ಪಾಟ್ನಾ( ಜ.  13) ಬಿಹಾರದಿಂದ ಕ್ರೂರ ಘಟನೆಯೊಂದು ವರದಿಯಾಗಿದೆ. ಬಿಹಾರದ ಮಧುಬನಿ ಜಿಲ್ಲೆಯಲ್ಲಿ 15 ವರ್ಷದ ಕಿವುಡ ಮತ್ತು ಮೂಕ ಬಾಲಕಿ ಮೇಲೆ ದುರುಳರು  ಸಾಮೂಹಿಕ ಅತ್ಯಾಚಾರ ಮಾಡಿದ್ದು ಆಕೆಯ ಕಣ್ಣುಗಳಿಗೂ ಹಾನಿ  ಮಾಡಿದ್ದಾರೆ.

ಹರಿತವಾದ ವಸ್ತುವಿನಿಂದ ಆಕೆಯ ಕಣ್ಣುಗಳಿಗೆ ಚುಚ್ಚಲಾಗಿದೆ.  ಎರಡು ಕಣ್ಣುಗಳಿಗೂ ಹಾನಿಯಾಗಿದ್ದು, ಆದರೆ ಆಕೆಯ ಸ್ಥಿತಿ ಗಂಭೀರವಾಗಿದೆ.

ಮೇಕೆಯನ್ನು ಮೇವಿಗೆ ಬಿಡಲಾಗಿದ್ದು ಅವುಗಳನ್ನು ಕರೆತರಲು ಹೋದಾಗ ಕಿತಾರಕರು ಕ್ರೌರ್ಯ ಮೆರೆದಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳೆಲ್ಲರೂ ಕೌಹುವಾ ದ ಬಾರ್ಹಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾ ಸಚಿವನ ಮೇಲೆಯೇ ದೌರ್ಜನ್ಯದ ದೂರು ಕೊಟ್ಟ ಖ್ಯಾತ ಗಾಯಕಿ

ಬಾಲಕಿ ಜತೆ ತೆರಳಿದ್ದಮಗುವೊಂದು ಊರಿಗೆ ಬಂದು ವಿಷಯ ತಿಳಿಸಿದ್ದಾಳೆ. ದುರುಳರ ಅತ್ಯಾಚಾರದ ನಂತರ ಬಾಲಕಿಮನೋಹರಪುರ ಗ್ರಾಮದ ಹೊಲದಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು, ನಂತರ ವೈದ್ಯರ ಸಲಹೆ ಮೇರೆಗೆ ಮಧುಬನಿ ಸಾದಾರ್ ಆಸ್ಪತ್ರೆಗೆ ಆಕೆಯನ್ನು ಶಿಫ್ಟ್ ಮಾಡಲಾಗಿದ್ದು  ಚಿಕಿತ್ಸೆ ನೀಡಲಾಗುತ್ತಿದೆ.