'ಮಗಳ ತಂಟೆಗೆ ಹೋಗಬೇಡ' ಎಂದ ತಂದೆಯ ಕತೆ ಮುಗಿಸಿದ ಪಾತಕಿ!

Synopsis
ಬೆಂಗಳೂರಿನಲ್ಲಿ ಮಗಳ ಜೊತೆ ಅನುಚಿತ ವರ್ತನೆ ತೋರಿದ್ದಕ್ಕೆ ಎಚ್ಚರಿಕೆ ನೀಡಿದ್ದಕ್ಕೆ ಟಿಂಬರ್ ಅಂಗಡಿ ಮಾಲೀಕ ಸೈಯದ್ ಅಫ್ಜಲ್ ಹತ್ಯೆಗೀಡಾಗಿದ್ದಾರೆ. ಆರೋಪಿ ಸೂರ್ಯ ಪ್ರಕಾಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಏ.16): ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ನಗರದ ಔಟರ್ ರಿಂಗ್ ರೋಡ್‌ನಲ್ಲಿರುವ ಎಸ್ ಬಿ ಟಿಂಬರ್ ಅಂಗಡಿಯ ಮಾಲೀಕ ಸೈಯದ್ ಅಫ್ಜಲ್ (60) ಅವರನ್ನು ಹ ತ್ಯೆ ಮಾಡಿದ ಘಟನೆ ನಡೆದಿದೆ.
ಅಣ್ಣನ ಟಿಂಬರ್ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದ ಅಫ್ಜಲ್. ಆರೋಪಿಯನ್ನು ಇಲಿಯಾಸ್ ನಗರದ ನಿವಾಸಿ ಸೂರ್ಯ ಪ್ರಕಾಶ್ ಎಂದು ಗುರುತಿಸಲಾಗಿದ್ದು, ಪೊಲೀಸರು ಅವನನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಕಾರ, ಸೈಯದ್ ಅಫ್ಜಲ್ ಅವರು ತಮ್ಮ ಮಗಳ ಜೊತೆ ಸೂರ್ಯ ಪ್ರಕಾಶ್‌ನ ಅನುಚಿತ ವರ್ತನೆಯನ್ನು ಗಮನಿಸಿ, ಎರಡು-ಮೂರು ಬಾರಿ ಎಚ್ಚರಿಕೆ ನೀಡಿದ್ದರು. 'ಮಗಳ ತಂಟೆಗೆ ಹೋಗಬೇಡ' ಆರೋಪಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದ ಅಫ್ಜಲ್. ಆದರೆ ಅಪ್ಜಲ್ ಕೊಟ್ಟ ಎಚ್ಚರಿಕೆ ಆರೋಪಿಯ ಕೋಪಕ್ಕೆ ಕಾರಣವಾಯಿತು. ಇದರಿಂದ ಕೆರಳಿದ ಸೂರ್ಯ ಪ್ರಕಾಶ್, ಅಫ್ಜಲ್‌ರನ್ನು ಮುಗಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಮಲಗಿದ್ದ ಅಕ್ಕ, ತಾಯಿ-ತಂದೆಗೆ ಚಾಕು ಇರಿದ ಮಗ; ಕಾರಣ ತಿಳಿದ್ರೆ ಶಾಕ್ ಆಗ್ತೀರಿ!
ಸದ್ಯ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಆರೋಪಿ ಸೂರ್ಯ ಪ್ರಕಾಶ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಕೊಲೆಗೆ ನಿಖರ ಕಾರಣ ಮತ್ತು ಸಂದರ್ಭಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.