ಕ್ರಿಟೆಂಡನ್ ಕೌಂಟಿ(ಮಾ.26): ಬರೋಬ್ಬರಿ 23 ವರ್ಷಗಳಲ್ಲಿ ತಾಯಿ ಹಾಗೂ ಮಗಳನ್ನು ಹಂತಕನೊಬ್ಬ ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ ಘಟನೆ ಅಮೆರಿಕಾದ ಕ್ರಿಟೆಂಡಡನ್ ಕೌಂಟಿ ನಗರದಲ್ಲಿ ನಡೆದಿದೆ.

ಸ್ಯಾಂಡಲ್‌ವುಡ್ ನಟನ ಹತ್ಯೆ ಮಾಡಿದ ನಿರ್ಮಾಪಕ ಗೋವರ್ಧನ ಮೂರ್ತಿಗೆ ಜೀವಾವಧಿ ಶಿಕ್ಷೆ..!

ಇದೀಗ ಬುಧವಾರ(ಮಾರ್ಚ್ 25) ಮಾರ್ಥಾ ಮೆಕೈ ಎಂಬಾಕೆ ಕೊಲೆಯಾಗಿದ್ದು, ಕೊಲೆಗಾರ 1996ರ ನೆವೆಂಬರ್‌ನಲ್ಲಿ ಆಕೆಯ ತಾಯಿಯನ್ನು ಹತ್ಯೆ ಮಾಡಿದ್ದ. ಭದ್ರತಾ ಪಡೆಯ ಅಧಿಕಾರಿಗಳನ್ನು ಕೊಲೆಗಾರ ಟ್ರಾವಿಸ್ ಲೆವಿಸ್‌ನನ್ನು ಹಿಡಿಯಲು ಯತ್ನಿಸಿದಾಗ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತು, ಮನೆಯ ಪಕ್ಕದಲ್ಲೇ ಇದ್ದ ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟ್ರಾವಿಸ್ ಲೆವಿಸ್‌ 2018ರಲ್ಲಿ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ.

ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಶರಣಾದ KSRP ಪೇದೆ

1996ರಲ್ಲಿ ಹಾರ್ಸ್‌ಹೋಯ್ ಲೇಕ್ ಸಮೀಪದ ಮನೆಯಲ್ಲಿ ಲೆವಿಸ್ ಸಾಲೈ ಮೆಕೈ ಹಾಗೂ ಜೋಸೆಫ್ ಲೀ ಬೇಕರ್ ಜೂನಿಯರ್ ವಾಸವಾಗಿದ್ದರು. ಈ ಸಂದರ್ಭದಲ್ಲಿ ಲೆವಿಸ್, ಸಾಲೈ ಮೆಕೈ ಎಂಬಾಕೆಯನ್ನು ಕೊಲೆ ಮಾಡಿದ್ದ. ಇದೀಗ ಆಕೆಯ ಮಗಳು ಮಾರ್ಥ ಮೆಕೈ ಅವರನ್ನು ಹತ್ಯೆ ಮಾಡಿದ್ದಾನೆ. ಇದರೊಂದಿಗೆ ಒಂದೇ ಮನೆಯಲ್ಲಿ ತಾಯಿ ಹಾಗೂ ಮಗಳ ಹತ್ಯ ಸಂಭವಿಸಿದ ಧಾರುಣ ಘಟನೆ ನಡೆದಿದೆ.
ಬುಧವಾರ ಏನೆಲ್ಲಾ ನಡೆಯಿತೋ ಅದು ಒಂದು ಹಾರರ್ ಸಿನಿಮಾದಂತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. 

ನಾವೆಲ್ಲಾ ಬಾಗಿಲನ್ನು ಹಾಕಿಕೊಂಡು ಕಿಡಕಿಯಲ್ಲಿ ನಿಂತು ಎಲ್ಲವೂ ಒಳ್ಳೆಯದಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೆವು. ಆದರೆ ಆ ಬಳಿಕ ನಡೆದ ಘಟನೆಗಳು ಭೀಕರವಾಗಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.