ್ತು 16 ವರ್ಷದ ಬಾಲಕಿಯರು ವಿಷ ಸೇವಿಸಿ ಮನೆಗೆ ಬಂದಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದು ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರ್ತಡೆ ಪಾರ್ಟಿಗೆ ಬಂದಿದ್ದ ಗೆಳತಿಯ ಮೇಲೆ ಎರಗಿದ ಕಾಮಾಂಧರು

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಕಳೆದ ಆಗಸ್ಟ್  20  ರಂದು ಇಂಥದ್ದೆ  ಒಂದು ಪ್ರಕರಣ ನಡೆದು ಹೋಗಿತ್ತು. 

ಸ್ನೇಹಿತರ ಮನೆಗೆ ತೆರಳಿತ್ತಿದ್ದ ಬಾಲಕಿಯನ್ನು ಬೈಕ್ ನಲ್ಲಿ ಬಂದ ಹೋಂ ಗಾರ್ಡ್ ಅಶೋಕ್ ಚಕ್ರವರ್ತಿ ಎಂಬಾತ ಸಹಾಯ ಮಾಡುವ ನೆಪದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ನಿರಂತರ ಇಪ್ಪತ್ತು ದಿನ ಅತ್ಯಾಚಾರ ಎಸಗಿದ್ದ.