ಆನೇಕಲ್‌(ಅ.07): ಹಳೇ ದ್ವೇಷದ ಹಿನ್ನೆಲೆಯಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಚೆನ್ನಾಗಿ ಕುಡಿಸಿ ರೌಡಿಶೀಟರ್‌ವೊಬ್ಬನನ್ನು ಆತನ ಸಹಚರರೇ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಅರಹಳ್ಳಿಯ ರಾಗಿ ಹೊಲದಲ್ಲಿ ನಡೆದಿದೆ.

ಅತ್ತಿಬೆಲೆಯ ಶ್ರೀಕಾಂತ್‌ ಕೊಲೆಯಾದ ರೌಡಿಶೀಟರ್‌. ಶ್ರೀಕಾಂತ್‌ ತನ್ನದೇ ಗುಂಪು ಕಟ್ಟಿಕೊಂಡು ಅತ್ತಿಬೆಲೆ ಹಾಗೂ ಸುತ್ತ-ಮುತ್ತಲ ಪ್ರದೇಶದಲ್ಲಿ ಹವಾ ಸೃಷ್ಟಿಸಿದ್ದ ಎನ್ನಲಾಗಿದೆ.

ಇಬ್ಬರು ಹೆಂಡಿರು ಆದರೂ ವಿರಹ ವೇದನೆ...ಬೆಳಗಾವಿ ಜೋಡಿ ಕೊಲೆ ರಹಸ್ಯ!

ಭಾನುವಾರ ರಾತ್ರಿ ಮನೆಯಲ್ಲಿದ್ದ ಶ್ರೀಕಾಂತನನ್ನು ಪಾರ್ಟಿ ಮಾಡಲೆಂದು ಆತನ ಸಹಚರರೇ ಫೋನ್‌ ಮಾಡಿ ಕರೆಸಿಕೊಂಡು, ಈ ಕೃತ್ಯ ಎಸಗಿದ್ದಾರೆ ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ. ಇತ್ತೀಚೆಗೆ ಶ್ರೀಕಾಂತ್‌ ಹಾಗೂ ಸಹಚರರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.