ಚಿಕ್ಕಮಗಳೂರು(ಫೆ.  11)  ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಶೃಂಗೇರಿ ಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮಲೆನಾಡಿನಲ್ಲಿ ಹೇಯ ಕೃತ್ಯ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಸುದ್ದಿ ಹೊರಬಿದ್ದಿದ್ದು ಬಾಳೂರು ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಪ್ರಕರಣ ದಾಖಲಾಗಿದೆ.

ಶೃಂಗೇರಿ ಬಾಲಕಿ ಮೇಲೆ ಎರಗಿದ ಕಿರಾತಕರು...

ತಂಗಿ ಮೇಲೆ ಅಣ್ಣನಿಂದಲೇ ನಿರಂತರ ಅತ್ಯಾಚಾರ ಅರೋಪ ಕೇಳಿಬಂದಿದ್ದು ತಲೆ ತಗ್ಗಿಸುವಂತೆ ಮಾಡಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

13 ವರ್ಷದ ಬಾಲಕಿಯ ಮೇಲೆ‌ ನಿರಂತರ ಅತ್ಯಾಚಾರ ನಡೆಸಲಾಗಿದೆ. ಹೊಟ್ಟೆ ನೋವಿನಿಂದ ಅಪ್ರಾಪ್ತೆ ಬಳಲುತ್ತಿದ್ದು ಅಸ್ಪತ್ರೆಗೆ ಕರೆದೊಯ್ಯದಾಗ ಗರ್ಭಿಣಿ ಯಾಗಿರುವುದು ಬೆಳಕಿಗೆ ಬಂದಿದ್ದು  ತನಿಖೆ  ನಡೆಸಲಾಗುತ್ತಿದೆ.