ಹುಕ್ಕೇರಿ(ಜು.29): ಪತ್ನಿ ತನ್ನನ್ನು ತೊರೆದು ತವರುಮನೆಗೆ ಹೋಗಿದ್ದಕ್ಕೆ ತೀವ್ರ ಮನ​ನೊಂದಿ​ರುವ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಸಂಭ​ವಿ​ಸಿದೆ. ಯಾದಗೂಡ ಗ್ರಾಮದ ತಮ್ಮಣ್ಣ ಮಾರುತಿ ಗಿಡ್ಡಾಳೆ (44), ನಿರಂಜನ (9), ಪ್ರತೀಕ್ಷಾ(2) ಮೃತಪಟ್ಟವರು.

ಹತ್ತು ವರ್ಷದ ಹಿಂದೆ ತಮ್ಮಣ್ಣ ಹಾಗೂ ರಾಜಶ್ರೀಯ ಮದುವೆಯಾಗಿತ್ತು. ರಾಜಶ್ರೀಯನ್ನು ಮನವೊಲಿಸಲು ತಮ್ಮಣ್ಣ ಸೋಮವಾರ ಆಕೆಯ ತವರುಮನೆ ಚಿಕ್ಕೋಡಿ ತಾಲೂಕಿನ ಮಾಂಗನೂರ ಗ್ರಾಮಕ್ಕೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ ಸಹಿತ ತವರು ಮನೆಯವರು ತಮ್ಮಣ್ಣನನ್ನು ನಿಂದಿಸಿ ಹಲ್ಲೆಯನ್ನೂ ಮಾಡಿದ್ದಾರೆ ಎನ್ನಲಾಗಿದೆ. 

ಹೆಂಡ್ತಿ ನಡ​ವ​ಳಿ​ಕೆ​ಯಿಂದ ಬೇಸತ್ತ ಗಂಡ: ಸೆಲ್ಫಿ ವಿಡಿಯೋ ಮಾಡಿ ತಂದೆ ಮಗಳು ನೇಣಿಗೆ ಶರ​ಣು

ಇದರಿಂದ ನೊಂದಿರುವ ಆತ ರಾತ್ರಿ ಯಾದಗೂಡದ ತಮ್ಮ ಮನೆಯಲ್ಲಿ ಇಬ್ಬರೂ ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.